1ನಿನ್ನ ಜೀವಮಾನದಲ್ಲೆಲ್ಲಾ ಒಬ್ಬನೂ ನಿನ್ನ ಮುಂದೆ ನಿಲ್ಲನು; ನಾನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡಲೂ ಇರುವೆನು" ಯೆಹೋಶುವ 1:5
2ನಾನು ಇಂದಿನಿಂದ ನಿನ್ನನ್ನು ಇಸ್ರಾಯೇಲ್ಯರ ಮುಂದೆ ಘನಪಡಿಸುವೆನು ; ನಾನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡಲೂ ಇರುವೆನೆಂಬುದು ಅವರಿಗೆ ಗೊತ್ತಾಗುವುದು" ಯೆಹೋಶುವ 3:07
3"ನೀನಂತೂ ಹೆದರಬೇಡ , ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆ ಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯ ಕೊಡುತ್ತೇನೆ ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ" ಯೆಶಾಯ 41:10
4"ನಾನು ನಿನಗೆ ಆಜ್ಞಾಪಿಸಿದ್ದೇನಲ್ಲಾ; ಸ್ಥಿರಚಿತ್ತನಾಗಿರು; ಧೈರ್ಯದಿಂದಿರು, ಅಂಜಬೇಡ, ಕಳವಳಗೊಳ್ಳಬೇಡ ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ" ಯೆಹೋಶುವ 1:9
5ನೀವು ಅವರಿಗೆ ಹೆದರಿಕೊಳ್ಳಬೇಡಿರಿ; ನಿಮ್ಮ ದೇವರಾದ ಯೆಹೋವನು ನಿಮ್ಮ ಮಧ್ಯದಲ್ಲಿದ್ದಾನೆ; ಆತನು ಭಯಂಕರನಾದ ಮಹಾದೇವರು" ಧರ್ಮೋಪದೇಶಕಾಂಡ 7:21
6"ನೀನು ಹೆದರಬೇಡ; ಸುಮ್ಮನಿರದೆ ಮಾತಾಡುತ್ತಲೇ ಇರು; ನಾನೇ ನಿನ್ನೊಂದಿಗಿದ್ದೇನೆ; ಯಾರೂ ನಿನ್ನ ಮೇಲೆ ಬಿದ್ದು ಕೇಡು ಮಾಡುವುದಿಲ್ಲ" ಅಪೋಸ್ತಲರ ಕೃತ್ಯಗಳು 18:9,10
7"ಯೆಹೋವನು ತಾನೇ ನಿನ್ನ ಮುಂದುಗಡೆ ಹೋಗುವನು; ಆತನೇನಿನ್ನ ಸಂಗಡ ಇರುವನು; ನಿನ್ನನ್ನು ಅಪಜಯಕ್ಕೆ ಗುರಿಪಡಿಸುವುದೇ ಇಲ್ಲ, ಕೈ ಬಿಡುವುದಿಲ್ಲ; ಅಂಜಬೇಡ, ಧೈರ್ಯದಿಂದಿರು" ಧರ್ಮೋಪದೇಶಕಾಡ 31:08
8"ಬೆಟ್ಟಗಳು ಸ್ಥಳವನ್ನು ಬಿಟ್ಟು ಹೋದಾವು , ಗುಡ್ಡಗಳು ಕದಲಿಯಾವು, ಆದರೆ ನನ್ನ ಕೃಪೆಯು ನಿನ್ನನ್ನು ಬಿಟ್ಟು ಹೋಗದು ಸಮಾಧಾನದ ನನ್ನ ಒಪ್ಪಂದವು ಕದಲದು ಎಂದು ನಿನ್ನನ್ನು ಕರುಣ ಸುವ ಯೆಹೋವನು ಅನ್ನುತ್ತಾನೆ" ಯೆಶಾಯ 54:10
9"ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ; ಯಾಕೋಬ ವಂಶದವರ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ" ಕೀರ್ತನೆಗಳು 46;11
10"ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ" ಮತ್ತಾಯ 28:20
11"ನಾನು ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು; ನಿನ್ನ ಸಂತತಿಯನ್ನು ಹೆಚ್ಚಿಸೇ ಹೆಚ್ಚಿಸುವೆನು; ಅದನ್ನು ಆಕಾಶದ ನಕ್ಷತ್ರಗಳಂತೆಯೂ, ಸಮುದ್ರ ತೀರದಲ್ಲಿರುವ ಉಸುಬಿನಂತೆಯೂ ಆಸಂಖ್ಯವಾಗಿ ಮಾಡುವೆನು" ಆದಿಕಾಂಡ 22:16,17
12"ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು ನೀನು ಆಶೀರ್ವಾದ ನಿಧಿಯಾಗುವಿ ನಿನ್ನನ್ನು ಹರಸುವರರನ್ನು ಹರಸುವೆನು; ಶಪಿಸುವವರನ್ನು ಶಪಿಸುವೆನು ನಿನ್ನ ಮೂಲಕ ಭೂಲೋಕದ ಎಲ್ಲ ಕುಲದವರಿಗೂ ಆಶೀರ್ವಾದ ಉಂಟಾಗುವುದು" ಆದಿಕಾಂಡ 12:2,3
13"ನೀವು ಕೆಲಸಕ್ಕೆ ಹೋಗುವಾಗಲೂ ಬರುವಾಗಲೂ ಶುಭ ಉಂಟಾಗುವದು ಧರ್ಮೋಪದೇಶಕಾಂಡ 28:06
14"ನಾನು ಅವರನ್ನೂ, ನನ್ನ ಪರ್ವತದ ಸುತ್ತಣ ಪ್ರದೇಶಗಳನ್ನೂ ಆಶೀರ್ವದಿಸಿ ಸುಖಪಡಿಸುವೆನು; ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು; ಶುಭದಾಯಕ ವೃಷ್ಟಿಯು ಆಗುವುದು" ಯೆಹೆಜ್ಕೇಲ 34:26
15"ನಾನು ಪರಲೊಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳ ಹಿಡಿಸಲಾಗದಷ್ಟು ಸುವರವನ್ನು ಸುರಿಸುವೆನೋ ಇಲ್ಲವೋ ನನ್ನನ್ನು ಹೀಗೆ ಪರೀಕ್ಷಿಸಿರಿ " ಮಲಾಕಿಯ 3:10
16"ಚಿಯೋನಿನಲ್ಲಿರುವ ಯೆಹೋವನು ನಿನ್ನನ್ನು ಅಶೀರ್ವದಿಸಲಿ; ಜೀವಮಾನವೆಲ್ಲಾ ಯೆರೂಸಲೇಮಿನ ಸೌಭಾಗ್ಯವನ್ನು ನೋಡುವವನಾಗು ಮಕ್ಕಳ ಮಕ್ಕಳನ್ನು ಕಾಣುವವನಾಗು ಇಸ್ರಾಯೇಲ್ಯರಿಗೆ ಶುಭವಾಗಲಿ" ಕೀರ್ತನೆಗಳು 128:5,
17"ಈಗ ನೀನು ನಿನ್ನ ಸೇವಕನ ಮನೆಯನ್ನು ಅಶೀರ್ವದಿಸಿದ್ದೀ; ಅದು ನಿತ್ಯವೂ ಸೌಭಾಗ್ಯದಿಂದಿರುವುದು" 1 ಪೂರ್ವಕಾಲವೃತ್ತಾಂತ
18"ಯೆಹೋವನೇ, ನಿನ್ನ ಜನರನ್ನು ರಕ್ಷಿಸು; ನಿನ್ನ ಸ್ವಕೀಯ ಪ್ರಜೆಯನ್ನು ಆಶೀರ್ವದಿಸು ಅವರನ್ನು ಯಾವಾಗಲೂ ಪರಿಪಾಲಿಸುತ್ತಾ ಆಧಾರವಾಗಿರು" ಕೀರ್ತನೆಗಳು 28:09
19"ಯೆಹೋವನು ನಮ್ಮನ್ನು ನೆನಪು ಮಾಡಿಕೊಂಡಿದ್ದಾನೆ; ಸಣ್ಣವರು ಮೊದಲುಗೊಂಡು ದೊಡ್ಡವರ ಪರ್ಯಂತರ ಎಲ್ಲರನ್ನೂ ಆಶೀರ್ವದಿಸುವನು" ಕೀರ್ತನೆಗಳು 115:12
20"ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರ ಆತನು ಪರಲೋಕದಲ್ಲಿ ಸಕಲ ಆತ್ಮೀಯ ವರಗಳನ್ನು ನಮಗೆ ಕ್ರಿಸ್ತೇಸುವಿನಲ್ಲಿ ಅನುಗ್ರಹಿಸಿದ್ದಾನೆ" ಎಫೆಸದವರಿಗೆ 1:03