281 "ಯೆಹೋವನಲ್ಲಿ ಭರವಸವಿಟ್ಟವರನ್ನು ಆತನ ಕೃಪೆಯು ಆವರಿಸಿಕೊಳ್ಳುವುದು" ಕೀರ್ತನೆಗಳು 32:10
282 "ನಿನ್ನ ಕೃಪೆಯನ್ನು ನನ್ನ ದೃಷ್ಠಿಯಲ್ಲೇ ಇಟ್ಟುಕೊಂಡಿದ್ದೇನೆ, ಸತ್ಯದಲ್ಲಿ ನಡೆದುಕೊಂಡಿದ್ದೇನೆ" ಕೀರ್ತನೆಗಳು 26:03
283 "ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನನ್ನು ಹಿಂಬಾಲಿಸುವವು" ಕೀರ್ತನೆಗಳು 23:06
284 "ನಮ್ಮ ದೇವರು ನಮ್ಮ ಕರ್ತನಾದ ಯೇಸುಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಟ್ಟಿದ್ದಾನೆ" 1 ಕೊರಿಂಥದವರಿಗೆ 15:57
285 "ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜೈಸಿದ್ದೇನೆ" ಯೋಹಾನ 16:33
286 "ಅರಸುಗಳಿಗೆ ಜಯಪ್ರದನೂ ಸೇವಕನಾದ ದಾವೀದನನ್ನು ಹಾನಿಕರವಾದ ಕತ್ತಿಗೆ ತಪ್ಪಿಸಿದವನು ನೀನೆ" ಕೀರ್ತನೆಗಳು 144:10
287 "ದೇವರಿಂದ ಹುಟ್ಟಿದಂಥದ್ದೆಲ್ಲವೂ ಲೋಕವನ್ನು ಜಯಿಸುತ್ತದೆ ಲೋಕವನ್ನು ಜಯಿಸಿದಂಥದ್ದು ನಮ್ಮ ನಂಬಿಕೆಯೇ" 1ಯೋಹಾನ 5:04
287 "ಅಶ್ವಬಲವು ಯುದ್ಧ ದಿನಕ್ಕಾಗಿ ಸನ್ನದ್ಧವಾಗಿದ್ದರೂ ಜಯವು ಕರ್ತನಿಂದಲೇ" ಜ್ಞಾನೋಕ್ತಿಗಳು 21:31
288 "ಕರ್ತಾ, ಮಹಿಮಾ ಪ್ರತಾಪ ವೈಭವ ಪರಾಕ್ರಮ ಪ್ರಭಾವಗಳು ನಿನ್ನವು, ಭೂಮ್ಯಾಕಾಶದಲ್ಲಿರುವುದೆಲ್ಲಾ ನಿನ್ನದೇ ಯೆಹೊವನೇ, ರಾಜ್ಯ ನಿನ್ನದೇ" 1ಪೂರ್ವಕಾಲವೃತ್ತಾಂತ 29:11
289 ಕರ್ತರ ಕರ್ತನೂ ರಾಜಾದಿ ರಾಜನೂ ಆಗಿರುವುದರಿಂದ ಅವರನ್ನು ಜಯಿಸುವನು ಮತ್ತು ದೇವರು ಕರೆದವರೂ ದೇವರಾದುಕೊಡವರೂ ನಂಬಿಗಸ್ತರೂ ಆಗಿರುವ ಆತನ ಕಡೆಯವರು ಆ ಜಯದಲ್ಲಿ ಪಾಲುಗಾರರಾಗುವರು" ಪ್ರಕಟಣೆಗಳು 17:14
290 "ಯಜ್ಞದ ಕುರಿಯಾದಾತನ ರಕ್ತದ ಬಲದಿಂದಲೂ ತಮ್ಮ ವಾಕ್ಯದ ಬಲದಿಂದಲೂ, ಅವನನ್ನು ಪ್ರಕಟಣೆಗಳು 12:11
291 "ಜಯಹೊಂದುವವನು ಇವುಗಳಿಗೆ ಬಾಧ್ಯನಾಗುವನು, ನಾನು ಅವನಿಗೆ ದೇವರಾಗಿರುವೆನು ಅವನು ನನಗೆ ಮಗನಾಗಿರುವನು" ಪ್ರಕಟಣೆ 21:07
292 "ಕ್ರಿಸ್ತನ ಅನ್ಯೋನ್ಯತೆಯಲ್ಲಿ ನಮ್ಮನ್ನು ಯಾವಾಗಲೂ ಜಯೋತ್ಸವದೊಡನೆ ಮೆರೆಸುತ್ತಾ ಆತನ ವಿಶಯವಾದ ಜ್ಞಾನವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿಯೂ ವ್ಯಾಪನ ಗೊಳಿಸುತ್ತಾ ಬರುವ ದೇವರಿಗೆ ಸ್ತೋತ್ರ" 2ಕೊರಿಂಥದವರಿಗೆ 2:14
293 "ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿ ಬರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ ಅಂದನು" ಮತ್ತಾಯ 18:20
294 "ದೇವರು ನಂಬಿಗಸ್ತನು; ನಮ್ಮ ಕರ್ತನಾದ ಯೇಸು ಕ್ರಿಸ್ತನೆಂಬ ತನ್ನ ಮಗನ ಅನ್ಯೊನ್ಯತೆಗೆ ನಿಮ್ಮನ್ನು ಕರೆದವನು ಆತನೇ" 1 ಕೊರಿಂಥದವರಿಗೆ 1:9
295 "ನಾವು ಕಂಡು ಕೇಳಿದ್ದು ನಿಮಗೂ ಗೊತ್ತಾಗಿ ನಮಗಿರುವ ಅನ್ಯೋನ್ಯತೆಯಲ್ಲಿ ನೀವೂ ಸೇರಬೇಕೆಂದು ಅದನ್ನು ನಿಮಗೆ ಪ್ರಸಿದ್ದಿ ಪಡಿಸುತ್ತೇವೆ ನಮಗಿರುವ ಅನ್ಯೋನ್ಯತೆಯು ತಂದೆಯ ಸಂಗಡಲೂ ಆತನ ಮಗನಾದ ಯೇಸುಕ್ರಿಸ್ತನ ಸಂಗಡಲೂ ಇರುವಂಥದ್ದು" 1ಯೊಹಾನ 1:03
296 ಯೆಹೂದ್ಯರಾಗಲೀ ಗ್ರೀಕರಾಗಲೀ ದಾಸರಾಗಲೀ ಸ್ವತಂತ್ರರಾಗಲೀ ನಾವೆಲ್ಲರೂ ಒಂದೇ ದೇಹವಾಗುವುದಕ್ಕಾಗಿ ಒಂದೇ ಆತ್ಮದಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡೆವು" 1ಕೊರಿಂಥವರಿಗೆ 12:13
297 "ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು, ನಾನು ಅವರಿಗೆ ದೇವರಾಗಿರುವೆನು ಅವರು ನನಗೆ ಪ್ರಜೆಯಾಗಿರುವರು" 2 ಕೋರಿಂಥದವರಿಗೆ 13:14
298 "ಆತನು ಬೆಳಕಿನಲ್ಲಿರುವಂತೆಯೇ ನಾವು ಬೆಳಕಿನಲ್ಲಿ ನಡೆದರೆ ನಾವು ಒಬ್ಬರ ಸಂಗಡಲೊಬ್ಬರು ಅನ್ಯೊನ್ಯತೆಯೆಲ್ಲಿದ್ದೇವೆ" 1ಯೋಹಾನ 1:07
299 "ನಾವು ದೇವರ ಸಂಗಡ ಅನ್ಯೋನ್ಯತೆಯಲ್ಲಿದ್ದೇವೆಂದು ಹೇಳಿ ಕತ್ತಲೆಯಲ್ಲಿ ನಡೆದರೆ ಸುಳ್ಳಾಡುವವರಾಗಿದ್ದೇವೆ" 1 ಯೋಹಾನ 1:6
300 "ಕ್ರಿಸ್ತನಿಂದ ಉತ್ತೇಜನ ಪ್ರೀತಿಯ ಪ್ರೇರಣೆ ಪವಿತ್ರಾತ್ಮನ ಅನ್ಯೋನ್ಯತೆ ಕಾರುಣ್ಯ ದಯಾರಸಗಳು ಉಂಟಾಗುವುದಾದರೆ ಐಕ್ಯಮತ್ಯ ಉಳ್ಳವರಾಗಿದ್ದು ನನ್ನ ಸಂತೋಷವನ್ನು ಪರಿಪೂರ್ಣ ಮಾಡಿರಿ" ಪಿಲಿಪ್ಪಿಯರಿಗೆ 2:01