101ಜಕ್ಕಾಯನ ಮನೆಯಲ್ಲಿ ಇಳಿದುಕೊಂಡ ಯೇಸು ನನ್ನ ಮನೆಯಲ್ಲಿ ಎಂದೆಂದೂ ನೆಲೆಸುವನು ಲೂಕ 19:5
102ನನ್ನ ಮನೆಗೆ ರಕ್ಷಣೆಯು ಬಂದಿತು. ನೀತಿವಂತನಾದ ನನ್ನ ಗುಡಾರದಲ್ಲಿ ರಕ್ಷಣೆಯ ಗಂಭೀರ ಸ್ವರವುಂಟು. ಲೂಕ 19:9
103ನನ್ನ ನಿವಾಸವು ಸಂಪೂರ್ಣವಾಗಿ ಕ್ರಿಸ್ತನ ವಿಷಯವಾಗಿ ತಿಳಿಸುವ ತಿಳುವಳಿಕೆ ವಿವೇಕದ ಪರಿಮಳದಿಂದ ತುಂಬಿರುತ್ತದೆ. ಯೋಹಾ.12:3
104ಮೋಶೆಯು ಕರ್ತನ ಮನೆಯಲ್ಲಿ ಹೇಗೆ ನಂಬಿಗಸ್ತನಾಗಿದ್ದಾನೋ ಹಾಗೆ ಕರ್ತನ ಮನೆಯಲ್ಲಿ ನಾನು ಯಾವಾಗಲೂ ನಂಬಿಗಸ್ತನಾಗಿರುವೆನು. ಅರಣ್ಯ.12:7
105ದೇವರಿಂದ ಕಟ್ಟಲ್ಪಟ್ಟ ಕೈಕೆಲಸವಲ್ಲದ ನಿತ್ಯವಾದ ಮನೆಯು ಪರಲೋಕದಲ್ಲಿ ನನಗುಂಟು. 2 ಕೊರಿ.5:1
106ನನ್ನ ತಂದೆಯ ಮನೆಯಲ್ಲಿ ಅನೇಕ ಬಿಡಾರಗಳುಂಟು. ಯೇಸು ಕ್ರಿಸ್ತನು ನನಗಾಗಿ ಒಂದು ವಾಸ ಸ್ಥಳವನ್ನು ಸಿದ್ಧ ಮಾಡಲು ಹೋಗಿರುವನು ಯೋಹಾ.14:2,3
107ಆಶೀರ್ವದಿಸಲ್ಪಟ್ಟ ಮಕ್ಕಳು
108ವಾಗ್ಧಾನ ಮಾಡಲ್ಪಟ್ಟದ್ದು ನನಗೂ ನನ್ನ ಸಂತತಿಗೂ ನನ್ನ ದೇವರಾಗಿರುವ ಕರ್ತನು ಕಳಿಸಲ್ಪಡುವ ದೂರದಲ್ಲಿರುವವರೆಲ್ಲರಿಗೂ ಉಂಟಾಗಿದೆ ಅ.ಕೃ:2:39
109ನಾನು ನನಗೆ ಕೊಡಲ್ಪಟ್ಟ ಮಕ್ಕಳು ಚಿಯೋನ್ ಪರ್ವತದಲ್ಲಿ ವಾಸವಾಗಿರುವ ಸೇನಾಧೀಶ್ವರನಾದ ಕರ್ತನಿಂದುಂಟಾದ ಗುರುತುಗಳಾಗಿಯೂ ಅದ್ಭುತವಾಗಿಯೂ ಇಸ್ರಾಯೇಲ್ಯರ ಮಧ್ಯದಲ್ಲಿದ್ದೇವೆ. ಯೆಶಾ.8:18; ಇಬ್ರಿ.2:13
110ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗುವರು. ಅವರಿಗೆ ಅಧಿಕ ಸುಕ್ಷೇಮವಾಗುವದು. ಯೆಶಾ.54:13
111ನನ್ನ ಯೌವನದಲ್ಲಿ ಹುಟ್ಟಿದ ಮಕ್ಕಳು ಯುದ್ಧವೀರನ ಕೈಯಲ್ಲಿರುವ ಅಂಬುಗಳಂತಿದ್ದಾರೆ. ಕೀರ್ತ.127:4
112ನನ್ನ ಯೌವನ ಪ್ರಾಯದ ಕುಮಾರರು ಬಲಶಾಲಿಗಳೂ, ಕೈಗಳಲ್ಲಿನ ಅಂಬುಗಳೂ ಆಗಿರುವರು. ಕೀರ್ತ 127:5
113ನನ್ನ ಮಕ್ಕಳು ಊಟದ ಮನೆಯ ಸುತ್ತಲೂ ಕೂತುಕೊಳ್ಳುವ ಎಣ್ಣೆ ಮರದ ಸಸಿಗಳಂತಿರುವರು. ಕೀರ್ತ.128:3
114ಕರ್ತನ ರೆಕ್ಕೆಗಳ ಕೆಳಗೆ ನನ್ನ ಮಕ್ಕಳಿಗೆ ಸ್ವಸ್ಥತೆಯುಂಟು ಮಾಡುವ ಆರೋಗ್ಯ ಕಿರಣಗಳುಂಟು ಮಲಾ.4:2
115ಅವು ಹೊರಟು ಹೋಗಿ ಕೊಬ್ಬಿದ ಕರುಗಳಂತೆ ವೃದ್ಧಿಗೊಳ್ಳುವರು ಮಲಾ 4:2
116ಆ ಹುಡುಗನ ಮೊರೆಯು ದೇವರಿಗೆ ಕೇಳಿಸಿತು. ದೇವದೂತನು ಆಕಾಶದಿಂದ ಹಾಗರಳನ್ನು ಕರೆದು ಹಾಗರಳೇ ನಿನಗೇನಾಯಿತು? ಅಂಜಬೇಡ; ಆ ಹುಡುಗನು ಬಿದ್ದಿರುವ ಸ್ಥಳದಿಂದಲೇ ಅವನ ಶಬ್ದವು ದೇವರಿಗೆ ಕೇಳಿಸಿತು ಆದಿ 21:17
117ದೇವರು ತನ್ನ ಮಕ್ಕಳನೊಡನಿರುತ್ತಾನೆ. ಅವರು ಬೆಳೆದು ಶೂರರಾಗಿ ಕಾಣಲ್ಪಡುವರು. ಜ್ಞಾನವು ತಿಳುವಳಿಕೆಯೂ ಹೊರಟು ವಿವೇಕವು ಅವರಿಗುಂಟು ಆದಿ.21:17
118ಇಸ್ರಾಯೇಲ್ಯರೂ ಆತನ ಮಕ್ಕಳು ಪಸ್ಕದ ಕುರಿಯ ರಕ್ತದ ಮೂಲಕ ಕಾಯಲ್ಪಟ್ಟು ರಕ್ಷಿಸಲ್ಪಟ್ಟಂತೆ ನಾನೂ ನನ್ನ ಮಕ್ಕಳು ಕ್ರಿಸ್ತನ ರಕ್ತದ ಮೂಲಕ ಕಾಯಲ್ಪಡುತ್ತೇವೆ ವಿಮೋ.12:13
119ನನ್ನ ಸಂತತಿಯ ಮೇಲೆ ಕರ್ತನ ಆತ್ಮವು ನನ್ನ ಸಂತಾನದ ಮೇಲೆ ದೇವರ ಆಶೀರ್ವಾದವು ಸುರಿಸಲ್ಪಡುತ್ತದೆ ಯೆಶಾ.44:3
120ನನ್ನ ಮೇಲಿರುವ ದೇವರ ಆತ್ಮನು ನನ್ನ ಬಾಯಲ್ಲಿ ಉಂಟಾಗುವ ದೇವರ ವಾಕ್ಯಗಳು ಇಂದಿನಿಂದ ಮೊದಲುಗೊಂಡು ಎಂದೆಂದಿಗೂ ನನ್ನ ಬಾಯಿಂದಲೂ ನನ್ನ ಸಂತತಿಯ ಬಾಯಿಂದಾಗಲಿ ನಿಮ್ಮ ಸಂತತಿಯ ಬಾಯಿಂದಾಗಲಿ ಇಂದಿನಿಂದ ಎಂದೆಂದಿಗೂ ತೊಲಗುವದಿಲ್ಲ. ಯೆಶಾ.59:21.