981ಮರಣವೇ ನಿನ್ನ ಜಯವೆಲ್ಲಿ ? ಮರಣವೇ ನಿನ್ನ ವಿಷದ ಕೊಂಡಿ ಎಲ್ಲಿ ? ಎಂದು ನಾನು ಜಯೋತ್ಸವ ಧ್ವನಿಗೈಯುವೆ. 1ಕೊರಿ 15:55
982ನಾನು ಕ್ರಿಸ್ತನಲ್ಲಿ ಯೌವನಸ್ಥನಾಗಿದ್ದು, ಕೆಟ್ಟದ್ದನ್ನು ಜೈಯಿಸಿ ಜಯವನ್ನು ಹೊಂದುವೆನು. 1ಯೋಹಾ. 2:10
983ನಾನು ದೇವರಿಂದ ಹುಟ್ಟಿದವನಾಗಿದ್ದು, ಅಂಧಕಾರದ ಆತ್ಮಗಳನ್ನು ಜಯಿಸುವೆನು. ಲೋಕದಲ್ಲಿರುವಾತನಿಗಿಂತ ನಿಮ್ಮಲ್ಲಿರುವಾತನು ಹೆಚ್ಚಿನವನಾಗಿರುವನು. 1ಯೋಹಾ 4:4
984ನನಗೆ ವಿರೋಧವಾಗಿ ಒಂದು ದಂಡು ಬಂದಿಳಿದರೂ, ನನ್ನ ಹೃದಯ ಭಯಪಡುವುದಿಲ್ಲ. ನನ್ನ ಮೇಲೆ ಯುದ್ಧಗಳು ಬಂದರೂ ಕರ್ತನ ಮೇಲೆ ನಾನು ನಂಬಿಕೆಯಿಂದಿದ್ದೇನೆ. ಕೀರ್ತ. 27:3
985ಒಂದು ದಾರಿಯಿಂದ ನನಗೆ ವಿರೋಧವಾಗಿ ಎದ್ದು ಬರುವರು. ಅವರು ಏಳು ಮಾರ್ಗವಾಗಿ ನನ್ನ ಮುಂಭಾಗದಲ್ಲಿ ಓಡಿ ಹೋಗುವರು. ಧರ್ಮೋ.28:7
986ನನಗೆ ವಿರೋಧ ಎಬ್ಬಿಸಲ್ಪಟ್ಟ ಎಂಥ ಆಯುಧವು ಜಯಿಸದು. ನನಗೆ ವಿರೋಧವಾಗಿ ನ್ಯಾಯ ವಿಚಾರಣೆಯಲ್ಲಿ ಏಳುವ ಎಂಥ ನಾಲಿಗೆಯನ್ನು ನಾನು ದೋಷಿಯೆಂದು ನಿರ್ಣಯಿಸುವುದಿಲ್ಲ. ಯೆಶಾ. 54:17
987ಯಾಕೋಬ್ಯರಲ್ಲಿ ಶಕುನ ನೋಡುವುದಿಲ್ಲ. ಇಸ್ರಾಯೇಲ್ಯರಲ್ಲಿ ಕಣ ಕೇಳುವುದಿಲ್ಲ. ಆದುರಿಂದಲೇ ಎಂಥ ಮಂತ್ರ-ತಂತ್ರ ಮಾಡುವ ಪಂಡಿತನೇ ಆಗಲಿ ಅವು ಜಯಿಸಲು ಆಗುವುದಿಲ್ಲ. ಅರ. 23:23
988ಯೆಹೋವ ನಿಸ್ಸಿ ನನ್ನ ಜಯಧ್ವಜವಾಗಿರುವನು. ಶತ್ರುಗಳು ಸಮುದ್ರದ ಹಾದಿಯಲ್ಲಿ ಬರುವಾಗ ಆತ್ಮನಾದಾತನು ನನಗಾಗಿ ಜಯಧ್ವಜ ಎತ್ತುವನು. ಯೆಶಾ. 59:19
989ಹಳೆಯ ಒಡಂಬಡಿಕೆಯ ಭಕ್ತರು ತಮ್ಮ ಓಟವನ್ನು ಜಯದೊಡನೆ ಮುಗಿಸಿದಂತೆ ನಾನೂ ನನ್ನ ಓಟವನ್ನು ಜಯದೊಡನೆ ಓಡಿ ಮುಗಿಸುವೆನು. ಪರಲೋಕ ರಾಜ್ಯವನ್ನು ಬಾಧ್ಯತೆಯಾಗಿ ಹೊಂದಿಕೊಳ್ಳುವೆ. ಇಬ್ರಿ. 12:11
990ಒಳ್ಳೆ ಹೋರಾಟವನ್ನು ಮಾಡುವೆನು. ಓಟಗಳನ್ನು ಕಡೆಗಾಣ ಸುವೆನು. ನೀತಿಯ ಕಿರೀಟವನ್ನು ಹೊಂದಿಕೊಳ್ಳುವೆ 2ತಿಮೋ. 4:7
991ಎಡವಿ ಬೀಳದಂತೆ ನಿಮ್ಮನ್ನು ಕಾಪಾಡಿಕೊಳ್ಳುವುದಕ್ಕೂ ತನ್ನ ಪ್ರಭಾವದ ಸಮಕ್ಷಮದಲ್ಲಿ ನಿಮ್ಮನ್ನು ನಿರ್ದೋಷಿಗಳನ್ನಾಗಿ ಕಾಪಾಡುವುದಕ್ಕೂ ನನ್ನ ದೇವರು ಶಕ್ತಿಯುಳ್ಳವನಾಗಿದ್ದಾನೆ. ಯೂದ. 24
992ಹೇಗೆ ಯೇಸುಕ್ರಿಸ್ತನು ಜಯ ಹೊಂದಿ ತನ್ನ ತಂದೆಯ ಸಿಂಹಾಸನದಲ್ಲಿ ಕೂತುಕೊಂಡನೋ ಅದೇ ರೀತಿಯಾಗಿ ನಾನು ಜಯಹೊಂದಿದವನಾಗಿ ಕ್ರಿಸ್ತನೊಡನೆ ಸಿಂಹಾಸನದಲ್ಲಿ ಕೂತುಕೊಳ್ಳುವೆನು. ಪ್ರಕ.3:21
993ನಾನು ಜಯ ಹೊಂದಿ ದೇವರ ಪರದೈಸಿಯ ಮಧ್ಯದಲ್ಲಿರುವ ಜೀವವೃಕ್ಷದ ಹಣ್ಣನ್ನು ತಿನ್ನುವೆನು. ಪ್ರಕ.2:7
994ನಾನು ಜಯ ಹೊಂದಿದವನಾಗಿರುವುದರಿಂದ ನಾನು ಎರಡನೇಯ ಮರಣದಲ್ಲಿ ಸೇರುವುದೇ ಇಲ್ಲ. ಪ್ರಕ.2:11
995ನಾನು ಜಯ ಹೊಂದಿ ಆತನು ನನಗೆ ಬಚ್ಚಿಟ್ಟಿರುವ ಮನ್ನವನ್ನು ಆಹಾರವಾಗಿ ಕೊಟ್ಟು ಹಾಗೂ ಬಿಳೀ ಕಲ್ಲನ್ನುನ ಆದರ ಮೇಲೆ ಕೆತ್ತಿದ ಹೊಸ ಹೆಸರನ್ನು ಕೊಡುವನು. ಪ್ರಕ.2:17
996ಯಾವನು ಜಯಶಾಲಿಯಾಗಿದ್ದು ನನಗೆ ಮೆಚ್ಚಿಕೆಯಾದ ಕೃತ್ಯಗಳನ್ನು ಕಡೇವರೆಗೂ ನಡೆಸುತ್ತಾ ಅಧಿಕಾರದಂತೆ ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವೆನು. ಪ್ರಕ.2:26
997ಸಂಪೂರ್ಣಣವಾಗಿ ಜಯಶಾಲಿಯಾಗುವುದರಿಂದ ದೇವರ ಕೈಗಳಿಂದ ಬಿಳೀ ವಸ್ತ್ರಗಳನ್ನು ಧರಿಸಿಕೊಳ್ಳುವೆ. ಪ್ರಕ.3:5
998ನಾನು ಜಯಹೊಂದಿ ದೇವರ ಆಲಯದಲ್ಲಿ ಸ್ತಂಭವಾಗಿ ನಿಲ್ಲುವೆನು. ಪ್ರಕ.3:12
999ನಾನು ಜಯಹೊಂದುವುದರಿಂದ ದೇವರ ನಾಮವನ್ನು ಹೊಸ ಯೆರುಸಲೇಮಾಗಿರುವ ದೇವದ ನಗರದ ನಾಮವನ್ನು ಕ್ರಿಸ್ತನ ಹೊಸ ಹೆಸರನ್ನು ಬಾಧ್ಯಸ್ಥನಾಗಿ ಹೊಂದುವೆನು. ಪ್ರಕ.3:12
1000ನಾನು ಜಯಹೊಂದುವುದರಿಂದಲೂ ಜೈಸುವವನಾಗಿಯೂ ಹೊರಟು ಹೋಗುವೆನು. ನಿಶ್ಚಯವಾಗಿ ಕರ್ತನ ಕರಗಳಲ್ಲಿ ಕಿರೀಟ ಹೊಂದಿಕೊಳ್ಳುವೆನು. 6:2