461 "ನಾನು ನಂಬಿರುವಾತನನ್ನು ಬಲ್ಲೆನು ಆತನು ನನ್ನ ವಶದಲ್ಲಿಟ್ಟಿರುವುದನ್ನುಆತನು ಆ ದಿನಕ್ಕಾಗಿ ಕಾಪಾಡುವುದಕ್ಕೆ ಶಕ್ತನಾಗಿದ್ದಾನೆಂದು ದೃಢವಾಗಿ ನಂಬಿದ್ದೇನೆ" 2 ತಿಮೊಥೆಯನಿಗೆ 1: 12
462 "ತಾನೇ ಶೋಧಿಸಲ್ಪಟ್ಟು ಬಾಧೆಯನ್ನು ಅನುಭವಿಸಿದ್ದರಿಂದ ಶೋಧಿಸಲ್ಪಡುವವರಿಗೆ ಸಹಾಯ ಮಾಡುವುದಕ್ಕೆ ಶಕ್ತನಾಗಿದ್ದಾನೆ" ಇಬ್ರಿಯರಿಗೆ 2:18
463 "ಸಾರವುಳ್ಳ ಭೂಮಿಯೂ ಮೇಲಿನಿಂದ ಬೀಳುವ ಆಕಾಶದ ಮಂಜೂ ಇರುವ ಸ್ಥಳದಲ್ಲಿ ನಿನ್ನ ನಿವಾಸವಿರುವುದು" ಆದಿಕಾಂಡ 27:40
464 "ನನ್ನ ಜನರು ಸಮಾಧಾನ ನಿವಾಸದಲ್ಲಿಯೂ ನಿರ್ಭಯ ನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು" ಯೆಶಾಯ 32:18
465 "ಜ್ಞಾನಿಯ ನಿವಾಸದಲ್ಲಿ ಎಣ್ಣೆಯೂ ಶ್ರೇಷ್ಠ ಸಂಪತ್ತು ಇರುವವು" ಜ್ಞಾನೋಕ್ತಿಗಳು 21:20
466 "ಯೆಹೋವನು ದುಷ್ಟನ ಮನೆಯನ್ನು ಶಪಿಸುವನು ನೀತಿವಂತನ ನಿವಾಸವನ್ನೋ ಅಶೀರ್ವದಿಸುವನು" ಜ್ಞಾನೋಕ್ತಿಗಳು 3:33
467 "ನಾನು ನಿಮ್ಮ ನಡುವೆ ನಿವಾಸ ಮಾಡುವೆನು ನಿಮ್ಮನ್ನು ತಳ್ಳಿಬಿಡುವುದಿಲ್ಲ ನಿಮ್ಮ ನಡುವೆ ತಿರುಗಾಡುತ್ತಾ ನಿಮಗೆ ದೇವರಾಗಿರುವೆನು" ಯಾಜಕಕಾಂಡ 26:11,12
468 "ಆತನು ಯಾಕೊಬ್ ವಂಶದವರ ಎಲ್ಲಾ ನಿವಾಸಗಳಿಗಿಂತ ಚಿಯೋನಿನ ದ್ವಾರಗಳನ್ನು ಹೆಚ್ಚಾಗಿ ಪ್ರೀತಿಸುತ್ತಾನೆ" ಕೀರ್ತನೆಗಳು 87:02
469 "ನಿನ್ನ ಸತ್ಯಪ್ರಸನ್ನತೆಗಳನ್ನು ದೂತರನ್ನೋ ಎಂಬಂತೆ ಕಳುಹಿಸು ಅವೇ ನಿನ್ನ ಪರಿಶುದ್ಧ ಪರ್ವತಕ್ಕೆ ನನ್ನನ್ನು ಕರೆದುಕೊಂಡು ಹೋಗಿ ನಿನ್ನ ನಿವಾಸಕ್ಕೆ ಸೇರಿಸಲಿ" ಕೀರ್ತನೆಗಳು 43:03
470 "ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ ನಿಮಗೆ ನಿಜವಾಗಿಯೂ ಬಿಡುಗಡೆಯಾಗುವುದು" ಯೊಹಾನ 8:36
471 "ನನ್ನ ಶಿಶ್ಯರಾಗಿದ್ದು ಸತ್ಯವನ್ನು ತಿಳಿದುಕೊಳ್ಳುವಿರಿ, ಮತ್ತು ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವದು" ಯೊಹಾನ 8:31,32
472 "ಆ ಕರ್ತನು ದೇವರಾತ್ಮನೇ, ಕರ್ತನ ಆತ್ಮನು ಯಾರಲ್ಲಿದ್ದಾನೋ ಅವರಿಗೆ ಬಿಡುಗಡೆ ಉಂಟು" 2 ಕೊರಿಂಥದವರಿಗೆ 3:17
473 "ಅರಸೇ, ನಾನು ಸೇವಿಸುವ ದೇವರಿಗೆ ಚಿತ್ತವಿದ್ದರೆ ಆತನು ಧಗ ಧಗನೆ ಉರಿಯುವ ಆವಿಗೆಯೊಳಗಿಂದ ನಮ್ಮನ್ನು ಬಿಡಿಸಬಲ್ಲನು ಹೇಗೂ ನಿನ್ನ ಕೈಯೊಳಗಿಂದ ನಮ್ಮನ್ನು ಬಿಡಿಸುವನು" ದಾನಿಯೇಲ 3:17
474 "ಯೇಸು ಆಕೆಯನ್ನು ನೋಡಿ ಹತ್ತರಕ್ಕೆ ಕರೆದು ಆಕೆಗೆ- ಅಮ್ಮಾ, ನಿನಗೆ ರೋಗ ಬಿಡುಗಡೆಯಾಯಿತು ಎಂದು ಹೇಳಿ ಆಕೆಯ ಮೇಲೆ ತನ್ನ ಕೈಗಳನ್ನಿಟ್ಟನು" ಲೂಕ 13:12
475 "ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಕರ್ತನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ" ಕೀರ್ತನೆಗಳು 34:19
476 "ಕಷ್ಟಕಾಲದಲ್ಲಿ ನನಗೆ ಮೊರೆಯಿಡಿರಿ; ಬಿಡಿಸುವೆನು, ಆಗ ನನ್ನನ್ನು ಕೊಂಡಾಡುವಿರಿ" ಕೀರ್ತನೆಗಳು 50:15
477 "ಪ್ರಭಾವೈಶ್ವರ್ಯಗಳು ನಿನ್ನ ಸನ್ನಿಧಿಯಿಂದ ಬರುತ್ತವೆ ನೀನು ಸರ್ವಾಧಿಕಾರಿಯು , ಬಲ ಪರಾಕ್ರಮಗಳು ನಿನ್ನ ಹಸ್ತದಲ್ಲಿರುತ್ತವೆ" 1ಪೂರ್ವಕಾಲವೃತ್ತಾಂತ 29;12
478 "ಆತನ ಸಾನಿಧ್ಯದಲ್ಲಿ ಮಾನ ಮಹಿಮೆಗಳೂ ಆತನ ಪವಿತ್ರಾಲಯದಲ್ಲಿ ಬಲ ಸೌಂದರ್ಯಗಳೂ ಇರುತ್ತವೆ" ಕೀರ್ತನೆಗಳು 96:06
479 "ಯೆಹೋವನೇ ನಿನ್ನ ಸಮಾನರು ಯಾವನೂ ಇಲ್ಲ, ನೀನು ಮಹೋತ್ತಮನು, ನಿನ್ನ ನಾಮವು ಸಾಮಥ್ರ್ಯದಿಂದ ಕೂಡಿ ಮಹತ್ತಮವಾಗಿದೆ" ಯೆರೆಮೀಯ 10:06
480 "ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿ ಪಡಿಸಬೇಕೆಂಬ ಉದ್ಧೇಶದಿಂದಲೇ ನಿನ್ನನ್ನು ಸಾಯಿಸದೆ ಉಳಿಸಿದೆನು" ವಿಮೋಚನಾಕಾಂಡ 9:16