441 "ಯೆಹೋವನು ಚೀಯೋನನ್ನು ಸಂತೈಸೇ ಸಂತೈಸುವನು, ಅಲ್ಲಿನ ಹಾಳು ಪ್ರದೇಶಗಳನ್ನೆಲ್ಲಾ ಸುಧಾರಿಸಿ, ಕಾಡು ನೆಲವನ್ನು ಏದೇನ್ ಉದ್ಧ್ಯಾನದಂತೆಯೂ, ಬೀಳು ಭೂಮಿಯನ್ನು ಯೆಹೋವನ ವನದ ಹಾಗೂ ಕಳಕಳಿಸುವಂತೆ ಮಾಡುವನು" ಯೆಶಾಯ 51:03
442 "ಭೂ ಜಂತುಗಳೇ ಅಂಜ ಬೇಡಿರಿ, ಕಾಡಿನ ಕಾವಲಲ್ಲಿ ಹುಲ್ಲು ಮೊಳೆಯುವದು, ಮರವು ಹಣ್ಣುಬಿಡುವುದು, ಅಂಜೂರದ ಗಿಡವೂ ದ್ರಾಕ್ಷಾಲತೆಯೂ ಸಾರವತ್ತಾಗಿ ಫಲಿಸುವವು" ಯೋವೇಲ 2:22
443 "ಇಗೋ ದಾರಿಯಲ್ಲಿ ನಿಮ್ಮನ್ನು ಕಾಪಾಡುವುದಕ್ಕೂ ನಾನು ಗೊತ್ತು ಮಾಡಿರುವ ಸ್ಥಳಕ್ಕೆ ಕರೆತರುವುದಕ್ಕೂ ದೂತನನ್ನು ನಿಮ್ಮ ಮುಂದುಗಡೆಯಲ್ಲಿ ಕಳುಹಿಸುತ್ತೇನೆ" ವಿಮೋಚನಾಕಾಂಡ 23:20
444 "ಯೆಹೋವನು ಹಗಲು ಹೊತ್ತಿನಲ್ಲಿ ದಾರಿ ತೋರಿಸುವುದಕ್ಕೆ ಮೇಘ ಸ್ತಂಭದಲ್ಲಿಯೂ ರಾತ್ರಿ ವೇಳೆಯಲ್ಲಿ ಬೆಳಕು ಕೊಡುವುದಕ್ಕೆ ಅಗ್ನಿ ಸ್ತಂಭದಲ್ಲಿಯೂ ಇದ್ದು ಅವರ ಮುಂಭಾಗದಲ್ಲಿ ಹೋದನು" ವಿಮೋಚನಾಕಾಂಡ 13:21
445 "ಆತನು ಮೋಶೆಗೆ ತನ್ನ ಮಾರ್ಗವನ್ನೂ ಇಸ್ರಾಯೇಲ್ಯರಿಗೆ ತನ್ನ ಕೃತ್ಯಗಳನ್ನೂ ಪ್ರಕಟಿಸಿದನು" ಕೀರ್ತನೆಗಳು 103:07
446 "ಯೇಸು ಅವನಿಗೆ "ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ, ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ" ಯೋಹಾನ 14:06
447 "ಯೆಹೋವನು ದಯಾಳುವೂ ಸತ್ಯ ಸ್ವರೂಪನೂ ಆಗಿದ್ದಾನೆ, ದಾರಿತಪ್ಪಿದವರನ್ನು ಬೋಧಿಸಿ ಸನ್ಮಾರ್ಗದಲ್ಲಿ ನಡಿಸುವನು" ಕೀರ್ತನೆಗಳು 25:08
448 "ಯೆಹೋವನು ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವನು" ಕೀರ್ತನೆಗಳು 32:08
449 "ನಿನ್ನ ಕಾರ್ಯ ಭಾರವನ್ನು ಯೆಹೋವನಿಗೆ ವಹಿಸಿದರೆ ನಿನ್ನ ಉದ್ದೇಶಗಳು ಸಫಲವಾಗುವವು" ಜ್ಞಾನೋಕ್ತಿಗಳು 16:03
450 "ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ ಅದ್ಭುತ ಕಾರ್ಯಗಳೂ ಎಷ್ಟೋ ವಿಶೇಷವಾಗಿವೆ, ವಿವರಿಸಿ ಹೇಳೊಣವೆಂದರೆ ಅಸಾಧ್ಯವು ಅವು ಅಸಂಖ್ಯಾತವಾಗಿವೆ" ಕೀರ್ತನೆಗಳು 40:05
451 "ನೀನು ಆಲೋಚನೆಯಲ್ಲಿ ಶ್ರೇಷ್ಟನು, ಕಾರ್ಯದಲ್ಲಿ ಸಮರ್ಥನು; ನೀನು ಪ್ರತಿಯೋಬ್ಬನಿಗೂ ಅವನವನ ಕರ್ಮಕ್ಕೂ ನಡತೆಗೂ ತಕ್ಕ ಫಲವನ್ನು ಕೊಡಬೇಕೆಂದು ನರಜನ್ಮದವರ ಮಾರ್ಗವನ್ನೆಲ್ಲಾ ಕಣ್ಣಾರೆ ನೋಡುತ್ತೀ" ಯೆರೆಮೀಯ 33:19
452 " ವಿವೇಕವೂ ಸಹ ಅತಿಶಯಾಲೋಚನಾಪರನೂ ಸುಜ್ಞಾನ ಶ್ರೇಷ್ಟನೂ ಆಗಿರುವ ಸೇನಾಧೀಶ್ವರನಾದ ಯೆಹೋವನಿಂದಲೇ ಉಂಟಾಗುತ್ತದೆ" ಯೆಶಾಯ 28:29
453 " ಆತನು ಕತ್ತಲೆಯಲ್ಲಿರುವ ಗುಪ್ತ ಕಾರ್ಯಗಳನ್ನು ಬೆಳಕಿಗೆ ತರುವನು, ಹೃದಯದ ಯೋಚನೆಗಳನ್ನು ಪ್ರತ್ಯಕ್ಷಪಡಿಸುವನು, ಅ ಕಾಲದಲ್ಲಿ ಪ್ರತಿಯೋಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ಬರುವದು" 1ಕೊರಿಂಥದವರಿಗೆ 4:05
454 "ಆ ಗಳಿಗೆಯಲ್ಲಿ ನಿಮಗೆ ಸೂಚನೆಯಾಗುವಂಥ ಮಾತನ್ನೇ ಆಡಿರಿ ಮಾತಾಡುವವರು ನೀವಲ್ಲ, ಪವಿತ್ರಾತ್ಮನೇ" ಮಾರ್ಕ 13:11
455 "ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನು ಕ್ರಿಸ್ತೇಸುವಿನಲ್ಲಿ ಕಾಯುವುದು" ಫಿಲಿಪ್ಪಿಯವರಿಗೆ 4:07
456 "ಸೇನಾಧೀಸ್ವರನಾದ ಯೆಹೋವನು ಇಂತೆನ್ನುತ್ತಾನೆ - ಶೆಯಲ್ತಿಯೇಲಿನ ಮಗನೂ ನನ್ನ ಸೇವಕನೂ ಆದ ಜೆರುಬ್ಬಾಬೇಲನೇ, ಆ ದಿನದಲ್ಲಿ ನಾನು ನಿನ್ನನ್ನು ತೆಗೆದುಕೊಂಡು ಮುದ್ರೆಯುಂಗುರವಾಗಿ ಮಾಡಿಕೊಳ್ಳುವೆನು ಇದು ಯೆಹೋವನ ನುಡಿ" ಹಗ್ಗಾಯ 2:23
457 "ಆತನು ನಮ್ಮ ಮೇಲೆ ಮುದ್ರೆ ಹಾಕಿ ನಮ್ಮ ಹೃದಯಗಳಲ್ಲಿ ಪವಿತ್ರಾತ್ಮನನ್ನು ಸಂಚಕಾರವಾಗಿ ಅನುಗ್ರಹಿಸಿದ್ದಾನೆ" 2 ಕೊರಿಂಥದವರಿಗೆ 1:22
458 "ನಿಮ್ಮ ರಕ್ಷಣೆಯ ವಿಶಯವಾದ ಸುವಾರ್ತೆ ಎಂಬ ಸತ್ಯವಾಕ್ಯವನ್ನು ಕೇಳಿ ಕ್ರಿಸ್ತನಲ್ಲಿ ನಂಬಿಕೆ ಇಟ್ಟವರಾದ ನೀವು ಸಹ ವಾಗ್ದಾನ ಮಾಡಲ್ಪಟ್ಟು ಪವಿತ್ರಾತ್ಮನೆಂಬ ಮುದ್ರೆಯನ್ನು ಹೊಂದಿದ್ದೀರಿ" ಎಫೆಸದವರಿಗೆ 1:13
459 "ಯೆಹೋವನು ದೀನರ ವ್ಯಾಜ್ಯವನ್ನು ನಡಿಸುವನೆಂತಲೂ ಬಡವರ ನ್ಯಾಯವನ್ನು ಸ್ಥಾಪಿಸುವನೆಂತಲೂ ಬಲ್ಲೆನು" ಕೀರ್ತನೆಗಳು 140:12
460 "ಯೆಹೋವನಾದ ನಾನೆ ನಿನ್ನ ರಕ್ಷಕನು, ವಿಮೋಚಕನು ಯಾಕೋಬ್ಯರ ಶೂರನು " ಯೆಶಾಯ 49:26