421 "ಈ ಧರ್ಮ ಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ, ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವುದನ್ನೆಲ್ಲಾ ಕೈಕೊಂಡು ನಡಿ, ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ" ಯೆಹೋಶುವ 1:08
422 "ಅವನು ನೀರಿನ ಕಾಲುವೆಯ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವುದು" ಕೀರ್ತನೆಗಳು 1:03
423 "ಯೆಹೊವನು ನಿನ್ನ ಕಾರ್ಯವನ್ನು ಸಿದ್ಧಿಗೆ ತರುವನು" ಕೀರ್ತನೆಗಳು 138:08
424 "ಮುಂಜಾನೆ ಬೀಜವನ್ನು ಬಿತ್ತು, ಸಂಜೆಯ ತನಕ ಕೈ ತೆಗೆಯ ಬೇಡ ಇದು ಸಫಲವೋ ಒಂದು ವೇಳೆ ಎರಡೂ ಚೆನ್ನಾಗುವವೋ ನಿನಗೆ ತಿಳಿಯದು" ಪ್ರಸಂಗಿ 11:06
425 "ನಾನೇ ಬಾಯಿಬಿಟ್ಟು ಅವನನ್ನು ಕರೆದು ಬರಮಾಡಿದ್ದೇನೆ, ಅವನ ಮಾರ್ಗವು ಸಾರ್ಥಕವಾಗುವುದು" ಯೆಶಾಯ 48:15
426 "ತನ್ನ ಸಂತಾನವನ್ನು ನೋಡುವನು, ಚಿರಂಜೀವಿಯಾಗಿರುವನು, ನನ್ನ ಸಂಕಲ್ಪವು ಇವನ ಕೈಯಿಂದ ನೆರವೇರುವುದು" ಯೆಶಾಯ 53:10
427 "ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಬಳಿ ವ್ಯರ್ಥವಾಗಿ ಹಿಂದಿರುಗದು" ಯೆಶಾಯ 55:11
428 "ನೀತಿವಂತರು ಖರ್ಜೂರದ ಮರದಂತೆ ಬೆಳೆಯುವರು, ಲೆಬನೋನಿನ ದೇವದಾರು ವೃಕ್ಷದ ಹಾಗೆ ವೃದ್ಧಿಯಾಗುವರು" ಕೀರ್ತನೆಗಳು 92:12
429 "ನೀತಿವಂತರು ಯೆಹೋವನ ಆಲಯದಲ್ಲಿ ಸಸಿಗಳಂತೆ) ನೆಡಲ್ಪಟ್ಟವರು ನಮ್ಮ ದೇವರ ಅಂಗಳದಲ್ಲಿ ಚೆನ್ನಾಗಿ ಬೆಳೆಯುವರು" ಕೀರ್ತನೆಗಳು 92:13
430 "ಶ್ರೇಷ್ಟ ವರಗಳಿಂದ ನಿನ್ನ ಆಶೆಯನ್ನು ಪೂರ್ತಿಗೊಳಿಸುತ್ತಾನೆ ಹದ್ದಿಗೆ ಬರುವಂತೆಯೇ ನಿನಗೆ ಯೌವನವನ್ನು ತಿರುಗಿ ಬರಮಾಡುತ್ತಾನೆ" ಕೀರ್ತನೆಗಳು 103:05
431 "ತರುವಾಯ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು" ಯೋವೇಲ 2:28
432 "ನನ್ನ ವಿವೇಕ ಬೋಧನೆಗೆ ಕಿವಿಗೊಡು, ಹೀಗಾದರೆ ನೀನು ಸುಬುದ್ಧಿಯನ್ನು ಕೈಗೊಳ್ಳುವಿ" ಜ್ಞಾನೋಕ್ತಿಗಳು 5:1,2
433 "ಮನೆಯನ್ನು ಕಟ್ಟುವುದಕ್ಕೆ ಜ್ಞಾನವೇ ಸಾಧನ, ಅದನ್ನು ಸ್ಥಿರಪಡಿಸುವುದಕ್ಕೆ ವಿವೇಕವೇ ಅಧಾರ" ಜ್ಞಾನೋಕ್ತಿಗಳು 24:03
434 "ಅರಣ್ಯವೂ ಮರುಭೂಮಿಯೂ ಆನಂದಿಸುವವು ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವುದು" ಯೆಶಾಯ 35:01
435 "ಬಳಿಕ ಉನ್ನತಲೋಕದಿಂದ ದಿವ್ಯಾತ್ಮ ಧಾರೆಯು ನಮ್ಮ ಮೇಲೆ ಸುರಿಸಲ್ಪಡುವುದು, ಆಗ ಅರಣ್ಯವು ತೋಟವಾಗುವುದು" ಯೆಶಾಯ 32:15
436 "ಬೋಳು ಗುಡ್ಡಗಳಲ್ಲಿ ನದಿಗಳನ್ನು ತಗ್ಗುಗಳಲ್ಲಿ ಒರತೆಗಳನ್ನು ಹೊರಡಿಸಿ, ಅರಣ್ಯವನ್ನು ಕೆರೆಯನ್ನಾಗಿಯೂ ಮರುಭೂಮಿಯನ್ನು ಬುಗ್ಗೆಗಳಾಗಿಯೂ ಮಾಡುವೆನು" ಯೆಶಾಯ 41:18
437 "ಕೊರಕಲ ನೆಲವು ಸಮವಾಗುವುದು, ಯೆಹೋವನ ಮಹಿಮೆಯು ಗೋಚರವಗುವುದು, ಎಲ್ಲಾ ಮನುಷ್ಯರೂ ಅದನ್ನು ಒಟ್ಟಿಗೆ ಕಾಣುವರು" ಯೆಶಾಯ 4:4,5
438 "ಅರಣ್ಯದಲ್ಲಿ ಒರತೆಗಳು ಒಡೆಯುವವು, ಒಣನೆಲದಲ್ಲಿ ನದಿಗಳು ಹುಟ್ಟಿ ಹರಿಯುವವು, ಬೆಂಗಾಡು ಸರೋವರವಾಗುವುದು" ಯೆಶಾಯ 35:06
439 "ನಾನು ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸಿ ಅಡವಿಯಲ್ಲಿ ನದಿಗಳನ್ನು ಹರಿಸುವೆನು" ಯೆಶಾಯ 43:19
440 "ಬತ್ತಿದ ಭೂಮಿಯಲ್ಲಿ ಮಳೆಗರೆದು ಒಣನೆಲದಲ್ಲಿ ಕಾಲುವೆಗಳನ್ನು ಹರಿಸುವೆನು" ಯೆಶಾಯ 44:03