341 "ಕರ್ತನು ನಂಬಿಗಸ್ತನು, ಆತನು ನಿಮ್ಮನ್ನು ದೃಢಪಡಿಸಿ ನೀವು ಕೆಡುಕನ ಕೈಗೆ ಸಿಕ್ಕ ದಂತೆ ಕಾಪಾಡುವನು" 1 ಥೆಸಲೋನಿಕದವರಿಗೆ 3:3
342 ಆತನು ನಿನ್ನ ಪಾದಗಳನ್ನು ಕದಲಗೊಡಿಸದಿರಲಿ; ನಿನ್ನನ್ನು ಕಾಯುವವನು ತೂಕಡಿಸದಿರಲಿ" ಕೀರ್ತನೆಗಳು 121:03
343 "ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೊಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವುದು" ಪಿಲಿಪ್ಪಿಯವರಿಗೆ 4:07
344 "ಪವಿತ್ರನಾದ ತಂದೆಯೇ ನಾವು ಒಂದಾಗಿರುವ ಹಾಗೇ ಇವರೂ ಒಂದಾಗಿರಬೇಕೆಂದು ನೀನು ನನಗೆ ಕೊಟ್ಟ ನಿನ್ನ ಹೆಸರಿನಲ್ಲಿ ಇವರನ್ನು ಕಾಯಬೇಕು" ಯೋಹಾನ 17:11
345 "ನಾನು ನಂಬಿರುವಾತನನ್ನು ಬಲ್ಲೆನು, ಆತನು ನನ್ನ ವಶದಲ್ಲಿಟ್ಟಿರುವುದನ್ನುಆ ದಿನಕ್ಕಾಗಿ ಕಾಪಾಡುವುದಕ್ಕೆ ಶಕ್ತನಾಗಿದ್ದಾನೆಂದು ದೃಢವಾಗಿ ನಂಬಿದ್ದೇನೆ" 2:ತಿಮೋ 1:12
346 "ನಿಮ್ಮೆದುರಿನಲ್ಲಿ ಮಹತ್ಕಾರ್ಯಗಳನ್ನು ನಡಿಸಿ ನಮ್ಮ ಎಲ್ಲಾ ಪ್ರಯಾಣಗಳಲ್ಲಿಯೂ ದಾಟಿ ಬಂದ ಅನ್ಯ ಜನಾಂಗಗಳ ಮಧ್ಯದಲ್ಲಿಯೂ ನಮ್ಮನ್ನು ಕಾಪಾಡಿದನು" ಯೆಹೋಶುವ 24:17
347 "ನೀನು ನನ್ನ ಸಹನ ವಾಕ್ಯಗಳನ್ನು ಕಾಪಾಡಿದ್ದರಿಂದ, ಭೂನಿವಾಸಿಗಳನ್ನು ಪರೀಕ್ಷಿಸುವುದಕ್ಕಾಗಿ, ಲೋಕದ ಮೇಲೆಲ್ಲಾ ಬರುವುದಕ್ಕಿರುವ ಶೋಧನೆಯ ಸಮಯದಲ್ಲಿನಿನ್ನನ್ನು ತಪ್ಪಿಸಿ ಕಾಪಾಡುವೆನು" ಪ್ರಕಟಣೆ 3:10
348 "ಸ್ತ್ರೀಯರು ಮಾನಸ್ಥೆಯರಾಗಿ ನಂಬಿಕೆಯಲ್ಲಿಯೂ ಪ್ರೀತಿಯಲ್ಲಿಯೂ ಪರಿಶುದ್ಧತೆಯಲ್ಲಿಯೂ ನೆಲೆಗೊಂದಿದ್ದರೆ ಮಕ್ಕಳನ್ನು ಹೆರುವುದರಲ್ಲಿ ರಕ್ಷಣೆ ಹೊಂದುವರು" 1ತಿಮೋಥೆಯನಿಗೆ 2:15
349 "ಇಹಲೋಕದಲ್ಲಿ ತನ್ನ ಪ್ರಾಣವನ್ನು ಹಗೆಮಾಡುವವನು ನಿತ್ಯಜೀವಕ್ಕಾಗಿ ಅದನ್ನು ಕಾಪಾಡಿಕೊಳ್ಳುವನು" ಯೋಹಾನ 12:25
350 "ಇಗೋ ಕಳ್ಳನು ಬರುವಂತೆ ಬರುತ್ತೇನೆ, ತಾನು ನಿರ್ವಾಣವಾಗಿ ತಿರುಗಾಡಿ ಅವಮಾನಕ್ಕೆ ಗುರಿಯಾದೇನೆಂದು, ಎಚ್ಚರವಾಗಿದ್ದು ತನ್ನ ವಸ್ತ್ರ್ರಗಳನ್ನು ಕಾಪಾಡಿಕೊಳ್ಳುವವನು ಧನ್ಯನು" ಪ್ರಕಟಣೆ 16:15
351 "ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಠಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯತಾರ್ಥ ಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ" 2 ಪೂರ್ವಕಾಲವೃತ್ತಾಂತ 16:9
352 "ಧೈರ್ಯದಿಂದ ಕೆಲಸ ಮಾಡಿರಿ, ಯೆಹೋವನು ಸಜ್ಜನರ ಸಹಾಯಕನು" 2 ಪೂರ್ವಕಾಲವೃತ್ತಾಂತ 19:11
353 "ಯೆಹೋವನು ಸದ್ಭಕ್ತರ ಜೀವಮಾನವನ್ನು ಲಕ್ಷಿಸುತ್ತಾನೆ" ಕೀರ್ತನೆಗಳು 37:18
354 "ಇಗೊ ದೇವರು ನಿರ್ದೋಷಿಯನ್ನು ತಳ್ಳಿಬಿಡುವುದಿಲ್ಲ" ಯೊಬ 8:20
355 "ಒಳ್ಳೇ ನಡತೆಯುಳ್ಳವನನ್ನು ನೋಡು; ಯತಾರ್ಥನನ್ನು ಲಕ್ಷಿಸು" ಕೀರ್ತನೆಗಳು 37:37
356 "ಯತಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು" ಜ್ಞಾನೋಕ್ತಿಗಳು 2:21
357 "ಆತನು ಯತಾರ್ಥವಂತರಿಗೆ ಸುಜ್ಞಾನವನ್ನು ಕೂಡಿಸಿಡುವನು" ಜ್ಞಾನೊಕ್ತಿಗಳು 2:07
358 "ಧರ್ಮವು ಯತಾರ್ಥವಂತರನ್ನು ಉದ್ಧರಿಸುವುದು" ಜ್ಞಾನೊಕ್ತಿಗಳ 11;6
359 "ಯತಾರ್ಥ ಚಿತ್ತವೇ ನಿನಗೆ ಸಂತೋಷ; ಸುಜ್ಞಾನದ ರಹಸ್ಯಗಳನ್ನು ನನಗೆ ತಿಳಿಯಪಡಿಸು" ಕೀರ್ತನೆಗಳು 51:06
360 "ನೀವು ಬಹು ಸಂತಾನವುಳ್ಳವರಾಗಿ ಹೆಚ್ಚಿರಿ, ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ" ಆದಿಕಾಂಡ 1:28