181 "ಯೆಹೋವನು ಒಳ್ಳೆಯವನು, ಆತನ ನಾಮವನ್ನು ಕೊಂಡಾಡಿರಿ ಅದು ಮನೋಹರವಾಗಿದೆ" ಕೀರ್ತನೆಗಳು 135:03
182 "ಆಹಾ ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು" ಕೀರ್ತನೆಗಳು 133:01
183 "ಯೆಹೋವನು ಒಳ್ಳೆಯವನು, ಆತನ ನಾಮವನ್ನು ಕೊಂಡಾಡಿರಿ ಅದು ಮನೋಹರವಾಗಿದೆ" ಕೀರ್ತನೆಗಳು 135:03
184 "ನಿನ್ನ ತೈಲದ ಪರಿಮಳವು ಸಕಲ ಸುಗಂಧ ದ್ರವ್ಯಗಳಿಗಿಂತ ಎಷ್ಟೋ ಮನೋಹರ" ಪರಮಗೀತಗಳು 4:10
185 "ನಾನು ಎಚ್ಚತ್ತು ನಿಜ ಸ್ಥಿತಿಯನ್ನು ನೋಡಿದೆನು, ಆಗ ನನ್ನ ಕನಸು ನನಗೆ ಮನೊಹರವಾಗಿ ಕಾಣ ಸಿತು" ಯೆರೆಮೀಯ 31:26
186 "ನನ್ನ ಧ್ಯಾನದಿಂದ ಆತನಿಗೆ ಮೆಚ್ಚಿಕೆಯಾಗಲಿ, ನಾನಾದರೋ ಯೆಹೋವನಲ್ಲಿ ಆನಂದಿಸುವೆನು" ಕೀರ್ತನೆಗಳು 104:34
187 "ದೇವದಾರುಗಳಷ್ಟು ರಮಣ ೀಯವಾದ ಆತನ ಗಾಂಭೀರ್ಯವು ಲೆಬನೋನಿಗೆ ಸಮಾನ" ಪರಮಗೀತಗಳು 5:15
188 "ಪ್ರೇಮವೇ ಸಕಲ ಸಂತೋಷಗಳಿಗಿಂತ ನೀನು ಎಷ್ಟೋ ಮನೋಹರ, ಎಷ್ಟೋ ರಮ್ಯ" ಪರಮ ಗೀತಗಳು 7:6
189 "ಪ್ರಭಾವ ಐಶ್ವರ್ಯಗಳು ನಿನ್ನ ಸನ್ನಿಧಿಯಿಂದ ಬರುತ್ತವೆ, ನೀನು ಸರ್ವಾಧಿಕಾರಿಯು ಬಲಪರಾಕ್ರಮಗಳು ನಿನ್ನ ಹಸ್ತದಲ್ಲಿರುತ್ತವೆ" 1 ಪೂರ್ವಕಾಲವೃತ್ತಾಂತ 29:12
190 "ನನ್ನಲ್ಲಿ ಧನಘನತೆಗಳೂ ಶ್ರೇಷ್ಟ ಸಂಪತ್ತು ನೀತಿಯೂ ಇರುತ್ತವೆ" ಜ್ಞಾನೋಕ್ತಿಗಳು 8:18
191 "ಯೆಹೋವನ ಆಶೀರ್ವಾದವು ಭಾಗ್ಯದಾಯಕವು ಅದು ವ್ಯಸನವನ್ನು ಸೇರಿಸದು" ಜ್ಞಾನೋಕ್ತಿಗಳು 10:22
192 "ಧನ ಮಾನ ಜೀವಗಳು ದೀನಭಾವಕ್ಕೂ ಯೆಹೋವನ ಭಯಕ್ಕೂ ಫಲ" ಜ್ಞಾನೋಕ್ತಿಗಳು 22:04
193 "ಆಹಾ ದೇವರ ಐಶ್ವರ್ಯವೂ ಜ್ಞಾನವೂ ವಿವೇಕವೂ ಎಷ್ಟೋ ಅಗಾಧ" ರೋಮಾಪುರದವರಿಗೆ 11:33
194 "ಆತನು ಐಶ್ವರ್ಯವಂತನಾಗಿದ್ದು ತಾನು ಬಡತನದಲ್ಲಿ ಸೇರುವುದರಿಂದ ನೀವು ಐಶ್ವರ್ಯವಂತರಾಗಬೇಕೆಂದು ನಿಮಗೋಸ್ಕರ ಬಡವನಾದನು" 2 ಕೊರಿಂಥದವರಿಗೆ 8:9
195 "ನನ್ನ ದೇವರು ಕ್ರಿಸ್ತಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು" ಪಿಲಿಪ್ಪಿಯವರಿಗೆ 4:19
196 "ವಧಿತನಾದ ಕುರಿಯಾದಾತನು ಬಲ ಐಶ್ವರ್ಯ ಜ್ಞಾನ ಸಾಮಥ್ರ್ಯ ಮಾನ ಪ್ರಭಾವ ಸ್ತೋತ್ರಗಳನ್ನು ಹೊಂದುವುದಕ್ಕೆ ಯೋಗ್ಯನು" ಪ್ರಕಟಣೆಗಳು 5:12
197 "ಜ್ಞಾನಿಗಳ ಜ್ಞಾನ ಕಿರೀಟವೇ ಅವರ ಸಂಪತ್ತು" ಜ್ಞಾನೋಕ್ತಿಗಳು 14:24
198 "ಧನವಂತನಿಗೆ ಬಹು ಜನ ಮಿತ್ರರು" ಜ್ಞಾನೋಕ್ತಿಗಳು 14:20
199 "ಆಗ ನೀನು ನನ್ನ ಗೋಳಾಟವನ್ನು ತಪ್ಪಿಸಿ ಸಂತೊಷದಿಂದ ಕುಣ ದಾಡುವಂತೆ ಮಾಡಿದಿ ನಾನು ಕಟ್ಟಿಕೊಂಡಿದ್ದ ಗೊಣ ೀತಟ್ಟನ್ನು ತೆಗೆದುಬಿಟ್ಟು ಹರ್ಷ ವಸ್ತ್ರವನ್ನು ನನಗೆ ಧಾರಣೆ ಮಾಡಿಸಿದಿ" ಕೀರ್ತನೆಗಳು 30:11
200 "ಆತನ ಕೋಪವು ಕ್ಷಣಮಾತ್ರವೆ; ಆತನ ಅನುಗ್ರಹವೋ ಜೀವಮಾನವೆಲ್ಲಾ ಇರುವದು ಸಂಜೆಗೆ ದುಃಖವೆಂಬುದು ಬಂದು ನಮ್ಮ ಬಳಿಯಲ್ಲಿ ಇಳಿದುಕೊಂಡರೂ ಮುಂಜಾನೆ ಹರ್ಷಧ್ವನಿಯು ಕೇಳಿಸುವುದು" ಕೀರ್ತನೆಗಳು 30:05