401 " ಆತನು ಪರಲೋಕದಲ್ಲಿನ ಸಕಲ ಆತ್ಮೀಕ ವರಗಳನ್ನು ನಮಗೆ ಕ್ರಿಸ್ತಯೇಸುವಿನಲ್ಲಿ ಅನುಗ್ರಹಿಸಿದ್ದಾನೆ" ಎಫೆಸದವರಿಗೆ 1:03
402 "ಇವರ ಸಂತಾನವು ಜನಾಂಗಗಳಲ್ಲಿ ಪ್ರಖ್ಯಾತವಾಗುವುದು ಇವರ ಸಂತತಿಯು ಅನ್ಯ ದೇಶೀಯರಲ್ಲಿ ಹೆಸರುಗೊಳ್ಳುವುದು ಇವರನ್ನು ನೋಡುವವರೆಲ್ಲರೂ ಯೆಹೋವನು ಆಶೀರ್ವದಿಸಿದ ವಂಶವು ಇದೇ ಎಂದು ಒಪ್ಪಿಕೊಳ್ಳುವರು" ಯೆಶಾಯ 61:09
403 "ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ ್ಣೀರನ್ನು ನೋಡಿದ್ದೇನೆ, ನೀನು ಗುಣ ಹೊಂದುವಿ" 2 ಅರಸುಗಳು 20:5
404 "ನೀನು ಪ್ರಾರ್ಥಿಸುವಿ, ನಾನು ಲಾಲಿಸುವೆನು, ಆತನಿಗೆ ಹರಕೆಗಳನ್ನು ಒಪ್ಪಿಸುವಿ" ಯೋಬ 22:27
405 "ಅವನು ದೇವರನ್ನು ಪ್ರಾರ್ಥಿಸಿ ಆತನ ಒಲುಮೆಗೆ ಪಾತ್ರನಾಗಿ ಆತನ ದರ್ಶನ ಮಾಡಿ ಉತ್ಸಾಹ ಧ್ವನಿಗೈದು ತಿರುಗಿ ಆತನಿಂದ ನೀತಿವಂತನೆನಿಸಿಕೊಳ್ಳುವನು" ಯೋಬ 33;26
406 "ಯಾವ ಸಂಬಂಧವಾಗಿಯೂ ಚಿಂತೆ ಮಾಡದೆ ಸರ್ವ ವಿಶಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ" ಪಿಲಿಪ್ಪಿಯವರಿ 4:06
407 "ಭೂಮಿಯು ಇರುವತನಕ ಬಿತ್ತನೆಯೂ ಕೊಯಿಲೂ ಚಳಿಯೂ ಸೆಖೆಯೂ ಬೇಸಿಗೆ ಕಾಲವೂ ಹಿಮಕಾಲವೂ ಹಗಲೂ ಇರುಳೂ ಇವುಗಳ ಕ್ರಮ ತಪ್ಪುವುದೇ ಇಲ್ಲ" ಆದಿಕಾಂಡ 8:22
408 "ಅಳುತ್ತಾ ಬಿತ್ತುವವರು ಹಾಡುತ್ತಾ ಕೊಯ್ಯುವರು, ದುಃಖಿಸುತ್ತಾ ಬೀಜವನ್ನು ತೆಗೆದುಕೊಂಡು ಹೋಗುವವನು ಹರ್ಷಿಸುತ್ತಾ ಸಿವುಡುಗಳನ್ನು ಹೊತ್ತುಕೊಂಡು ಬರುವನು" ಕೀರ್ತನೆಗಳು 126:6,7
409 "ಆಗ ನೀವು ಹೊಲದಲ್ಲಿ ಬೀಜ ಬಿತ್ತುವುದಕ್ಕೆ ಆತನು ಬಿತ್ತನೆಯ ಮಳೆಯನ್ನು ದಯಪಾಲಿಸುವನು; ನೆಲದ ಬೆಳೆಯಿಂದ ಸಾರವಾದ ಆಹಾರವನ್ನೂ ಸಮೃದ್ಧಿಯಾಗಿ ಒದಗಿಸುವನು" ಯೆಶಾಯ 30:23
410 "ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಆಹಾರವನ್ನೂ ಒದಗಿಸದ ಹೊರತು ಹೇಗೆ ಆಕಾಶಕ್ಕೆ ಮಳೆಯೂಹಿಮವೂ) ಸುಮ್ಮನೆ ಹಿಂತಿರುಗುವುದಿಲ್ಲವೋ ಹಾಗೆಯೇ ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸದೆ ನನ್ನ ಕಡೆಗೆ ವ್ಯರ್ಥವಾಗಿ ಹಿಂತಿರುಗುವುದಿಲ್ಲ" ಯೆಶಾಯ 55:10
411 "ಕೊಯ್ಯುವವನಿಗೆ ಈಗಲೇ ಕೂಲಿ ದೊರೆಯುತ್ತದೆ ಅವನು ನಿತ್ಯಜೀವಕ್ಕೆ ಫಲವನ್ನು ಕೂಡಿಸಿಡುತ್ತಾನೆ ಹೀಗೆ ಬಿತ್ತುವವನಿಗೂ ಕೊಯ್ಯುವವನಿಗೂ ಕೂಡ ಸಂತೋಷವಾಗುತ್ತದೆ" ಯೋಹಾನ 4:36
412 "ಸ್ವಲ್ಪವಾಗಿ ಬಿತ್ತುವವನು ಪೈರನ್ನು, ಸ್ವಲ್ಪವಾಗಿ ಕೊಯ್ಯುವನು; ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು ಎಂದು ತಿಳಿದುಕೊಳ್ಳಿರಿ" 2 ಕೊರಿಂಥದವರಿಗೆ 9:6
413 "ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ, ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು" ಗಲಾತ್ಯ 6:07
414 "ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಆಹಾರವನ್ನೂ ಕೊಡುವಾತನು ನಿಮಗೂ ಬಿತ್ತುವುದಕ್ಕೆ ಬೀಜವನ್ನು ಕೊಟ್ಟು ಹೆಚ್ಚಿಸಿ ನಿಮ್ಮ ಧರ್ಮಕಾರ್ಯಗಳಿಂದಾಗುವ ಫಲಗಳನ್ನು ವೃದ್ಧಿಪಡಿಸುವನು" 2 ಕೊರಿಂಥದವರಿಗೆ 9:10
415 "ನೀನೇ ನನ್ನ ದೀಪವನ್ನು ಹೊತ್ತಿಸುವವನಲ್ಲವೇ, ನನ್ನ ದೇವರಾದ ಯೆಹೋವನು ನನಗೆ ಬೆಳಕನ್ನು ಕೊಟ್ಟು ಕತ್ತಲನ್ನು ಪರಿಹರಿಸುವನು" ಕೀರ್ತನೆಗಳು 18:28
416 "ಯೆಹೋವನು ನನಗೆ ಬೆಳಕೂ ರಕ್ಷಕನೂ ಆಗಿದ್ದಾನೆ ನಾನು ಯಾರಿಗೆ ಭಯಪಟ್ಟೇನು" ಕೀರ್ತನೆಗಳು 27:1
417 "ಯೆಹೋವನು ಹಗಲು ಹೊತ್ತಿನಲ್ಲಿ ದಾರಿ ತೋರಿಸುವುದಕ್ಕೆ ಮೇಘ ಸ್ಥಂಭದಲ್ಲಿಯೂ, ರಾತ್ರಿ ವೇಳೆಯಲ್ಲಿ ಬೆಳಕು ಕೋಡುವುದಕ್ಕೆ ಅಗ್ನಿಸ್ಥಂಭದಲ್ಲಿಯೂ ಇದ್ದನು" ವಿಮೋಚನಾಕಾಂಡ 13:21
418 "ನಿನ್ನ ಬಳಿ ಜೀವದ ಬುಗ್ಗೆ ಉಂಟಲ್ಲಾ; ನಿನ್ನ ತೇಜಸ್ಸು ನಮಗೆ ಬೆಳಕು ಕೊಡುತ್ತದೆ" ಕೀರ್ತನೆಗಳು 36:09
419 "ಆಜ್ಞೆಯೇ ದೀಪ, ಉಪದೇಶವೇ ಬೆಳಕು" ಜ್ಞಾನೋಕ್ತಿಗಳು 6:23
420 "ಏಳು ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ" ಯೆಶಾಯ 60:01