521 "ಎಲ್ಲಾ ದೊರೆತನವನ್ನೂ ಎಲ್ಲಾ ಅಧಿಕಾರವನ್ನೂ ಬಲವನ್ನೂ ನಿವೃತ್ತಿ ಮಾಡಿ ತಂದೆಯಾಗಿರುವ ದೇವರಿಗೆ ರಾಜ್ಯವನ್ನು ಒಪ್ಪಿಸಿಕೊಡುವಾಗ ಸಮಾಪ್ತಿ" 1 ಕೊರಿಂಥದವರಿಗೆ 15:24
522 " ನೀನು ಹೋಗಿ ಅಂತ್ಯದವರೆಗೆ ಇರು ನೀನು ದೀರ್ಘನಿದ್ರೆಯನ್ನು ಹೊಂದಿ ಯುಗ ಸಮಾಪ್ತಿಯಲ್ಲಿ ಎದ್ದು ನಿನಗಾಗುವ ಸ್ವಾಸ್ತ್ಯದೊಳಗೆ ನಿಲ್ಲುವಿ ಎಂದು ಹೇಳಿದನು" ದಾನಿಯೇಲ 12:13
523 "ಜ್ಞಾನಿಗಳು ತೇಜೋಮಯವಾದ ಅಕಾಶ ಮಂಡಲದಂತೆ ಪ್ರಕಾಶಿಸುವರು; ಬಹು ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗ ಯುಗಾಂತರ ಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವರು" ದಾನಿಯೇಲ 12:03
524 "ಹೊಲವೆಂದರೆ ಈ ಲೋಕ, ಒಳ್ಳೆಯ ಬೀಜವೆಂದರೆ ಪರಲೋಕರಾಜ್ಯದವರು, ಹಣಜಿ ಅಂದರೆ ಸೈತಾನನವರು, ಅದನ್ನು ಬಿತ್ತುವ ವೈರಿ ಅಂದರೆ ಸೈತಾನನು, ಸುಗ್ಗಿಕಾಲ್ ಅಂದರೆ ಯುಗದ ಸಮಾಪ್ತಿ" ಮತ್ತಾಯ 13:38,39
525 "ಪರಲೋಕರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಯಾಗಿ ಸಾರಲಾಗುವುದು, ಆಗ ಅಂತ್ಯವು ಬರುವುದು" ಮತ್ತಾಯ 24:14
526 "ಒಳ್ಳೆಯ ಮೀನುಗಳನ್ನು ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಟುಬಿಟ್ಟರು, ಹಾಗೆಯೇಯುಗದ ಸಮಾಪ್ತಿಯಲ್ಲಿ ಆಗುವುದು" ಮತ್ತಾಯ 13:48:49
527 "ನಾನು ಮುಂಗಾರು ಹಿಂಗಾರು ಮಳೆಗಳನ್ನು ಆಯಾಕಾಲದಲ್ಲಿ ಬರಮಾಡುವೆನು; ನಿಮ್ಮ ಹೊಲಗಳು ಒಳ್ಳೆಯ ಬೆಳೆಯನ್ನು ಕೊಡುವವು" ಯಾಜಕ ಕಾಂಡ 26:4
528 "ನೀವು ಸ್ವಾದೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶವೋ ಹಳ್ಳ ದಿನ್ನೆಗಳ ದೇಶ ಆಕಾಶದಿಂದ ಮಳೆ ಬಿದ್ದ ಪ್ರಕಾರವೇ ಅದಕ್ಕೆ ನೀರು ದೊರೆಯುವುದು, ಅದು ನಿಮ್ಮ ದೇವರಾದ ಯೆಹೋವನು ಪರಾಂಬರಿಸುವ ದೇಶ" ಧರ್ಮೋಪದೇಶಕಾಂಡ 11:11,12
529 " ನಿಮಗೆ ಗೋಧಿ, ದ್ರಾಕ್ಷೆ ಎಣ್ಣೆಕಾಯಿ ಇವುಗಳ ಬೆಳೆ ಚೆನ್ನಾಗಿ ಉಂಟಾಗುವಂತೆ ಆತನು ನಿಮ್ಮ ಭೂಮಿಗೆ ಬೇಕಾದ ಮುಂಗಾರು ಹಿಂಗಾರುಗಳನ್ನು ಸರಿಯಾಗಿ ನಡಿಸುವನು" ಧರ್ಮೋಪದೇಶಕಾಂಡ 11:14
530 "ಯೆಹೋವನು ಆಕಾಶದಲ್ಲಿರುವ ತನ್ನ ಜಲನಿಧಿಯನ್ನು ತೆರೆದು ನಿಮ್ಮ ಬೆಳೆಗೆ ಬೇಕಾದ ಹಾಗೆ ಮಳೆಯನ್ನು ಸುರಿಸಿ ನಿಮ್ಮ ಎಲ್ಲಾ ವ್ಯವಸಾಯವನ್ನು ಸಫಲಮಾಡುವನು" ಧರ್ಮೋಪದೇಶಕಾಂಡ 28:12
531 "ನನ್ನ ಬೋಧನೆಯು ಮುಂಚಿನಂತೆಯೂ ಕಾಯಿ ಪಲ್ಯಗಳ ಮೇಲೆ ಬೀಳುವ ಹದಮಳೆಯಂತೆಯೂ ಹಿತಕರವಾಗಿರುವುದು" ಧರ್ಮೋಪದೇಶಕಾಂಡ 32:02
532 "ಆತನು ಭೂಮಿಯ ಮೇಲೆ ಮಳೆ ಸುರಿಸಿ ಹೋಲ ಗದ್ದೆಗಳಿಗೆ ನೀರನ್ನು ಒದಗಿಸುತ್ತಾನೆ" ಯೋಬ 5:10
533 "ಆತನು ಹಿಮಕ್ಕೂ ಹದ ಮಳೆಗೂ ತನ್ನ ಶಕ್ತಿಯ ದೊಡ್ಡ ಮಳೆಗೂ ಭೂಮಿಯ ಮೇಲೆ ಬೀಳು ಎಂದು ಅಪ್ಪಣೆ ಮಾಡುವನು" ಯೋಬ 37:06
534 "ಆದಿಯಿಂದಲೂ ದೇವರೇ ನಿಮಗೆ ನಿವಾಸ ಸ್ಥಾನವಾಗಿದ್ದಾನಲ್ಲಾ, ಸದಾ ದೇವರ ಹಸ್ತವೇ ನಿಮಗೆ ಆಧಾರ" ಧರ್ಮೊಪದೇಶಕಾಂಡ 33:27
535 "ನಿನ್ನ ಭುಜಬಲ, ಹಸ್ತ, ಪ್ರಸನ್ನತೆ ಇವೇಅವರಿಗೆ ಜಯವನ್ನುಂಟು ಮಾಡಿದವು" ಕೀರ್ತನೆಗಳು 44:03
536 "ಆತನ ಬಲಗೈಯೂ ಪರಿಶುದ್ಧ ಬಾಹುವೂ ಜಯವನ್ನು ಉಂಟು ಮಾಡಿದೆ " ಕೀರ್ತನೆಗಳು 98:01
537 "ಆಹಾ, ಯೆಹೋವನಾದ ದೇವರು ಶೂರನಾಗಿ ಬರುವನು ತನ್ನ ಭುಜ ಬಲದಿಂದಲೇ ಆಳುವನು, ಇಗೋ ಆತನ ಕ್ರಿಯಾ ಲಾಭವು ಆತನೊಂದಿಗಿದೆ" ಯೆಶಾಯ 40:01
538 "ಯೆಹೋವನು ಸಕಲ ಜನಾಂಗಗಳ ಕಣ್ಣೆದುರಿನಲ್ಲಿ ತನ್ನ ದಿವ್ಯ ಬಾಹುವನ್ನು ತೆರೆದು ತೋರಿಸಿದ್ದಾನೆ; ಭೂಮಿಯ ಎಲ್ಲ ದಿಕ್ಕಿನವರೂ ನಮ್ಮ ದೇವರ ರಕ್ಷಣಾ ಕಾರ್ಯವನ್ನು ನೋಡುವರು" ಯೆಶಾಯ 52:10
539 "ಯೆಹೋವನು ತನ್ನ ಬಲಗೈ ಮೇಲೆ, ತನ್ನ ಭುಜಬಲದ ಮೇಲೆ ಆಣೆ ಇಟ್ಟು - ನಿನ್ನ ದವಸವನ್ನು ನಿನ್ನ ಶತೃಗಳ ಆಹಾರಕ್ಕೆ ಇನ್ನು ಕೊಡಲೇ ಕೊಡೆನು, ಎಂದು ಹೇಳಿದ್ದಾನೆ" ಯೆಶಾಯ 52:08
540 "ನಾನು ಅವರ ದುಷ್ಕೃತ್ಯಗಳ ವಿಶಯವಾಗಿ ಕ್ಷಮೆಯುಳ್ಳವನಾಗಿರುವೆನು, ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವುದಿಲ್ಲ" ಇಬ್ರಿಯರಿಗೆ 8:12