201 "ಚಿಯೋನಿನಿಂದ ಇಸ್ರಾಯೇಲ್ಯರಿಗೆ ರಕ್ಷಣೆಯು ಬೇಗನೆ ಬರಲಿ ಯೆಹೋವನು ದುರವಸ್ಥೆಯಿಂದ ತಪ್ಪಿಸಿದಾಗ ಆತನ ಪ್ರಜೆಗಳಾಗಿರುವ ಯಾಕೋಬವಂಶದವರು ಉಲ್ಲಾಸ ಗೊಳ್ಳುವರು, ಇಸ್ರಾಯೇಲ್ಯರು ಹರ್ಷಿಸುವರು" ಕೀರ್ತನೆಗಳು 14:07
202 "ನಿನ್ನನ್ನು ಮರೆಹೊಕ್ಕವರೆಲ್ಲರೂ ಸಂತೋಷ ಪಡುವರು ನೀನು ಕಾಪಾಡುವವನೆಂದು ಅವರು ಯಾವಾಗಲೂ ಅನಂದ ಧ್ವನಿ ಮಾಡುವರು ನಿನ್ನ ನಾಮವನ್ನು ಪ್ರೀತಿಸುವವರು ನಿನ್ನಲ್ಲಿ ಉಲ್ಲಾಸಗೊಳ್ಳುವರು" ಕೀರ್ತನೆಗಳು 5:12
203 "ನೀತಿವಂತರೇ ಯೆಹೋವನಲ್ಲಿ ಸಂತೋಷಿಸುತ್ತಾ ಉಲ್ಲಾಸವಾಗಿರ್ರಿ; ಯತಾರ್ಥಚಿತ್ತರೇ ಆತನ ವಿಶಯದಲ್ಲಿ ಉತ್ಸಾಹ ಧ್ವನಿ ಮಾಡಿರಿ" ಕೀರ್ತನೆಗಳು 32:11
204 "ಸಂತೋಷಪಡಿರಿ ಉಲ್ಲಾಸ ಪಡಿರಿ, ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು" ಮತ್ತಾಯ 5:12
205 "ಧರ್ಮಿಯ ತಂದೆಯು ಅತೀ ಸಂತೊಷಪಡುವನು ಜ್ಞಾನಿಯನ್ನು ಹೆತ್ತವನು ಅವನಲ್ಲಿ ಆನಂದಿಸುವನು" ಜ್ಞಾನೋಕ್ತಿಗಳು 23:24
206 "ಇಸ್ರಾಯೇಲ್ಯರು ತಮ್ಮ ಸೃಷ್ಠಿಕರ್ತನಲ್ಲಿ ಹೆಚ್ಚಳಪಡಲಿ ಚಿಯೋನಿನವರು ತಮ್ಮ ರಾಜನಲ್ಲಿ ಹರ್ಷಿಸಲಿ" ಕೀರ್ತನೆಗಳು 149:02
207 "ನನ್ನನ್ನು ತೊಳೆ, ಆಗ ಹಿಮಕ್ಕಿಂತಲೂ ಬೆಳ್ಳಗಾಗುವೆನು ನನ್ನಲ್ಲಿ ಸಂಭ್ರಮೋತ್ಸವದ ಧ್ವನಿ ಉಂಟಾಗುವಂತೆ ಮಾಡು, ಆಗ ನೀನು ಜಜ್ಜಿದ ಎಲುಬುಗಳು ಆನಂದಪಡುವವು" ಕೀರ್ತನೆಗಳು 51:07
208 "ನಾನು ಮಾಡುವ ಸೃಷ್ಠಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ ಆಹಾ, ನಾನು ಯೆರೂಸಲೇಮನ್ನು ಉಲ್ಲಾಸದ ನಿವಾಸನ್ನಾಗಿ ಅದರ ಜನರನ್ನು ಹರ್ಷ ಭರಿತರನ್ನಾಗಿಯೂ ಮಾಡುವೆನು" ಯೆಶಾಯ 65:18
209 "ನೀನು ನನ್ನ ದೃಷ್ಠಿಯಲ್ಲಿ ಅಮೂಲ್ಯನೂ ಮಾನ್ಯನೂ ಪ್ರಿಯನೂ ಆಗಿರುವುದರಿಂದ ನಾನು ನಿನಗೆ ಬದಲಾಗಿ ಮನುಷ್ಯರನ್ನೂ ನಿನ್ನ ಪ್ರಾಣಕ್ಕೆ ಪ್ರತಿಯಾಗಿ ಜನಾಂಗಗಳನ್ನು ಕೊಡುವೆನು" ಯೆಶಾಯ 43:04
210 "ದೇವರಿಗೆ ಭಯಪಡಿರಿ, ಅರಸನನ್ನು ಸನ್ಮಾನಿಸಿರಿ" 1ಪೇತ್ರ 2:17
211 "ಅವನು ನನಗೆ ಮೊರೆಯಿಡುವಾಗ ಸದುತ್ತರವನ್ನು ದಯಪಾಲಿಸುವೆನು ಇಕ್ಕಟ್ಟಿನಲ್ಲಿ ಹತ್ತಿರವಿದ್ದು ಅವನ್ನು ತಪ್ಪಿಸಿ ಘನಪಡಿಸುವೆನು" ಕೀರ್ತನೆಗಳು 95:15
212 "ದೇವರು ಒಬ್ಬನಿಗೆ ಯಾವ ಇಷ್ಟಾರ್ಥಕ್ಕೂ ಕೊರತೆ ಇಲ್ಲದಂತೆ ಧನ ಸಂಪತ್ತನ್ನೂ ಘನತೆಯನ್ನೂ ಅನುಗ್ರಹಿಸುವನು" ಪ್ರಸಂಗಿ 6:01
213 "ದಿಕ್ಕಿಲ್ಲದವರು ಕಡೆಯವರೆಗೆ ಮರೆಯಲ್ಪಡುವುದಿಲ್ಲ ದೀನರ ನಿರೀಕ್ಷೆಯು ಕೆಡುವುದೇ ಇಲ್ಲ" ಕೀರ್ತನೆಗಳು 9:18
214 "ನೀನು ದೀನರಿಗೆ ಕೋಟೆ, ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣ ದುರ್ಗ; ಬಿಸಿಲಿಗೆ ನೆರಳು, ಭೀಕರರ ಶ್ವಾಸವು ಗೋಡೆಗೆ ಬಡಿದು ಬಿಡುವ ಬಿರುಗಾಳಿಯಂತಿರುವಾಗ ಆಶ್ರಯವೂ ಆಗಿದ್ದೀ" ಯೆಶಾಯ 25:04
215 "ಆತನು ದೀನರನ್ನು ಧೂಳಿನಿಂದ ಎಬ್ಬಿಸಿ ಬಡವರನ್ನು ತಿಪ್ಪೆಯಿಂದ ಎತ್ತುತ್ತಾನೆ" ಕೀರ್ತನೆಗಳ 113:07
216 'ಯೆಹೋವನ್ನು ಕೀರ್ತಿಸಿರಿ, ಯೆಹೋವನನ್ನು ಕೀರ್ತಿಸಿರಿ ಆತನು ಕೆಡುಕರ ಕೈ ಯಿಂದ ದೀನರ ಪ್ರಾಣವನ್ನು ರಕ್ಷಿಸಿದ್ದಾನೆ" ಯೆರೆಮೀಯ 20:01
217 "ಬಡವರಿಗೆ ದಯೆ ತೋರಿಸುವವನು ಯೆಹೋವನಿಗೆ ಸಾಲ ಕೊಡುವನು" ಜ್ಞಾನೋಕ್ತಿಗಳು 19:17
218 "ಕಷ್ಟದಲ್ಲಿದ್ದ ದೀನರನ್ನು ಉನ್ನತ ಸ್ಥಿತಿಗೇರಿಸಿ ಕುರಿ ಹಿಂಡಿನಂತೆ ಹೆಚ್ಚಿಸಿದನು " ಕೀರ್ತನೆ 107:41
219 "ದೀನರು ಯೆಹೋವನಲ್ಲಿ ಹೆಚ್ಚು ಹೆಚ್ಚಾಗಿ ಆನಂದಿಸುವರು, ಬಡವರು ಇಸ್ರಾಯೇಲ್ಯರ ಸದಮಲ ಸ್ವಾಮಿಯಲ್ಲಿ ಉಲ್ಲಾಸಿಸುವರು" ಯೆಶಾಯ 29:19
220 "ದೀನ ದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣವನ್ನು ಸಂತೈಸುವನು" ಕೀರ್ತನೆಗಳು 72:13