221 "ನಾನಾದರೋ ಕುಗ್ಗಿದವನೂ ದಿಕ್ಕಿಲ್ಲದವನೂ ಆಗಿದ್ದೇನೆ, ದೇವರೇ ಶೀಘ್ರವಾಗಿ ಬಾ" ಕೀರ್ತನೆಗಳು 70:05
222 "ಬಾಯಿ ತೆರೆದು ಧರ್ಮವನ್ನು ನಡಿಸು, ದೀನ ದರಿದ್ರರಿಗೆ ನ್ಯಾಯವನ್ನು ತೀರಿಸು" ಜ್ಞಾನೋಕ್ತಿಗಳು 31:09
223 "ಯೆಹೋವನು ನಂಬಿಗಸ್ತನು, ಆತನು ನಿಮ್ಮನ್ನು ದೃಢಪಡಿಸಿ ನೀವು ಕೆಡುಕನ ಕೈಗೆ ಸಿಕ್ಕದಂತೆ ಕಾಪಾಡುವನು" 2 ಥೆಸಲೋನಿಕದವರಿಗೆ 3:3
224 "ದೇವರು ನಂಬಿಗಸ್ತನು, ನಮ್ಮ ಕರ್ತನಾದ ಯೇಸುಕ್ರಿಸ್ತನೆಂಬ ತನ್ನ ಮಗನ ಅನ್ಯೋನ್ಯತೆಗೆ ನಿಮ್ಮನ್ನು ಕರೆದವನು ಆತನೇ" 1 ಕೊರಿಂಥದವರಿಗೆ 1:9
225 "ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿ ಮಾಡುವನು" 1 ಯೋಹಾನ 1:9
226 "ದೇವರು ನಂಬಿಗಸ್ತನು ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವುದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧ ಮಾಡುವನು" 1ಕೊರಿಂಥ 10:13
227 "ಆತನು ನಂಬಿಗಸ್ತನಾದ ದೇವರು, ತನ್ನನ್ನು ಪ್ರೀತಿಸಿ ತನ್ನ ಆಜ್ಞೆಗಳನ್ನು ಅನುಸರಿಸುವವರಿಗೆ ಮಾಡಿದ ವಾಗ್ದಾನವನ್ನೂ ಕೃಪೆಯನ್ನೂ ಅವರ ಸಂತತಿಯವರಲ್ಲಿ ಸಾವಿರ ತಲೆಗಳವರೆಗೂ ನೆರವೇರಿಸುವವನಾಗಿದ್ದಾನೆ" ಧರ್ಮೋಪದೇಶಕಾಂಡ 7:09
228 "ಯೆಹೋವನು ಒಳ್ಳೆಯವನು ಆತನ ಕೃಪೆಯು ಯುಗ ಯುಗಕ್ಕೂ ಆತನ ಸತ್ಯತೆಯು ತಲತಲಾಂತರಕ್ಕೂ ಇರುವದು" ಕೀರ್ತನೆಗಳು 100:05
229 "ನಿಮ್ಮನ್ನು ಕರೆಯುವವನು ನಂಬಿಗಸ್ತನು ಆತನು ತನ್ನ ಕಾರ್ಯವನ್ನು ಸಾಧಿಸುವನು" 1 ಥೆಸಲೋನಿಕದವರಿಗೆ 5:24
230 "ಕರ್ತನು ನಂಬಿಗಸ್ತನು: ಆತನು ನಿಮ್ಮನ್ನು ದೃಢಪಡಿಸಿ ನೀವು ಕೆಡುಕನ ಕೈಗೆ ಸಿಕ್ಕದಂತೆ ಕಾಪಾಡುವನು" 2 ಥೆಸಲೋನಿಕದವರಿಗೆ 3:3
231 "ನಾವು ಅಪನಂಬಿಗಸ್ತರಾಗಿದ್ದರೂ ಆತನು ನಂಬಿಗಸ್ತನಾಗಿಯೇ ಇರುವನು" 2ತಿಮೋಥೆಯನಿಗೆ 2:13
232"ವಾಗ್ದಾನ ಮಾಡಿದಾತನು ನಂಬಿಗಸ್ತನು" ಇಬ್ರಿಯ 10:23
233 "ಇಗೋ, ನಾನು ಈ ಪಟ್ಟಣವನ್ನು ಜೀರ್ಣೋದ್ಧಾರಮಾಡಿ ಅದಕ್ಕೆ ಸೌಖ್ಯವನ್ನು ಕೊಟ್ಟು ನಿವಾಸಿಗಳನ್ನು ಗುಣಪಡಿಸುವೆನು" ಯೆರೆಮೀಯ 33:06
234 "ನನ್ನ ನಾಮದಲ್ಲಿ ಭಯಭಕ್ತಿ ಇಟ್ಟಿರುವ ನಿಮಗಾದರೋ ದೇವರ ಧರ್ಮವೆಂಬ ಸೂರ್ಯನು ಸ್ವಸ್ತತೆಯನ್ನುಂಟು ಮಾಡುವ ಕಿರಣಗಳುಳ್ಳವನಾಗಿ ಮೂಡುವನು" ವಿಮೊಚನಾಕಾಂಡ 23:25
235 "ಆತನ ಆಜ್ಞೆಗಳಿಗೆ ವಿಧೇಯರಾಗಿದ್ದು ಆತನ ಕಟ್ಟಳೆಗಳನ್ನೆಲ್ಲಾ ಅನುಸರಿಸಿ ನಡೆದರೆ ನಾನು ಐಗುಪ್ತ್ಯರಿಗೆ ಉಂಟು ಮಾಡಿದ ವ್ಯಾಧಿಗಳಲ್ಲಿ ಒಂದನ್ನೂ ನಿಮಗೆ ಬರಗೋಡಿಸುವುದಿಲ್ಲ ನಾನೇ ನಿಮಗೆ ಆರೋಗ್ಯದಾಯಕನು" ವಿಮೋಚನಾಕಾಂಡ 15:26
236 "ನಿಮ್ಮ ದೇವರಾದ ಯೆಹೋವನೊಬ್ಬನನ್ನೇ ಆರಾಧಿಸಬೇಕು ಆಗ ಆತನು ನಿಮ್ಮ ಅನ್ನಪಾನಗಳನ್ನು ಆಶಿರ್ವದಿಸುವನು ನಿಮ್ಮೊಳಗೆ ಯಾವ ವ್ಯಾಧಿಯೂ ಉಂಟಾಗದಂತೆ ಮಾಡುವನು " ವಿಮೋಚನಾಕಾಂಡ 23:25
237 "ಕ್ರಿಸ್ತ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದಾತನು ನಿಮ್ಮಲ್ಲಿ ವಾಸವಾಗಿರುವ ತನ್ನ ಆತ್ಮನ ಮೂಲಕ ನಿಮ್ಮ ಮತ್ರ್ಯ ದೇಹಗಳನ್ನು ಸಹ ಬದುಕಿಸುವನು" ರೋಮಾಪುರದವರಿಗೆ 8:11
238 "ನಿಮ್ಮಲ್ಲಿ ಅಸ್ವಸ್ಥನಾದವನು ಇದ್ದಾನೋ? ಅವನು ಸಭೆಯ ಹಿರಿಯರನ್ನು ಕರೇಕಳುಹಿಸಲಿ ಅವರು ಕರ್ತನ ಹೆಸರಿನಲ್ಲಿ ಅವನಿಗೆ ಎಣ್ಣೆ ಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ರಕ್ಷಿಸುವುದು" ಯಾಕೋಬನು 5:14,
239 "ನಮ್ಮ ಬೇನೆಗಳನ್ನು ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು" ಮತ್ತಾಯ 8:17
240 "ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಕಂಬವನ್ನು ಏರಿದನು ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು" 1ಪೇತ್ರ 2:24