501 "ಕ್ರಿಸ್ತನೆಂಬ ಒಬ್ಬ ಪುರುಷನ ಕೃಪೆಯಿಂದಸಿಕ್ಕುವ ವರವು ಎಲ್ಲಾ ಮನುಷ್ಯರಿಗೆ ಹೇರಳವಾಗಿ ಸಿದ್ಧವಾಗಿರುವುದು" ರೋಮಾಪುರದವರಿಗೆ 5:15
502 "ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥ ವರವು ನಮ್ಮ ಕರ್ತನಾದ ಕ್ರಿಸ್ತಯೇಸುವಿನಲ್ಲಿರುವ ನಿತ್ಯಜೀವ" ರೋಮಾಪುರದವಾರಿಗೆ 6:23
503 "ದೇವರೇ ನಮ್ಮನ್ನು ತಿರುಗಿ ಉನ್ನತ ಸ್ಥಿತಿಗೇರಿಸು, ಪ್ರಸನ್ನ ಮುಖದಿಂದ ನೋಡು, ಆಗ ಉದ್ಧಾರವಾಗುವೆವು" ಕೀರ್ತನೆಗಳು 80:19
504 "ನಾವೆಲ್ಲರೂ ಮುಸುಕು ತೆಗೆದಿರುವ ಮುಖದಿಂದ ಕರ್ತನ ಪ್ರಭಾವವನ್ನು ದರ್ಪಣದಲ್ಲಿ ಕಾಣ ಸುತ್ತದೋ ಎಂಬಂತೆ ದೃಷ್ಠಿಸುವವರಾಗಿದ್ದು ಪ್ರಭಾವದಿಂದ ಅಧಿಕ ಪ್ರಭಾವಕ್ಕೆ ಹೋಗುತ್ತಾ ಆ ಪ್ರಭಾವದ ಸಾರೂಪ್ಯವುಳ್ಳವರೇ ಆಗುತ್ತೇವೆ" 2ಕೊರಿಂಥದವರಿಗೆ 3:18
505 "ನೀವು ನಿಮ್ಮ ದೇವರಾದ ಯೆಹೊವನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಈಗ ನಿಮಗೆ ಬೋಧಿಸುವ ಆತನ ಆಜ್ಞೆಗಳನ್ನು ಅನುಸರಿಸಿ ನಡೆದರೆ ಆತನು ಭೂಮಿಯ ಮೇಲಿರುವ ಎಲ್ಲಾ ಜನಾಂಗಗಳಿಗಿಂತಲೂ ನಿಮ್ಮನ್ನು ಉನ್ನತ ಸ್ಥಿತಿಗೆ ತರುವನು" ಧರ್ಮೋಪದೇಶಕಾಂಡ 28:01
506 " ನಿನಗೆ ಗೊತ್ತಿಲ್ಲದ ಜನಾಂಗವನ್ನು ನಿನ್ನ ಆದೀನಕ್ಕೆ ಕರೆಯುವಿ, ಇಸ್ರಾಯೇಲಿನ ಸದಮಲ ಸ್ವಾಮಿ ಎನಿಸಿಕೊಳ್ಳುವ ನಿನ್ನ ದೇವರಾದ ಯೆಹೋವನು ನಿನಗೆ ವೈಭವ ಕೊಟ್ಟಿರುವುದನ್ನು ನೋಡಿ ನಿನ್ನನ್ನು ತಿಳಿಯದ ಜನಾಂಗವು ನಿನ್ನ ಆಶ್ರಯಕ್ಕೆ ಓಡಿ ಬರುವುದು" ಯೆಶಾಯ 55:05
507 "ಹೀಗಿರುವುದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ, ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು" 1 ಪೇತ್ರ 5:6
508 "ಇಗೋ, ಮೇಘಗಳೊಂದಿಗೆ ಬರುತ್ತಾನೆ, ಎಲ್ಲರ ಕಣ್ಣುಗಳು ಆತನನ್ನು ಕಾಣುವವು, ಆತನನ್ನು ಇರಿದವರೂ ಸಹ ಕಾಣುವರು" ಪ್ರಕಟಣೆಗಳು 1:07
509 "ಯೆಹೋವನು ತಾನೇ ನಿನ್ನ ಮುಂದುಗಡೆ ಹೋಗುವನು ಆತನೇ ನಿನ್ನ ಸಂಗಡ ಇರುವನು" ಧರ್ಮೋಪದೇಶಕಾಂಡ 31:08
510 "ಯೆಹೋವನು ನಿಮಗೆ ಮುಂಬಲವಾಗಿ ಮುಂದರಿಯುವನು, ಇಸ್ರಾಯೇಲಿನ ದೇವರು ನಿಮಗೆ ಹಿಂಬಲವಾಗಿಯೂ ಇರುವನು" ಯೆಶಾಯ 52:12
511 "ಆಗ ಮನುಷ್ಯ ಕುಮಾರನು ಬಹು ಬಲದಿಂದಲೂ ಮಹಿಮೆಯಿಂದಲೂ ಮೇಘಗಳಲ್ಲಿ ಬರುವುದನ್ನು ಕಾಣುವರು" ಮಾರ್ಕ 13:06
512 "ಇಗೋ, ಮೇಘಗಳೊಂದಿಗೆ ಬರುತ್ತಾನೆ, ಎಲ್ಲರ ಕಣ್ಣುಗಳು ಆತನನ್ನು ಕಾಣುವವು, ಆತನನ್ನು ಇರಿದವರು ಸಹಕಾಣುವರು" ಪ್ರಕಟಣೆಗಳು 1:7
513 "ಅವರ ಅರಸನು ಅವರ ಮುಂದೆ ತೆರಳಿದ್ದಾನೆ, ಯೆಹೋವನು ಅವರ ಮುಂಭಾಗದಲ್ಲಿ ನಡೆಯುತ್ತಿದ್ದಾನೆ" ಮೀಕ 2:13
514 " ಅಲ್ಲಿ ಹೋರೇಬಿನಲ್ಲಿರುವ ಬಂಡೆಯ ಮೇಲೆ ನಾನೇ ನಿನ್ನೆದುರಾಗಿ ನಿಲ್ಲುವೆನು, ನೀನು ಬಂಡೆಯನ್ನು ಹೊಡೆದಾಗ ಅದರಿಂದ ನೀರು ಹೊರಡುವದು" ವಿಮೋಚನಾಕಾಂಡ 17:06
515 "ನನ್ನ ವಾಕ್ಯವನ್ನು ಕಾಪಾಡಿದ್ದರಿಂದ ಇಗೋ ನಿನ್ನೆದುರಿನಲ್ಲಿ ಒಂದು ಬಾಗಿಲನ್ನು ತೆರೆದಿಟ್ಟಿದ್ದೇನೆ" ಪ್ರಕಟಣೆಗಳು 3:08
516 "ಇಗೋ, ದಾರಿಯಲ್ಲಿ ನಿಮ್ಮನ್ನು ಕಾಪಾಡುವುದಕ್ಕೂ ನಾನು ಗೊತ್ತು ಮಾಡಿರುವ ಸ್ಥಳಕ್ಕೆ ಕರತರುವುದಕ್ಕೂ ದೂತನನ್ನು ನಿಮ್ಮ ಮುಂದುಗಡೆ ಕಳುಹಿಸುತ್ತೇನೆ" ವಿಮೋಚನಾಕಾಂಡ 23:20
517 "ನನ್ನ ಪ್ರಭಾವವು ನಿನ್ನೆದುರಾಗಿ ದಾಟಿಹೋಗುವ ಕಾಲದಲ್ಲಿ, ನಾನು ಈ ಬಂಡೆಯ ಸಂಧಿಯಲ್ಲಿ ನಿನ್ನನ್ನು ಇರಿಸಿ ನಿನ್ನ ಮುಂದೆ ದಾಟಿ ಹೋಗುವ ತನಕ ನಿನ್ನ ಮೇಲೆ ಕೈ ಮುಚ್ಚುವೆನು" ವಿಮೋಚನಾಕಾಂಡ 33:22
518 "ನನ್ನ ದೂತನು ನಿಮ್ಮ ಮುಂದೆ ಮುಂದೆ ನಡೆದು ಅಮೋರಿಯರೂ ಹಿತ್ತೀಯರೂ ಪೆರಿಜೀಯರೂ ಕಾನಾನ್ಯರೂ ಹಿವ್ವಿಯರೂ ಯೆಬೂಸಿಯರೂ ಇರುವ ದೇಶಕ್ಕೆ ನಿಮ್ಮನ್ನು ಸೇರಿಸುವನು" ವಿಮೋಚನಾಕಾಂಡ 23:23
519 "ಆತನು ತನ್ನ ಸರ್ವೋತ್ತಮತ್ವವನ್ನು ನಿನ್ನೆದುರಾಗಿ ದಾಟಿ ಹೋಗುವಂತೆ ಮಾಡುವೆನು, ಯೆಹೋವನ ನಾಮ ಮಹತ್ವವನ್ನು ನಿನ್ನೆದುರಾಗಿ ಪ್ರಕಟಿಸುವೆನು" ವಿಮೋಚನಾಕಾಂಡ 33:18
520 " ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ" ಮತ್ತಾಯ 28:20