161ನನಗೆ ಒಂದು ಹೊಸ ರಾಜ್ಯವುಂಟು. ಅಂಧಕಾರದ ಅಧಿಕಾರದಿಂದ ನನ್ನನ್ನು ಬಿಡುಗಡೆ ಮಾಡಿ ತನ್ನ ಪ್ರೀತಿಯ ಕುಮಾರನೊಡನೆ ರಾಜ್ಯದೊಳಗೆ ನನ್ನನ್ನು ಸೇರಿಸಿದಾತನಿಗೆ ಸ್ತೋತ್ರ ಮಾಡುತ್ತೇನೆ ಕೊಲೊ.1:13.
162ನನಗೆ ಜಯವುಂಟು. ಅಂದರೆ ನಾನು ನನ್ನನ್ನು ಪ್ರೀತಿಸುವಾತನಲ್ಲಿದ್ದು ಪೂರ್ಣ ಜಯ ಹೊಂದಿದವನಾಗಿರುತ್ತೇನೆ. ರೋಮಾ.8:37
163ನನಗೆ ಬಾಧ್ಯತೆಯುಂಟು. ನಾನು ದೇವರಿಗೂ ಕ್ರಿಸ್ತನಿಗೂ ಬಾಧ್ಯನಾಗಿದ್ದೇನೆ ರೋಮಾ.8:17
164ನನಗೆ ಆಶೀರ್ವಾದವುಂಟು. ನನ್ನ ದೇವರು ಕ್ರಿಸ್ತನಲ್ಲಿ ಉನ್ನತದಲ್ಲಿ ನನಗೆ ಆತ್ಮೀಕ ವರಗಳನ್ನು ಆತ್ಮೀಕ ಆಶೀರ್ವಾದಗಳಿಂದಲೂ ಆಶೀರ್ವದಿಸುತ್ತಾನೆ ಎಫೆ.1:3
165ನನಗೆ ನಿತ್ಯ ಜೀವವುಂಟು; ಕುಮಾರನಾಗಿರುವ ನಾನು ಜೀವವನ್ನು ಹೊಂದಿದ್ದೇನೆ. ನನ್ನ ಜೀವದೊಡನೆ ಪರಿಪೂರ್ಣ ಹೊಂದುವೆ. ಯೋಹಾ.5:12, 10:10.
166ನನಗೆ ಬೆಳಕುಂಟು. ಕಾರಣ ನಾನು ಲೋಕಕ್ಕೆ ಬೆಳಕನ್ನು ಕೊಡಲು ಕರೆಯಲ್ಪಟ್ಟಿದ್ದೇನೆ. ಪರ್ವತದಲ್ಲಿರುವ ಪಟ್ಟಣವಾಗಿದ್ದೇನೆ. ದೀಪಸ್ಥಂಬದ ಮೇಲಿರುವ ಬೆಳಕಾಗಿದ್ದೇನೆ.
167ನನಗೆ ಬಿಡುಗಡೆಯುಂಟು. ಕರ್ತನ ಆತ್ಮನಾದಾತನ ಆತ್ಮವು ನನಗೆ ಇರುವುದರಿಂದಲೇ ನನಗೆ ಬಿಡುಗಡೆಯುಂಟು 2 ಕೊರಿ.3:17
168ನನಗೆ ಪ್ರೀತಿಯುಂಟು. ಆದಕಾರಣ ನನಗೆ ಕೊಡಲ್ಪಟ್ಟ ಪರಿಶುದ್ಧಾತ್ಮನಿಂದ ದೇವರ ಪ್ರೀತಿಯು ನನ್ನ ಹೃದಯದೊಳಗೆ ತುಂಬಿಸಲ್ಪಟ್ಟಿದೆ ರೋಮಾ 5:5
169ನನಗೆ ಸಂತೋಷವುಂಟು. ನನ್ನ ಸಂತೋಷವನ್ನು ಯಾರೂ ನನ್ನಿಂದ ತೆಗೆದುಹಾಕಲು ಸಾಧ್ಯವಿಲ್ಲ. ಯೋಹಾ.16:23
170ನನಗೆ ಪಾಪ ಕ್ಷಮೆಯುಂಟು. ದೇವರ ಕುಮಾರನಾಗಿರುವ ಯೇಸುವಿನ ರಕ್ತವು ಸಕಲ ಪಾಪವನ್ನು ನಿವಾರಣೆ ಮಾಡಿ ನನ್ನನ್ನು ಶುದ್ದೀಕರಿಸುತ್ತದೆ. 1 ಯೋಹಾ 1:7
171ನನಗೆ ಸಮಾಧಾನವುಂಟು, ಕರ್ನತನಾಗಿರುವ ಯೇಸು ಕ್ರಿಸ್ತನ ಮೂಲಕವಾಗಿ ದೇವರಿಂದ ಸಮಾಧಾನವನ್ನು ಹೊಂದಿದ್ದೇನೆ. ರೋಮಾ 5:1
172ನನ್ನ ಜೀವಿತದಲ್ಲಿ ಗುರಿಯುಂಟು. ಕ್ರಿಸ್ತನಲ್ಲಿ ವಿಶ್ವಾಸವಿಡುವುದರಿಂದ ಮಾತ್ರವಲ್ಲ ಆತನ ಮೂಲಕ ಬಾಧೆ ಪಡುವುದಕ್ಕೂ ನನಗೆ ಕೊಡಲ್ಪಟ್ಟಿದೆ ಫಿಲಿ.4:19
173ನನಗೆ ತೃಪ್ತಿಯುಂಟು. ನನ್ನ ದೇವರು ತನ್ನ ಐಶ್ವರ್ಯಕ್ಕೆ ತಕ್ಕ ಹಾಗೆ ನನ್ನ ಕೊರತೆಯನ್ನೆಲ್ಲಾ ಕ್ರಿಸ್ತೇಸುವಿನಲ್ಲಿ ತನ್ನ ಮಹಿಮೆಯ ಮೂಲಕ ನೆರವೇರಿಸುತ್ತಾನೆ. ಫಿಲಿ 4:19
174ನನಗೆ ಒಂದು ಮುಂದಿನ ಕಾಲವುಂಟು. ನನ್ನ ದೇವರಾಗಿರುವ ಕರ್ತನ ಮನೆಯಲ್ಲಿ ಅನೇಕ ವಾಸಸ್ಥಳಗಳುಂಟು. ನನ್ನ ರಕ್ಷಕನಾಗಿರುವ ಯೇಸು ಒಂದು ಸ್ಥಳವನ್ನು ನನಗಾಗಿ ಸಿದ್ಧ ಮಾಡಲು ಹೊರಟು ಹೋಗಿರುತ್ತಾನೆ. ಯೋಹಾ.14:2
175ನನಗೆ ಸಂತೋಷವುಂಟು. ನಾನು ಹರ್ಷವುಳ್ಳವನಾಗಿರುವೆನು ಕೀರ್ತ.37:14. ಆದ್ದರಿಂದ ನನ್ನ ಹೃದಯದ ಬಯಕೆಗಳನ್ನು ಕರ್ತನಿಂದ ಹೊಂದಿಕೊಳ್ಳುವೆನು
176ನನಗೆ ಬಲವುಂಟು. ನಾನು ಪರಿಶುದ್ಧಾತ್ಮನಿಂದ ಬಲಹೊಂದಿ ಕರ್ತನಿಗಾಗಿ ಸಾಕ್ಷಿಯುಳ್ಳವನಾಗಿರುವೆ ಅ.ಕೃ.1:8
177ನನ್ನಲ್ಲಿ ಪ್ರೀತಿಯುಂಟು. ಕ್ರಿಸ್ತೇಸುವಿನಲ್ಲಿ ಪ್ರೀತಿಯಿರುವುದರಿಂದ ಹಾಗೆಯೇ ನಾನು ಇತರರಲ್ಲಿ ಪ್ರೀತಿಯುಳ್ಳವನಾಗಿರುವೆನು ಯೋಹಾ.13:34.
178ನನಗೆ ಜ್ಞಾನವುಂಟು, ವಿವೇಕವುಂಟು, ನನಗೆ ಕ್ರಿಸ್ತೇಸುವಿನ ಜ್ಞಾನವಿರುವುದರಿಂದ ಅದು ದೈವೀಕ ಜ್ಞಾನದ ಸಹಾಯದಿಂದ ಕರ್ತನಿಗಾಗಿ ಅಲ್ಪಸ್ವಲ್ಪ ಮಹತ್ವವುಳ್ಳ ಕಾರ್ಯ ನೆರವೇರಿಸುವೆನು 1 ಕೊರಿ 1:31
179ನನಗೆ ದೃಢವಾದ ನಂಬಿಕೆಯುಂಟು. ನಾನು ದೃಡಗೊಂಡು ಕರ್ತನಿಗಾಗಿ ಮಹತ್ವವುಳ್ಳ ಕಾರ್ಯ ಮಾಡುವೆ. ದೇವದೂತರುಗಳು ನನ್ನನ್ನು ದೃಡಪಡಿಸುವರು. ಕರ್ತನು ನನ್ನನ್ನು ದೃಢಪಡಿಸುತ್ತಾನೆ ದಾನಿ.11:32
180ಸಂಗೀತವು ನನ್ನ ವಿಶ್ವಾಸದ ಅರಿಕೆಯು