121ನನ್ನ ಮಕ್ಕಳೇ ಕರ್ತನ ಕೈಯಲ್ಲಿ ನಿಮ್ಮನ್ನು ಒಪ್ಪಿಸಿದಾಗ ಅಂದಿನಿಂದ ಆತನು ನಮ್ಮನ್ನು ಕಾಯ್ದುಕೊಳ್ಳಲು ಶಕ್ತನಾಗಿದ್ದಾನೆ. 2 ತಿಮೋ.1:12
122ಕರ್ತನ ಕ್ರಿಯೆಯು ನನಗೂ ಆತನ ಪ್ರಭಾವವು ನನ್ನ ಮಕ್ಕಳಿಗೂ ಪ್ರಕಟವಾಗಲಿ. ಕೀರ್ತ.90:16
123ನನ್ನ ಮಕ್ಕಳು ಬಾಳುವರು. ನನ್ನ ಸಂತತಿಯು ಕರ್ತನ ಮುಂಭಾಗದಲ್ಲಿ ಸ್ಥಿರವಾಗಿರುವರು. ಕೀರ್ತ.102:28
124ಕರ್ತನ ಕೃಪೆಯೋ ಆತನಿಗೆ ಭಯಪಟ್ಟು, ನನ್ನ ಮೇಲೆಯೂ ಕರ್ತನ ನೀತಿ ನನ್ನ ಮಕ್ಕಳ ಮೇಲೆ ಅನಾದಿಕಾಲದಿಂದ ನಿರಂತ್ರವಾಗಿರುವದು. ಕೀರ್ತ.103:17
125ನಾನು ಕರ್ತನಿಗೆ ಭಯಪಟ್ಟು ಜೀವಿಸುವದರಿಂದ ನನ್ನ ಮಕ್ಕಳ ಮಕ್ಕಳು ಇಸ್ರಾಯೇಲ್ಯರಿಗೆ ಉಂಟಾಗುವ ಸಮಾಧಾನವನ್ನು ಕಾಣುವೆವು ಕೀರ್ತ.128:6
126ಕರ್ತನು ನನ್ನ ಹೆಬ್ಬಾಗಿಲುಗಳ ಅಗಳಿಗಳನ್ನು ಬಲಪಡಿಸಿ ನನ್ನ ಮಕ್ಕಳನ್ನೂ ಬಲಪಡಿಸಿ ಆಶೀರ್ವದಿಸುವನು ಕೀರ್ತ.147:13
127ನಾನು ನನ್ನ ಮಕ್ಕಳ ಮಕ್ಕಳಿಗೆ ಆಸ್ತಿಯನ್ನೂ ಬಾಧ್ಯತೆಯನ್ನೂ ಬಿಟ್ಟು ಹೋಗುತ್ತೇನೆ. ಪಾಪಿಯ ಸ್ವಾಸ್ತ್ಯವು ನನಗೆ ಸಂಗ್ರಹವಾಗಿಬಿಟ್ಟಿದೆ. ಜ್ಞಾನೋ.13:22
128ಕರ್ತನಿಗೆ ಭಯಪಡುವವನಿಗೆ ದೃಢವಾದ ನಂಬಿಕೆಯುಂಟು. ನನ್ನ ಮಕ್ಕಳಿಗೆ ಆಶ್ರಯವುಂಟು ಜ್ಞಾನೋ.14:26
129ನಿನ್ನ ಮಕ್ಕಳೆಲ್ಲರಿಗೂ ನಾನು ಕಿರೀಟವಾಗಿರುವೆನು ಜ್ಞಾನೋ.17:6
130ನಾನು ಉತ್ತಮವಾಗಿ ನಡೆದುಕೊಳ್ಳುವೆನು. ನನ್ನ ನಂತರ ನನ್ನ ಮಕ್ಕಳು ಭಾಗ್ಯವಂತರಾಗಿರುವರು. ಜ್ಞಾನೋ.20:7
131ನನ್ನ ಮಕ್ಕಳು ನೀತಿವಂತರಾಗಿರುವರು. ನಾನು ನಿಶ್ಚಯವಾಗಿ ಆನಂದಿಸುವೆನು. ಜ್ಞಾನೋ.23:24
132ಜ್ಞಾನವುಳ್ಳವನನ್ನು ಹೆತ್ತದ್ದರಿಂದ ನಾನು ಬಹು ಸಂತೋಷಿಸುವೆನು. ಜ್ಞಾನೋ.23:24
133ನನ್ನ ಮಕ್ಕಳು ಎದ್ದು ನನ್ನನ್ನು ಭಾಗ್ಯವಂತನೆಂದು ಹಾಗೂ ನನ್ನ ಪತ್ನಿಯನ್ನು ಭಾಗ್ಯವತಿಯೆಂದು ಹೇಳುವರು. ಜ್ಞಾನೋ.31:28
134ನಾವು ಕರ್ತನನ್ನೇ ಸೇವಿಸೋಣ
135ನಾನು ನನ್ನ ಮನೆಯವರು ಕರ್ತನನ್ನೇ ಸೇವಿಸುವೆವು ಯೆಹೋ.24:15
136ನೋಹನು ಆತನ ಕುಟುಂಬದವರು ನಾವೆಯೊಳಗೆ ಪ್ರವೇಶಿಸಿದ ಹಾಗೆ ನಾನು ನನ್ನ ಕುಟುಂಬದವರು ಕ್ರಿಸ್ತನಾಗಿರುವ ಕರ್ತನೆಂಬ ನಾವೆಯಲ್ಲಿ ಪ್ರವೇಶಿಸಿದ್ದೇವೆ. ಆದಿ.7:1
137ಅಬ್ರಹಾಮನು ತನ್ನ ಕುಟುಂಬವನ್ನು ಕರ್ತನ ಹಾದಿಯಲ್ಲಿ ನಡಿಸಿಕೊಂಡು ಬಂದ ಹಾಗೆ ನಾನು ನನ್ನ ಕುಟುಂಬದವರನ್ನು ಕರ್ತನ ಮಾರ್ಗದಲ್ಲಿ ನಡಿಸಲು ಕಾಯ್ದುಕೊಳ್ಳುತ್ತೇನೆ ಆದಿ.18:19
138ಕ್ರಿಸ್ತೇಸುವನ್ನು ವಿಶ್ವಾಸಿರುವುದರಿಂದ ನಾನು ನನ್ನ ಪರಿವಾರದವರು ರಕ್ಷಿಸಲ್ಪಡುತ್ತೇವೆ. ಅ.ಕೃ.16:31
139ನಾನು ನನ್ನ ಕುಟುಂಬದವರು ದೇವರಲ್ಲಿ ಪೂರ್ಣ ವಿಶ್ವಾಸವುಳ್ಳವರಾಗಿದ್ದೇವೆ. ಅ.ಕೃ.16:34
140ನಾನು ಇನ್ನು ಅನ್ಯರೂ ಪರದೇಶಿಗಳು ಆಗಿರದೆ ಪರಿಶುದ್ಧ ಭಕ್ತರೊಡನೆ ಒಂದೇ ಪಟ್ಟಣದವರೂ ದೇವರ ಕುಟುಂಬದವರೂ ಆಗಿರುವೆವು ಎಫೆ 2:19