261 "ನೀನೇ ನನಗೆ ಸಹಾಯಕನಾಗಿದ್ದೆಯಲ್ಲವೇ; ನನ್ನನ್ನು ರಕ್ಷಿಸಿದ ದೇವರೇ, ಕೈ ಬಿಡಬೇಡ ತೊರೆದು ಬಿಡಬೇಡ" ಕೀರ್ತನೆಗಳು 27:09
262 "ನಿನ್ನ ದಾಸನಿಗೆ ವಿಮುಖನಾಗಬೇಡ; ಇಕ್ಕಟ್ಟಿನಲ್ಲಿದ್ದೇನೆ ತಡಮಾಡದೆ ಸಹಾಯಮಾಡು" ಕೀರ್ತನೆಗಳು 69:17
263 "ನಮ್ಮ ಮನಸ್ಸು ಯೆಹೋವನಿಗೋಸ್ಕರ ಕಾದಿದೆ ನಮ್ಮ ಸಹಾಯವೂ ಗುರಾಣ ಯೂ ಆತನೇ" ಕೀರ್ತನೆಗಳು 33:20
264 "ಆದಿಯಿಂದಲೂ ದೇವರೇ ನಿಮಗೆ ನಿವಾಸಸ್ಥಾನವಾಗಿದ್ದಾನಲ್ಲಾ; ಸದಾ ದೇವರ ಹಸ್ತವೇ ನಿಮಗೆ ಆಧಾರ" ಧರ್ಮೋಪದೇಶಕಾಂಡ 33:27
265 ಇಸ್ರಾಯೇಲ್ಯರ ದೇವರಾದ ಯೆಹೋವನಿಗೆ ಯುಗ ಯುಗಾಂತರಗಳವರೆಗೂ ಕೊಂಡಾಟವಾಗಲಿ" ಕೀರ್ತನೆಗಳು 41:13
266 "ಭೂಮಿಯೂ ಅದರ ದೇಶಗಳೂ ನಿರ್ಮಾಣವಾಗುವುದಕ್ಕಿಂತ ಮುಂಚಿನಿಂದ ಯುಗಯುಗಾಂತರಗಳಲ್ಲಿಯೂ ನೀನೇ ದೇವರು" ಕೀರ್ತನೆಗಳು 90:02
267 "ಪೂರ್ವದಿಂದಲೂ ನಿನ್ನ ಸಿಂಹಾಸನವು ಸ್ಥಿರವಾಗಿದೆ ಅನಾದಿಯಿಂದ ನೀನು ಇದ್ದೀ" ಕೀರ್ತನೆಗಳು 3:02
268 "ಆದಿಯಿಂದ ಈಗಿನವರೆಗೂ ತಲತಲಾಂತರಗಳನ್ನು ಬರಮಾಡುವವನಾದ ಯೆಹೋವನೆಂಬ ನಾನೆ, ಹೌದು ಆದಿಪುರುಷನೂ ಅಂತ್ಯಕಾಲದವರ ಸಂಗಡಿಗನೂ ಆಗಿರುವ ನಾನೊಬ್ಬನೇ" ಯೆಶಾಯ 41:04
269 "ಆ ವಾಕ್ಯವೆಂಬುವವನು ಆದಿಯಲ್ಲಿ ದೇವರ ಬಳಿಯಲ್ಲಿದ್ದನು " ಯೋಹಾನ 1:02
270 "ಇಸ್ರಾಯೇಲನ್ನು ಆಳತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು; ಆತನ ಹೊರಡೋಣದ ಮೂಲವು ಪುರಾತನವೂ ಅನಾದಿಯೂ ಆದದ್ದು" ಮೀಕ 5:02
271 "ಪ್ರಾರಂಭದಲ್ಲಿ, ಭೂಮಿಯು ಹುಟ್ಟುವುದಕ್ಕಿಂತ ಮುಂಚೆ ಅನಾದಿಕಾಲದಲ್ಲಿ ಸ್ಥಾಪಿಸಲ್ಪಟ್ಟೆನು" ಜ್ಞಾನೋಕ್ತಿಗಳು 8:23
272 "ಭೂಮಿಯ ಮೊದಲನೆಯ ಅಣುರೇಣುವನ್ನಾಗಲೀ ನಿರ್ಮಿಸದೆ ಇರುವಾಗ ನಾನು ಹುಟ್ಟಿದೆನು" ಜ್ಞಾನೋಕ್ತಿಗಳು 8:26
273 "ತಂದೆಗಳೇ ಆದಿಯಿಂದಿರುವಾತನನ್ನು ನೀವು ಬಲ್ಲವರಾಗಿರುವುದರಿಂದ ನಿಮಗೆ ಬರೆದಿದ್ದೇನೆ" 1ಯೋಹಾನ 2:14
274 "ಯಾವನ ಮೇಲೆ ದಯೆಯಿಡುವೆನೋ ಅವನ ಮೇಲೆ ದಯೆಯಿಡುವೆನು ಯಾರನ್ನು ಕರುಣ ಸುವೆನೋ ಅವರನ್ನು ಕರುಣ ಸುವೆನು" ವಿಮೋಚನಾಕಾಡ 33:19
275 "ಯೆಹೋವನು ಪ್ರಸನ್ನ ಮುಖದಿಂದ ನಿಮ್ಮನ್ನು ನೋಡಿ ನಿಮ್ಮ ಮೇಲೆ ದಯೆ ಇಡಲಿ ನಿಮ್ಮ ಮೇಲೆ ಕೃಪಾಕಟಾಕ್ಷವಿಟ್ಟು ಶಾಂತಿಯನ್ನು ಅನುಗ್ರಹಿಸಲಿ" ಅರಣ್ಯಕಾಂಡ 6:26
276 "ನನ್ನ ಕೃಪೆಯೇ ನಿನಗೆ ಸಾಕು, ಬಲಹೀನತೆಯಲ್ಲಿಯೇ ಬಲವು ಪೂರ್ಣ ಸಾಧಕವಾಗುತ್ತದೆ" 2 ಕೊರಿಂಥದವರಿಗೆ 12:9
277 "ನಾವೆಲ್ಲರೂ ಆತನ ಪರಿಪೂರ್ಣತೆಯೊಳಗಿಂದ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು" ಯೋಹಾನ 1:17
278 "ಹೆದರ ಬೇಡ ನಿನಗೆ ದೆವರ ದಯೆ ದೊರಕಿತು" ಲೂಕ 1:30
279 "ನಿನ್ನ ಕೃಪೆಯು ಆಕಾಶವನ್ನೂ ನಿನ್ನ ಸತ್ಯತೆಯು ಮುಗಿಲನ್ನು ನಿಲುಕುವಷ್ಟು ದೊಡ್ಡದಾಗಿದೆ" ಕೀರ್ತನೆಗಳು 57:10
280 "ಉದಯದಲ್ಲಿ ನಿನ್ನ ಕೃಪೆಯಿಂದ ನಮ್ಮನ್ನು ಸಂತೃಪ್ತಿಪಡಿಸು; ಆಗ ಜೀವಮಾನದಲ್ಲೆಲ್ಲಾ ಉಲ್ಲಾಸಿಸಿ ಹರ್ಷಿಸುವೆವು" ಕೀರ್ತನೆಗಳು 90:14