361 "ಅವರನ್ನು ಕುಗ್ಗಿಸಿದಂತೆ ಇನ್ನು ಕುಗ್ಗಿಸುವುದಿಲ್ಲ, ನಿನ್ನ ಶತೃಗಳೆಲ್ಲರನ್ನು ನಿನಗೆ ಅದೀನಮಾಡುವೆನು 1 ಪೂರ್ವಕಾಲವೃತ್ತಾಂತ 17:10
362 "ಆತನು ಜನಾಂಗಗಳನ್ನು ನಮಗೆ ಅದೀನಪಡಿಸಿ ಪರಕುಲದವರನ್ನು ನಮ್ಮ ಕಾಲ ಕೆಳಗೆ ಹಾಕಿದ್ದಾನೆ" ಕೀರ್ತನೆಗಳು 47;3
363 "ಆಗ ಅವನ ರಾಜ್ಯ ಪ್ರಭುತ್ವಗಳು ಸಮಸ್ತ ಭೂಮಂಡಲದಲ್ಲಿನ ರಾಜ್ಯಗಳಮಹಿಮೆಯೂ ಪರಾತ್ಪರನ ಭಕ್ತ ಜನರಿಗೆ ಕೊಡೋಣವಾಗುವವು" ದಾನಿಯೇಲ 7:27
364 "ಆತನು ನನ್ನ ಶತೃಗಳಿಗೆ ಪ್ರತಿದಂಡನೆ ಮಾಡುವ ದೇವರು, ಜನಾಂಗಗಳನ್ನು ನನಗೆ ಅದೀನ ಪಡಿಸುತ್ತಾನೆ 2 ಸಮುವೇಲ 22:48
365 "ನಾನು ನಿಮಗೆ ಕೊಟ್ಟ ಆಜ್ಞೆಗಳಿಗೆ ಸರಿಯಾಗಿ ನೀವು ನಡೆದರೆ ನೀವು ನನ್ನ ಸ್ನೇಹಿತರು ಯೋಹಾನ 15:15
366 "ಯೋಬನು ತನ್ನ ಸ್ನೇಹಿತರಿಗೋಸ್ಕರ ಪ್ರಾರ್ಥಿಸಿದ ಬಳಿಕ ಯೆಹೋವನು ಅವನ ದುಃಸ್ಥಿತಿಯನ್ನು ಹೋಗಲಾಡಿಸಿ ಅವನ ಸೊತ್ತನ್ನು ಮೊದಲಿಗಿಂತ ಎರಡರಷ್ಟಾಗಿ ಹೆಚ್ಚಿಸಿದನು" ಯೋಬ 42:10
367 "ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆ ಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು" ಯೆಶಾಯ 46:04
368 "ತನ್ನಲ್ಲಿನ ಮಮತೆಯಿಂದಲೂ ತಾಳ್ಮೆಯಿಂದಲೂ ಅವರನ್ನು ವಿಮೋಚಿಸಿ ಪುರಾತನ ಕಾಲದಲ್ಲೆಲ್ಲಾ ಎತ್ತಿಕೊಂಡು ಹೊರುತ್ತಾ ಬಂದನು" ಯೆಶಾಯ 63:09
369 "ಎಲೈ ಕಷ್ಟಪಡುವವರೇ ಹೊರೆ ಹೊತ್ತವರೇ ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ ನಾನು ನಿಮಗೆ ವಿಶ್ರಾಂತಿ ಕೊಡುವೆನು" ಮತ್ತಾಯ 11:20
370 "ಹದ್ದು ತನ್ನ ಮರಿಗಳನ್ನು ರೆಕ್ಕೆಗಳ ಮೇಲೆ ಹೊತ್ತುಕೊಳ್ಳುವಂತೆ ನಾನು ನಿಮ್ಮನ್ನು ಹೊತ್ತುಕೊಂಡು ನನ್ನ ಸ್ಥಳಕ್ಕೆ ಹೇಗೆ ಸೇರಿಸಿದೆನೋ ನೀವು ನೋಡಿದ್ದೀರಷ್ಟೆ" ವಿಮೋಚನಾಕಾಂಡ 19:04
371 ಆ ದಿನದಲ್ಲಿ ಅವರು ಹೊರಿಸಿದ ಹೊರೆಯು ನಿಮ್ಮ ಬೆನ್ನಿನಿಂದಲೂ ಹೂಡಿದ ನೊಗವು ಕತ್ತಿಯಿಂದಲೂ ತೊಲಗುವವು" ಯೆಶಾಯ 10:27
372 "ನಿನ್ನ ಚಿಂತಾ ಭಾರವನ್ನು ಯೆಹೋವನ ಮೇಲೆ ಹಾಕು ಆತನು ನಿನ್ನನ್ನು ಉದ್ಧಾರ ಮಾಡುವನು" ಕೀರ್ತನೆಗಳು 55:22
373 "ಯೆಹೋವನಲ್ಲಿ ಭರವಸವಿಡುವವರು ಚಿಯೋನ್ ಪರ್ವತದ ಹಾಗೆ ಇದ್ದಾರೆ, ಅದು ಕದಲುವುದಿಲ್ಲ" ಕೀರ್ತನೆಗಳು 125:01
374 "ಆತನು ನನ್ನ ಬಲಗಡೆಯಲ್ಲಿ ಇರುವುದರಿಂದ ನಾನು ಎಂದಿಗೂ ಕದಲುವುದಿಲ್ಲ" ಕೀರ್ತನೆಗಳು 16:08
375 "ಅರಸನು ಯೆಹೋವನಲ್ಲಿಯೇ ಭರವಸವಿಟ್ಟಿದ್ದಾನೆ, ಪರಾತ್ಪರನ ಕೃಪೆಯ ದೆಸೆಯಿಂದ ಅವನು ಕದಲುವುದೇ ಇಲ್ಲ" ಕೀರ್ತನೆಗಳು 21:07
376 "ನನ್ನ ಜನರು ಸಮಾಧಾನ ನಿವಾಸದಲ್ಲಿಯೂ ನಿರ್ಭಯ ನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು" ಯೆಶಾಯ 32:01
377 "ಸ್ಥಿರಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ ಅವನಿಗೆ ನಿನ್ನಲ್ಲಿ ಭರವಸವಿದೆ" ಯೆಶಾಯ 26:03
378 "ನೀನು ನನಗೆ ಬಲವಾದ ಆಶ್ರಯಸ್ಥಾನವಾಗಿರುತ್ತಿ" ಕೀರ್ತನೆಗಳು 71:07
379 "ಯೆಹೋವನ ನಾಮವು ಬಲವಾದ ಬುರುಜು, ಶಿಷ್ಟನು ಅದರೊಳಗೆ ಓಡಿಹೋಗಿ ಭದ್ರವಾಗಿರುವನು" ಜ್ಞಾನೋಕ್ತಿಗಳು 18:10
380 "ಅಪಾಯ ಕಾಲದಲ್ಲಿ ಅತನು ನನ್ನನ್ನು ಗುಪ್ತ ಸ್ಥಳದಲ್ಲಿ ಅಡಗಿಸುವನು, ತನ್ನ ಗುಡಾರವೆಂಬ ಆಶ್ರಯ ಸ್ಥಾನದಲ್ಲಿ ನನ್ನನ್ನು ಭದ್ರಪಡಿಸುವನು" ಕೀರ್ತನೆಗಳು 27:05