301 "ನಮ್ಮ ಕರ್ತನಾದ ಯೇಸುಕ್ರಿಸ್ತನ ಕೃಪೆಯೂ ದೇವರ ಪ್ರೀತಿಯೂ ಪವಿತ್ರಾತ್ಮನ ಅನ್ಯೋನ್ಯತೆಯೂ ನಿಮ್ಮೆಲ್ಲರ ಸಂಗಡವಿರಲಿ" 2 ಕೋರಿಂಥದವರಿಗೆ 13:14
302 "ನಿಮ್ಮೆಲ್ಲರಲ್ಲಿ ಒಂದೇ ಪ್ರೀತಿ ಇರಲಿ ; ಅನ್ಯೋನ್ಯ ಭಾವ ಉಳ್ಳವರೂ ಒಂದೇ ಗುರಿ ಇಟ್ಟುಕೋಡವರೂ ಆಗಿರ್ರಿ" ಪಿಲಿಪ್ಪಿಯವರಿಗೆ 2:02
303 "ಯೆಹೋವನು ನನಗೆ ಕುರುಬನು; ಕೊರತೆ ಪಡೆನು" ಕೀರ್ತನೆಗಳು 23:01
304 "ಈ ನಾಲ್ವತ್ತು ವರುಷ ನಿಮ್ಮ ದೆವರಾದ ಯೆಹೋವನು ನಿಮ್ಮ ಸಂಗಡ ಇದ್ದುದರಿಂದ ನಿಮಗೆ ಏನೂ ಕಡಿಮೆಯಾಗಲಿಲ್ಲ" ಧರ್ಮೋಪದೇಶಕಾಂಡ 2:07
305 "ನಿಮ್ಮಲ್ಲಿ ಯಾವನಿಗಾದರೂ ಜ್ಞಾನವು ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ; ಅದು ಅವನಿಗೆ ದೊರಕುವುದು" ಯಾಕೋಬ 1:05
306 "ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು; ಕರ್ತನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರಿಗೆ ಯಾವ ಮೇಲಿಗೂ ಕಡಿಮೆ ಇಲ್ಲ" ಕೀರ್ತನೆಗಳು 34:10
307 "ನಿನ್ನ ಹಟ್ಟಿಯನ್ನು ನೀನು ಪರೀಕ್ಷಿಸುವಾಗ ಏನೂ ಕಡಿಮೆಯಾಗಿರುವುದಿಲ್ಲ" ಯೋಬ 5:24
308 "ನಿಮ್ಮನ್ನು ನಾನು ಹಮ್ಮಿಣ ಹಸಿಬೆ ಜೋಡುಗಳಿಲ್ಲದೆ ಕಳುಹಿಸಿದಾಗ ನಿಮಗೆ ಏನಾದರೂ ಕೊರತೆಯಾಯಿತೋ ಎಂದು ಕೇಳಲು ಅವರು ಏನೂ ಇಲ್ಲವೆಂದರು" ಲೂಕ 22:35
309 "ಬಹಳ ದಯವು ಅವರೆಲ್ಲರ ಮೇಲೆ ಇತ್ತು, ಅವರಲ್ಲಿ ಕೊರತೆ ಪಡುವವನು ಒಬ್ಬನೂ ಇರಲಿಲ್ಲ" ಅಪೋಸ್ತಲರಕೃತ್ಯಗಳು 4:33
310 "ನಿಮ್ಮ ಮುಖವನ್ನು ನೋಡುವುದಕ್ಕೂ ನಿಮ್ಮ ನಂಬಿಕೆಯ ಕೊರತೆಗಳನ್ನು ನೀಗುವುದಕ್ಕೂ ನಮಗೆ ಅನುಕೂಲವಾಗಬೇಕೆಂದು ನಾವು ಹಗಲಿರುಳು ದೇವರನ್ನು ಅತ್ಯಂತವಾಗಿ ಬೇಡುವವರಾಗಿದ್ದೇವೆ" 1ಥೆಸಲೊನಿಕದವರಿಗೆ 3:10
311 "ಆ ತಾಳ್ಮೆಯು ಸಿದ್ಧಿಗೆ ಬರಲಿ, ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆ ಇಲ್ಲದವರೂ ಆಗಿರುವಿರಿ" ಯಾಕೋಬ 1:04
312 "ನಾನೇ ನಿಮ್ಮ ಜೊತೆಯಲ್ಲಿ ಬಂದು ನಿಮಗೆ ವಿಶ್ರಾಂತಿಯನ್ನು ಉಂಟುಮಾಡುವೆನು " ವಿಮೋಚನಾಕಾಂಡ 33:14
313 "ನಿನ್ನ ಬಲದಿಂದ ದಂಡಿನ ಮೇಲೆ ಬೀಳುವೆನು; ನನ್ನ ದೇವರ ಸಹಾಯದಿಂದ ಪ್ರಾಕಾರವನ್ನು ಹಾರುವೆನು" ಕೀರ್ತನೆಗಳು 18:29
314 "ಸ್ವಾಮೀ ದಯವಿರಲಿ; ನನ್ನೊಂದಿಗೆ ಮಾತಾಡುತ್ತಿರುವ ಸ್ವಾಮಿಯವರೇ ಆಗಿದ್ದೀರೆಂಬುದಕ್ಕೆ ನನಗೊಂದು ಗುರುತನ್ನು ಅನುಗ್ರಹಿಸ ಬೇಕು" ನ್ಯಾಯ ಸ್ಥಾಪಕರು 6:17
315 "ಯೆಹೋವನ ಸನ್ನಿಧಿಯಲ್ಲಷ್ಟೆ; ನಿನ್ನ ತಂದೆಯನ್ನೂ ಅವನ ಮನೆಯವರೆಲ್ಲರನ್ನೂ ಬಿಟ್ಟು ನನ್ನನ್ನೇ ಆರಿಸಿಕೊಂಡ ತನ್ನ ಪ್ರಜೆಗಳಾದ ಇಸ್ರಾಯೇಲ್ಯರ ಅರಸನನ್ನಾಗಿ ಮಾಡಿದ ಯೆಹೋವನ ಮುಂದೆ ಇನ್ನೂ ಕುಣ ದಾಡುವೆನು" 2 ಸಮುವೇಲ 6:21
316 "ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ, ನಿನ್ನ ಬಲಗೈಯಲ್ಲಿ ಶಾಶ್ವತ ಭಾಗ್ಯವಿದೆ" ಕೀರ್ತನೆಗಳು 16:11
317 "ನೀನು ನನಗೆ ಮಾಡಿದ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿದ್ದೇನೆ ನಿನ್ನ ನಾಮ ಮಹತ್ತು ನೀನು ಕಟ್ಟಿಸಿದ ಆಲಯದಲ್ಲಿ ಸದಾ ಇರುವಂತೆ ಅದನ್ನು ನನಗೋಸ್ಕರ ಪ್ರತಿಷ್ಠಿಸಿ ಕೊಂಡಿದ್ದೇನೆ" 1 ಅರಸು 9:3
318 "ಆತನ ಸಾನಿಧ್ಯದಲ್ಲಿ ಮಾನ ಮಹಿಮೆಗಳೂ ಆತನ ಪವಿತ್ರಾಲಯದಲ್ಲಿ ಬಲ ಸಂತೋಷಗಳೂ ಇರುತ್ತವೆ" 1ಪೂರ್ವಕಾಲವೃತ್ತಾಂತ 16:27
319 "ಸರ್ವ ಭೂಲೋಕದೊಡೆಯನ ಸನ್ನಿಧಿ ಸೇವಕರು ಎಣ್ಣೆಯ ಬುಗ್ಗೆಗಳೂ ಆದ ಇಬ್ಬರು ಪುರುಷರು ಎಂದು ಹೇಳಿದನು" ಜೆಕರ್ಯ 4:14
320 "ನನ್ನ ಸಾನಿಧ್ಯಕ್ಕೆ ಬಾ ಎಂಬ ನಿನ್ನ ಮಾತಿಗೆ, ನಾನು- ಯೆಹೋವನೇ ನಿನ್ನ ಸನ್ನಿಧ್ಯಕ್ಕೆ ಬರಲೇ ಬರುವೆನು ಎಂದು ಉತ್ತರ ಕೊಟ್ಟೆನು" ಕೀರ್ತನೆಗಳು 27:08