321 "ನಿರ್ದೋಷಿಯಾದ ನನ್ನನ್ನಾದರೋ ನೀನು ಉದ್ಧಾರ ಮಾಡಿ ನಿನ್ನ ಸನ್ನಿಧಿಯಲ್ಲಿ ಶಾಶ್ವತವಾಗಿ ನಿಲ್ಲಿಸುವಿ" ಕೀರ್ತನೆಗಳು 41:12
322 "ಚಿಯೋನಿನಲ್ಲಿರುವ ಯೆಹೋವನು ನಿನ್ನನ್ನು ಆಶೀರ್ವಾದಿಸಲಿ, ಜೀವಮಾನವೆಲ್ಲಾ ಯೆರೂಸಲೇಮಿನ ಸೌಭಾಗ್ಯವನ್ನು ನೋಡುವವನಾಗು" ಕೀರ್ತನೆಗಳು 128:05
323 "ಬಡವನಾಗಿರಲೂ ಬಲ್ಲೆನು; ಸಮೃದ್ಧಿಯುಳ್ಳವನಾಗಿರಲೂ ಬಲ್ಲೆನು" ಪಿಲಿಪ್ಪಿ 4:12
324 "ನೀನು ಯಾವಾತನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳ ಬಂದಿಯೋ ಆ ಇಸ್ರಾಯೇಲ್ ದೇವರಾದ ಯೆಹೋವನು ನಿನಗೆ ಉತ್ತಮವಾದ ಪ್ರತಿಫಲವನ್ನು ಅನುಗ್ರಹಿಸಲಿ" ರೂತಳು 2:12
325 "ದಯಾಳುವಾಗಿ ಧನ ಸಹಾಯ ಮಾಡುವವನೂ ತನ್ನ ಕಾರ್ಯಗಳನ್ನು ನೀತಿಯಿಂದ ನಡಿಸುವವನೂ ಭಾಗ್ಯವಂತನು" ಕೀರ್ತನೆಗಳು 112:05
326 "ನೀತಿವಂತನ ವಂಶವು ಶುಭ ಹೊಂದುವುದು; ಅವನ ಮನೆಯಲ್ಲಿ ಧನೈಶ್ವರ್ಯಗಳು ಇರುವವು" ಕೀರ್ತನೆಗಳು 112
327 "ದೇವರ ಮುಂದೆ ಹೆದರಿ ಆತನ ಮುಂದೆ ಆತನಲ್ಲಿ ಭಯ ಭಕ್ತಿಯುಳ್ಳವರಿಗೆ, ಮೇಲೇ ಆಗುವುದೆಂದು ಬಲ್ಲೆನು" ಪ್ರಸಂಗಿ 8:12
328 "ನಿನ್ನ ಪತ್ನಿಯೊಡನೆ ಸುಖದಿಂದ ಬದುಕು, ನಿನ್ನ ಬಾಳಿನಲ್ಲಿಯೂ ನೀನು ಲೋಕದೊಳಗೆ ಪಡುವ ಪ್ರಯಾಸದಲ್ಲಿಯೂ ಇದೇ ನಿನಗೆ ಬಂದ ಪಾಲು" ಪ್ರಸಂಗಿ 9:09
329 "ಪತಿಯ ಹೃದಯವು ಆಕೆಯಲ್ಲಿ ಭರವಸ ಪಡುವುದು, ಅವನು ಕೊಳ್ಳೆ ಕೊಳ್ಳೆಯಾಗಿ ಸಂಪಾದಿಸುವನು" ಜ್ಞಾನೋಕ್ತಿಗಳು 31:11
329 "ನಿನ್ನ ಕಷ್ಟಾರ್ಜಿತವನ್ನು ನೀನೇ ಅನುಭವಿಸುವಿ; ನೀನು ಧನ್ಯನು ನಿನಗೆ ಶುಭವಿರುವುದು" ಕೀರ್ತನೆಗಳು 128:02
330 "ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನನ್ನು ಹಿಂಬಾಲಿಸುವವು" ಕೀರ್ತನೆಗಳು 23:06
331 "ನಿನಗೂ ನಿನ್ನ ಸಂತತತಿಗೂ ದೇವರಾಗಿರುವೆನೆಂದು ನಾನು ನಿನಗೋಸ್ಕರ ನಿನ್ನ ಸಂತತಿಯ ಎಲ್ಲಾ ತಲಾಂತರಗಳಿಗೋಸ್ಕರವೂ ಮಾಡಿಕೊಂಡ ನನ್ನ ಒಡಂಬಡಿಕೆಯನ್ನು ಸ್ಥಿರಪಡಿಸುವೆನು" ಆದಿಕಾಂಡ 17:07
332 "ಆ ಬಿಲ್ಲು ಮೇಘಗಳಲ್ಲಿ ಕಾಣ ಸುವಾಗ ನಾನು ಅದನ್ನು ನೋಡಿ ದೇವರಾದ ನನಗೂ ಭೂಮಿಯ ಮೇಲಿರುವ ಎಲ್ಲಾ ಜೀವ ಜಂತುಗಳಿಗೂ ಆದ ಶಾಶ್ವತವಾದ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಳ್ಳುವೆನು ಅಂದನು" ಆದಿಕಾಂಡ 9:10
333 "ನಿನ್ನ ಪತ್ನಿಯಾದ ಸಾರಳಲ್ಲಿಯೇ ನಿನ್ನಿಂದ ಮಗನು ಹುಟ್ಟುವನು, ಅವನಿಗೆ ಇಸಾಕನೆಂದು ಹೆಸರಿಡಬೇಕು ಅವನು ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸಿಕೊಳ್ಳುವೆನು" ಆದಿಕಾಂಡ 17:09
334 "ಯೆಹೊವನು ತನ್ನ ಜನರಿಗೆ ವಿಮೋಚನೆಯನ್ನುಂಟುಮಾಡಿದ್ದಾನೆ ತನ್ನ ಒಡಂಬಡಿಕೆಯನ್ನು ನಿತ್ಯಕ್ಕೂ ಸ್ಥಾಪಿಸಿದ್ದಾನೆ" ಕೀರ್ತನೆಗಳು 111:09
335 "ಆತನು ನನ್ನೊಡನೆ ಒಡಂಬಡಿಕೆ ಮಾಡಿಕೆ ಮಾಡಿಕೊಂಡಿದ್ದಾನೆ, ಅದು ಎಂದಿಗೂ ಬಿದ್ದು ಹೋಗುವುದಿಲ್ಲ" 2 ಸಮುವೇಲ 23:5
336 "ದಾವೀದನಿಗೆ ಖಂಡಿತವಾಗಿ ವಾಗ್ದಾನ ಮಾಡಿದ ಕೃಪಾವರಗಳನ್ನು ನಿಮಗೆ ಕೊಡುತ್ತೇನೆಂಬ ಶಾಶ್ವತವಾದ ಒಡಂಬಡಿಕೆಯನ್ನು ನಿನ್ನೊಂದಿಗೆ ಮಾಡಿಕೊಳ್ಳುವೆನು" ಯೆಶಾಯ 55:03
337 "ನಾನು ನಿಮಗೆ ಹಿತಮಾಡುವುದನ್ನು ಬಿಟ್ಟು ವಿಮುಖನಾಗೆನು ಎಂಬುವ ಶಾಶ್ವತವಾದ ಒಡಂಬಡಿಕೆಯನ್ನು ಅವರೊಂದಿಗೆ ಮಾಡಿಕೊಳ್ಳುವೆನು" ಯೆರೆಮೀಯ 32:40
338 "ಆ ದಿನಗಳು ಬಂದ ಮೇಲೆ ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು, ನನ್ನ ಆಜ್ಞೆಗಳನ್ನು ಅವರ ಮನಸ್ಸಿನಲ್ಲಿಡುವೆನು; ಅವರ ಹೃದಯದಮೇಲೆ ಅವುಗಳನ್ನು ಬರೆಯುವೆನು" ಇಬ್ರಿಯರಿಗೆ 8:10
339 "ಈ ಪಾತ್ರೆಯು ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ; ನೀವು ಇದರಲ್ಲಿ ಪಾನ ಮಾಡುವಾಗೆಲ್ಲಾ ನನ್ನನ್ನು ನೆನಸಿಕೊಳ್ಳುವುದಕ್ಕೋಸ್ಕರ ಪಾನ ಮಾಡಿರಿ ಅಂದನು" 1 ಕೊರಿಂಥದವರಿಗೆ 11:25
340 "ಇವರ ನಷ್ಟಕ್ಕೆ ಪ್ರತಿಫಲವನ್ನು ಕೊಟ್ಟು ಇವರೊಂದಿಗೆ ನಿತ್ಯವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು " ಯೆಶಾಯ 61:08