381 "ಅವನು ನನ್ನಲ್ಲಿ ಆಸಕ್ತನಾಗಿರುವುದರಿಂದ ಅವನನ್ನು ರಕ್ಷಿಸುವೆನು" ಕೀರ್ತನೆಗಳು 91:14
382 "ನಿಮ್ಮಲ್ಲಿ ಪ್ರವಾದಿ ಇದ್ದರೆ ನಾನು ಅವನಿಗೆ ಜ್ಞಾನ ದೃಷ್ಠಿಯಲ್ಲಿ ಕಾಣ ಸಿಕೊಳ್ಳುವೆನು, ಇಲ್ಲವೆ ಸ್ವಪ್ನದಲ್ಲಿ ಅವನ ಸಂಗಡ ಮಾತಾಡುವೆನು" ಅರಣ್ಯಕಾಂಡ 12:06
383"ನಾನು ಬಾಯಿ ತೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು, ಲೋಕಾದಿಯಿಂದ ಮರೆಯಾದವುಗಳನ್ನು ಹೊರಪಡಿಸುವೆನು" ಮತ್ತಾಯ 13:35
384 "ನಾನು ಕತ್ತಲೆಯಲ್ಲಿರುವ ಗುಪ್ತ ಕಾರ್ಯಗಳನ್ನು ಬೆಳಕಿಗೆ ತರುವೆನು, ಹೃದಯದ ಯೋಚನೆಗಳನ್ನು ಪ್ರತ್ಯಕ್ಷ ಪಡಿಸುವೆನು, ಆ ಕಾಲದಲ್ಲಿ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದಲೇ ಬರುವುದು" 1ಕೊರಿಂಥದವರಿಗೆ 4:05
385 "ನಾನು ನಿನ್ನನ್ನು ಅಭಿವೃದ್ಧಿಪಡಿಸಿ ನಿನ್ನ ಸಂತತಿಯನ್ನು ಹೆಚ್ಚಿಸುವೆನು; ಅನೇಕ ಜನಾಂಗಗಳು ನಿನ್ನಿಂದ ಉಂಟಾಗುವಂತೆ ಮಾಡುವೆನು, ನಿನ್ನ ತರುವಾಯ ನಿನ್ನ ಸಂತತಿಗೆ ಈ ದೇಶವನ್ನು ಶಾಶ್ವತ ಸ್ವಾಸ್ಥ್ಯವನ್ನಾಗಿ ಕೊಡುವೆನು" ಆದಿಕಾಂಡ 48:04
386 "ನಿನ್ನ ತಂದೆಯ ಆಶೀರ್ವಾದಗಳು ಆದಿಯಿಂದಿದ್ದ ಪರ್ವತಗಳಿಂದುಂಟಾಗುವ ಮೇಲುಗಳಿಗಿಂತಲೂ ಉತ್ತಮ ವಸ್ತುಗಳಿಗಿಂತಲೂ ವಿಶೇಷವಾಗಿವೆ" ಆದಿಕಾಡ 49:26
387 "ಅವರನ್ನೂ ಅಭಿಷೇಕಿಸಬೇಕು, ಈ ಅಭಿಷೇಕದಿಂದ ಯಾಜಕತ್ವವು ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾಗಿರುವುದು ಅಂದನು" ವಿಮೋಚನಾಕಾಂಡ 40:15
388 "ಆ ಒಡಂಬಡಿಕೆ ಏನೆಂದರೆ ಅವನಿಗೂ ಅವನ ತರುವಾಯ ಅವನ ಸಂತತಿಯವರಿಗೂ ಯಾಜಕತ್ವವುಶಾಶ್ವತವಾಗಿಯೇ ಇರುವುದೆಂದು ಮಾತು ಕೊಡುತ್ತೇನೆ" ಅರಣ್ಯಕಾಂಡ 25:01
389 "ಅವನು ಎಂದೂ ಕದಲುವುದಿಲ್ಲ; ನೀತಿವಂತನನ್ನು ಯಾವಾಗಲೂ ನೆನಸುವರು" ಕೀರ್ತನೆ 112:06
390 "ಯೆಹೋವನೇ ನಿನ್ನ ಅಶೀರ್ವಾದವು ನಿನ್ನ ಪ್ರಜೆಯ ಮೇಲೆ ಇರಲಿ" ಕೀರ್ತನೆಗಳು 3:08
391: "ಯಾವನು ಶುದ್ಧ ಹಸ್ತವೂ ನಿರ್ಮಲ ಮನಸ್ಸೂ ಉಳ್ಳವನಾಗಿದ್ದಾನೋ ಅವನೇ ಯೆಹೋವನಿಂದಶುಭವನ್ನು ಹೊಂದುವನು" ಕೀರ್ತನೆಗಳು 24:4,5
392 "ಯೆಹೋವನ ಆಶೀರ್ವಾದವು ಯಾರಿಗಿರುವುದೋ ಅವರು ದೇಶವನ್ನು ಅನುಭವಿಸುವರು" ಕೀರ್ತನೆಗಳು 37:22
393 "ನಿನ್ನ ಕೃಪೆಯಿಂದ ಸಂವತ್ಸರಕ್ಕೆ ಸುಭಿಕ್ಷ ಕಿರೀಟವನ್ನು ಇಟ್ಟಿದ್ದೀ, ನೀನು ಹಾದು ಹೊಗುವ ಮಾರ್ಗದಲ್ಲೆಲ್ಲಾ ಸಮೃದ್ಧಿಕರವಾದ ವೃಷ್ಠಿಯು ಸುರಿಯುವುದು" ಕೀರ್ತನೆಗಳು 65:11
394 "ಇಸ್ರಾಯೇಲ್ಯರಿಗೋ ಯೆಹೋವನಿಂದ ಶಾಶ್ವತ ರಕ್ಷಣೆಯು ದೊರೆಯುವುದು, ಯುಗ ಯುಗಾಂತರಕ್ಕೂ ನಾವು ನಾಚಿಕೆಗೆ ಈಡಾಗುವುದಿಲ್ಲ" ಯೆಶಾಯ 45:17
395 "ನೀತಿವಂತನ ವಂಶವು ಶುಭ ಹೊಂದುವುದು, ಅವನ ಮನೆಯಲ್ಲಿ ಧನೈಶ್ವರ್ಯಗಳಿರುವವು ಅವನ ನೀತಿಯು ಸದಾ ಕಾಲವೂ ಫಲಿಸುತ್ತಿರುವುದು" ಕೀರ್ತನೆಗಳು 112:2,3
396 "ಯೆಹೋವನು ನಿಮ್ಮನ್ನೂ ನಿಮ್ಮ ಮಕ್ಕಳನ್ನು ಅಭಿವೃದ್ಧಿಪಡಿಸಲಿ, ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ" ಕೀರ್ತನೆಗಳು 115
397 "ಯೆಹೋವನ ಅಶೀರ್ವಾದವು ಭಾಗ್ಯದಾಯಕವು ಅದು ವ್ಯಸನವನ್ನು ಸೇರಿಸದು" ಜ್ಞಾನೋಕ್ತಿಗಳು 10:22
398 "ದಯಾದೃಷ್ಟಿಯುಳ್ಳವನು ಅಶೀರ್ವಾದ ಪಡೆಯುವನು, ತನ್ನ ಅನ್ನವನ್ನು ಬಡವರಿಗೆ ಕೊಡುತ್ತಾನಲ್ಲವೇ" ಜ್ಞಾನೋಕ್ತಿಗಳು 10:22
399 "ನಂಬಿಗಸ್ತನು ಅಶೀರ್ವಾದ ಪೂರ್ಣನಾಗುವನು ಜ್ಞಾನೋಕ್ತಿಗಳು 28:20
400 "ನಾನು ಅವರನ್ನೂ ನನ್ನ ಪರ್ವತದ ಸುತ್ತಣ ಪ್ರದೇಶಗಳನ್ನೂ ಅಶೀರ್ವಾದಿಸಿ ಸುಖಪಡಿಸುವೆನು, ಕಾಲ ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು" ಯೆಹೆಜ್ಕೇಲ 34:26