241 "ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು ಸಮಾಧಾನದಿಂದ ಹೋಗು; ನಿನ್ನನ್ನು ಕಾಡಿದ ರೋಗವು ಹೋಗಿ ನಿನಗೆ ಗುಣವಾಗಲಿ" ಮಾರ್ಕ 5:34
242 "ಆತನು ಕನಿಕರಪಟ್ಟು ಕೈ ನೀಡಿ ಅವನನ್ನು ಮುಟ್ಟಿ - ನನಗೆ ಮನಸ್ಸುಂಟು ಶುದ್ಧವಾಗು ಅಂದನು" ಮಾರ್ಕ 1:41
243 "ನನ್ನ ಹಸ್ತವು ಅವನ ಮೇಲೆ ಸ್ಥಿರವಾಗಿರುವುದು ನನ್ನ ಭುಜವು ಅವನನ್ನು ಬಲಪಡಿಸುವುದು" ಕೀರ್ತನೆಗಳು 89:21
244 "ಭೂಲೋಕವು ಸ್ಥಿರವಾಗಿರುವುದು ಕದಲುವುದಿಲ್ಲ" ಕೀರ್ತನೆಗಳು 93:01
245 "ಸ್ಥಿರಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ ನಿನ್ನಲ್ಲಿ ಭರವಸವಿದೆ" ಯೆಶಾಯ 26:03
246"ಪೂರ್ವದಿಂದಲೂ ನಿನ್ನ ಸಿಂಹಾಸನವು ಸ್ಥಿರವಾಗಿದೆ ಅನಾದಿಯಿಂದಲೂ ನೀನು ಇದ್ದೀ" ಕೀರ್ತನೆಗಳು 93:02
247 "ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಶ್ಪಲವಾಗುವುದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರ್ರಿ" 1 ಕೊರಿಂಥ 15:58
248 "ನಿನ್ನ ಸತ್ಯತೆಯು ತಲತಲಾಂತರಕ್ಕೂ ಇರುವದು ನೀನು ಭೂಮಿಯನ್ನು ಸ್ತಾಪಿಸಿರುತ್ತೀ; ಅದು ಕದಲುವುದಿಲ್ಲ" ಕೀರ್ತನೆಗಳು 119:90
249 "ನಾನು ಶರೀರದಿಂದ ನಿಮ್ಮ ಬಳಿಯಲ್ಲಿ ಇಲ್ಲದಿದ್ದರೂ ಆತ್ಮನಿಂದ ನಿಮ್ಮೊಂದಿಗಿದ್ದು ನೀವು ಕ್ರಮವಾಗಿ ನಡೆಯುವುದನ್ನೂ ಕ್ರಿಸ್ತ ನಂಬಿಕೆಯಲ್ಲಿ ದೃಢವಾಗಿ ನಿಂತಿರುವುದನ್ನೂ ನೋಡಿ ಸಂತೋಷ ಪಡುತ್ತೇನೆ" ಕೊಲೊಸ್ಸೆ 2:05
250 "ದೇವರ ಸ್ಥಿರವಾದ ಅಸ್ತಿವಾರವು ನಿಲ್ಲುತ್ತದೆ" 2ತಿಮೋಥೆ 2:19
251 "ಈ ಹೊತ್ತು ಎಂಬ ಕಾಲವು ಇರುವ ತನಕ ಪ್ರತಿನಿತ್ಯವೂ ಒಬ್ಬರನ್ನೊಬ್ಬರು ಎಚ್ಚರಿಸಿರಿ ಮೊದಲಿಂದಿರುವ ಭರವಸವನ್ನು ಅಂತ್ಯದ ವರೆಗೂ ದೃಢವಾಗಿ ಹಿಡಿದು ಕೊಳ್ಳುವ ಪಕ್ಷಕ್ಕೆ ಕ್ರಿಸ್ತನಲ್ಲಿ ಪಾಲುಗಾರರಾಗಿದ್ದೇವಲ್ಲಾ" ಇಬ್ರಿಯರಿಗೆ 13:14
252) "ಸಹೋದರರೇ, ದೇವರು ನಿಮ್ಮನ್ನು ಕರೆದದ್ದನ್ನೂ ದೃಢಪಡಿಸಿಕೊಳ್ಳುವುದಕ್ಕೆ ಮತ್ತಷ್ಟು ಪ್ರಯಾಸಪಡಿರಿ" 2 ಪೇತ್ರ 1:10
253 "ಭೂಮ್ಯಾಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ" ಕೀರ್ತನೆಗಳು 121:02
254 "ಯೆಹೋವನು ನನಗೆ ಬಲವೂ ಗುರಾಣ ಯೂ ಆಗಿದ್ದಾನೆ ನಾನು ಆತನಲ್ಲಿ ಭರವಸವಿಟ್ಟೆನು ನನಗೆ ಸಹಾಯವು ಉಂಟಾಯಿತು" ಕೀರ್ತನೆಗಳು 28:07
255 "ಇಗೋ ದೇವರೇ ನನಗೆ ಸಹಾಯಕನು; ಯೆಹೋವನೇ ನನ್ನ ಪ್ರಾಣವನ್ನು ಕಾಪಾಡುವವನು" ಕೀರ್ತನೆಗಳು 54:04
256 "ನಾನೇ ನಿನ್ನ ದೇವರು, ನಾನು ನಿನ್ನನ್ನು ಬಲಪಡಿಸುತ್ತೇನೆ" ಯೆಶಾಯ 41:10
257 "ನಾನೇ ನಿನ್ನ ದೇವರು, ನಾನು ನಿನ್ನನ್ನು ಬಲಪಡಿಸುತ್ತೇನೆ ಹೌದು, ನಿನಗೆ ಸಹಾಯ ಕೊಡುತ್ತೇನೆ" ಯೆಶಾಯ 41:10
258 "ಯೆಹೋವನು ನನ್ನ ಸಹಾಯಕನು ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು?" ಇಬ್ರಿಯರಿಗೆ 13
259 "ಆತನು ಅಕಾಶವನ್ನೇರಿ ಮೇಘರೂಢನಾಗಿ ಮಹಾ ಗಾಂಭೀರ್ಯದಿಂದ ನಿಮ್ಮ ಸಹಾಯಕ್ಕೆ ಬರುವನು" ಧರ್ಮೋಪದೇಶಕಾಂಡ 33:26
260 "ನಾವು ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾಸಾನದ ಮುಂದೆ ಬರೋಣ" ಇಬ್ರಿಯರಿಗೆ 4:16