21"ದೇವರು ನನ್ನ ಬಲವಾದ ಕೋಟೆಯಾಗಿದ್ದಾನೆ ; ಆತನು ನನ್ನ ಮಾರ್ಗವನ್ನು ಸರಾಗ ಮಾಡುತ್ತಾನೆ" 2 ಸಮುವೇಲ
22"ಯೆಹೋವನು ಒಳ್ಳೆಯವನು; ಇಕ್ಕಟ್ಟಿನ ದಿನದಲ್ಲಿ ಆಶ್ರಯದುರ್ಗವಾಗಿದ್ದಾನೆ; ತನ್ನ ಮರೆಹೋಕ್ಕವರನ್ನು ಬಲ್ಲನು" ನಹೂಮ 1:07
23"ಸುನಿರೀಕ್ಷೆಯುಂಟಾದ ಸೆರೆಯವರೇ, ನಿಮ್ಮ ದುರ್ಗಕ್ಕೆ ಹಿಂದಿರುಗಿರಿ; ನಿಮಗೆ ಎರೆಡರಷ್ಟು ಸುಖವನ್ನು ದಯಪಾಲಿಸುವನು" ಜೆಕರ್ಯ 9:12
24"ಇವನಿಗೆ ಆಶ್ರಯವು ಗಿರಿದುರ್ಗ, ಅನ್ನವು ಉಚಿತವಾಗಿ ಒದಗುವದು, ನೀರೂ ನಿಸ್ಸಂದೇಹ" ಯೆಶಾಯ 33:16
25"ಆ ದಿವಸದಲ್ಲಿ ಯೆಹೂದ ದೇಶದೊಳಗೆ ಈ ಗೀತವನ್ನು ಹಾಡುವರು ನಮಗೆ ಬಲವಾದ ಪಟ್ಟಣವಿದೆ ಯೆಹೋವನು ತನ್ನ ರಕ್ಷಣೆಯನ್ನು ಕೋಟೆಯನ್ನಾಗಿಯೂ ಹೊರ ಪೌಳಿಯನ್ನಾಗಿಯೂ ಮಾಡಿದ್ದಾನೆ" ಯೆಶಾಯ 26:01
26"ಶತೃಗಳು ನನಗೆ ರಹಸ್ಯವಾಗಿ ಒಡ್ಡಿದ ಬಲೆಯೊಳಗೆ ಸಿಕ್ಕಿ ಬೀಳದಂತೆ ನನ್ನನ್ನು ಕಾಪಾಡು;" ಕೀರ್ತನೆಗಳು 31:04
27"ಯೆಹೋವನು ಸನ್ಮಾರ್ಗಿಗೆ ಆಶ್ರಯ; ಕೆಡುಕನಿಗೆ ನಾಶನ" ಜ್ಞಾನೋಕ್ತಿಗಳು 10:29
28"ನಾನು ನಿನ್ನನ್ನು ನನ್ನ ಜನವೆಂಬ ಅವರಿಗೆ ಶೋಧಕನನ್ನಾಗಿ ನೇಮಿಸಿದ್ದೇನೆ; ನೀನು ಅವರ ನಡತೆಯನ್ನು ಪರೀಕ್ಷಿಸಿ ತಿಳಿದುಕೊಳ್ಳಬೇಕು" ಯೆರೆಮೀಯ 6:27
29"ಹಿಂಡಿಗೆ ರಕ್ಷಣೆಯಾದ ಹೂಡೆಯೇ, ಚಿಯೋನ್ ಯುವತಿಯ ಗುಡ್ಡವೇ, ನಿನ್ನ ಹಿಂದಿನ ಆಡಳಿತವು ನಿನಗೆ ದೊರೆಯುವದು, ಯೆರೂಸಲೇಮ್‍ಪುರಿಯ ರಾಜ್ಯಾಧಿಕಾರವು ನಿನಗೆ ಲಭಿಸುವದು " ಮೀಕ 4:08
30"ದೇವರೇ ನೀನು ನನಗೆ ದುರ್ಗಸ್ಥಾನವಲ್ಲವೇ; ಯಾಕೆ ನನ್ನನ್ನು ತಳ್ಳಿಬಿಟ್ಟಿ? ನಾನು ಯಾಕೆ ಶತೃಬಾಧೆಯಿಂದ ದುಃಖಿಸುತ್ತಾ ವಿಕಾರಿಯಾಗಿ ಅಲೆಯಬೇಕು" ? ಕೀರ್ತನೆಗಳು 43:02
31"ನನಗೆ ಶೌರ್ಯವೆಂಬ ನಡುಕಟ್ಟನ್ನು ಬಿಗಿಯುವವನೂ ನನ್ನ ಮಾರ್ಗವನ್ನು ಸರಾಗಮಾಡುವವನೂ ಆತನೇ" ಕೀರ್ತನೆಗಳು 18:32
32"ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ ನಿರ್ಬಲನಿಗೆ ಬಹುಬಲವನ್ನು ದಯಪಾಲಿಸುತ್ತಾನೆ" ಯೆಶಾಯ 40:29
33"ನೀನು ನನಗೆ ಯುದ್ಧಕ್ಕಾಗಿ ಶೌರ್ಯವೆಂಬ ನಡುಕಟ್ಟನ್ನು ಬಿಗಿದಿದ್ದೀ; ಎದುರಾಳಿಯನ್ನು ಕುಗ್ಗಿಸಿ ನನಗೆ ಆಧೀನಮಾಡಿದ್ದೀ" ಕೀರ್ತನೆಗಳು 18:39
34ಯೆಹೋವನು ನನಗೆ ಬಲವೂ ಗುರಾಣ ಯೂ ಆಗಿದ್ದಾನೆ; ನಾನು ಆತನಲ್ಲಿ ಭರವಸವಿಟ್ಟೆನು, ನನಗೆ ಸಹಾಯವು ಉಂಟಾಯಿತು ಆದಕಾರಣ ನನ್ನ ಹೃದಯವು ಹರ್ಷಿಸುವುದು; ಕೀರ್ತನಾರೂಪವಾಗಿ ಆತನನ್ನು ಸ್ತುತಿಸುವೆನು" ಕೀರ್ತನೆಗಳು 28:07
35"ಯೆಹೋವನು ತನ್ನ ಜನರಿಗೆ ಬಲವನ್ನು ಅನುಗ್ರಹಿಸುವನು ಆತನು ತನ್ನ ಪ್ರಜೆಗೆ ಸುಕ್ಷೇಮವನ್ನು ದಯಪಾಲಿಸುವನು" ಕೀರ್ತನೆಗಳು 29:11
36ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು" ಕೀರ್ತನೆಗಳು 46:01
37"ನನ್ನ ಬಲವೇ ನಿನ್ನನ್ನು ಹಾಡಿ ಹರಸುವೆನು ನನ್ನ ಆಶ್ರಯದುರ್ಗ ಕೃಪಾನಿಧಿಯೂ ದೇವರೇ" ಕೀರ್ತನೆಗಳು 59:17
38"ಯೆಹೋವನನ್ನು ನಿರೀಕ್ಷಿಸುವವರೋ ಹೊಸಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು ಏರುವರು; ಓಡಿ ದಣ ಯರು, ನಡೆದು ಬಳಲರು" ಯೆಶಾಯ 40:31
39"ಕರ್ತನಾದ ಯೆಹೋವನೇ ನನ್ನ ಬಲ; ಆತನು ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕುಮಾಡಿ ತನ್ನ ಉನ್ನತ ಪ್ರದೇಶಗಳಲ್ಲಿ ನನ್ನನ್ನು ನಡಿಸುತ್ತಾನೆ " ಹಬಕ್ಕೂಕ 3:19
40"ಸಿಂಹಗಳ ಬಾಯಿ ಕಟ್ಟಿದರು; ಬೆಂಕಿಯ ಬಲವನ್ನು ಆರಿಸಿದರು ಕತ್ತಿಯ ಬಾಯಿಗೆ ತಪ್ಪಿಸಿ ಕೊಂಡರು; ನಿರ್ಬಲರಾಗಿದ್ದು ಬಲಿಷ್ಟರಾದರು; ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು ಪರರ ದಂಡುಗಳನ್ನು ಓಡಿಸಿಬಿಟ್ಟರು" ಇಬ್ರಿಯರಿಗೆ 11:34