541 "ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ರಕ್ಷಿಸುವುದು; ಕರ್ತನು ಅವನನ್ನು ಎಬ್ಬಿಸುವನು ಮತ್ತು ಪಾಪ ಮಾಡಿದವನಾಗಿದ್ದರೆ ಅದು ಪರಿಹಾರವಾಗುವುದು" ಯಾಕೋಬ 5:15
542 "ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು" 1ಯೋಹಾನ 1:09
543 "ಧರ್ಮಶಾಸ್ತ್ರದ ಪ್ರಕಾರ ಸ್ವಲ್ಪ ಕಡಿಮೆ ಎಲ್ಲಾ ವಸ್ತುಗಳು ರಕ್ತದಿಂದಲೇ ಶುದ್ಧೀಕರಿಸಲ್ಪಡುವವು, ರಕ್ತಧಾರೆಯಿಲ್ಲದೆ ಪಾಪ ಪರಿಹಾರವಿಲ್ಲ" ಇಬ್ರಿಯರಿಗೆ 9:22
544 "ಸಾವಿರಾರು ತಲೆಗಳವರೆಗೂ ದಯೆತೋರಿಸುವನು, ದೋಷಾಪರಾಧ ಪಾಪಗಳನ್ನು ಕ್ಷಮಿಸುವನು" ವಿಮೋಚನಾಕಾಂಡ 34:07
545 "ಯಾವನ ದ್ರೋಹವು ಪರಿಹಾರವಾಗಿದೆಯೋ ಯಾವನ ಪಾಪವು ಕ್ಷಮಿಸಲ್ಪಟ್ಟಿದೆಯೋ ಅವನೇ ಧನ್ಯನು" ಕೀರ್ತನೆಗಳು 32:01
546 "ನನ್ನ ಪಾಪವನ್ನು ಮರೆಮಾಡದೆ ನನ್ನ ದೋಷವನ್ನು ತಿಳಿಸಿದೆನು , ನೀನು ನನ್ನ ಅಪರಾಧ ಪಾಪಗಳನ್ನು ಪರಿಹರಿಸಿಬಿಟ್ಟಿ" ಕೀರ್ತನೆಗಳು 32:05
547 "ಯೆಹೋವನೇ ನೀನು ಒಳ್ಳೆಯವನೂ ಕ್ಷಮಿಸುವವನೂ ನಿನಗೆ ಮೊರೆಯಿಡುವವರೆಲ್ಲರಲ್ಲಿ ಕೃಪಾಪೂರ್ಣನೂ ಆಗಿದ್ದೀಯಲ್ಲಾ" ಕೀರ್ತನೆಗಳು :86:5
548 "ಆದರೂ ಆತನು ಕರುಣಾಳುವೂ ಅಪರಾಧಿಗಳನ್ನು ಸಂಹರಿಸದೆ ಕ್ಷಮಿಸುವವನೂ ಆಗಿ ತನ್ನ ಸಿಟ್ಟನ್ನೆಲ್ಲಾ ಏರಗೊಡದೆ ಹಲವು ಸಾರಿ ತಡೆಯುತ್ತಾ ಬಂದನು" ಕೀರ್ತನೆಗಳು 78:38
549 "ನಿನ್ನ ಪ್ರಜೆಯ ದ್ರೋಹವನ್ನು ಕ್ಷಮಿಸಿದ್ದೀ ಅವರ ಎಲ್ಲಾ ಪಾಪಗಳನ್ನು ಅಳಿಸಿಬಿಟ್ಟಿದ್ದೀ" ಕೀರ್ತನೆಗಳು 85:02
550 "ಯೆಹೋವನೇ ನೀನು ದುಷ್ಕೃತ್ಯಗಳಿಗಾಗಿ ಅವರನ್ನು ದಂಡಿಸುತಿದ್ದರೂ ಕ್ಷಮಿಸುವ ದೇವರಾಗಿದ್ದೀ" ಕೀರ್ತನೆಗಳು 99:08
551 "ನೀನು ಪಾಪವನ್ನು ಕ್ಷಮಿಸುವವನಾದ್ದರಿಂದ ಮನುಷ್ಯರ ಭಯಭಕ್ತಿಗೆ ನೀನೇ ಪಾತ್ರನು" ಕೀರ್ತನೆಗಳು 130:03
552 "ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ, ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವನನ್ನು ಕರುಣ ಸುವನು" ಯೆಶಾಯ 55:07
553 "ಅವರು ನನಗೆ ವಿರುದ್ಧವಾಗಿ ಮಾಡಿರುವ ಅಧರ್ಮವನ್ನೆಲ್ಲಾ ತೊಲಗಿಸಿ ಅವರನ್ನು ಶುದ್ಧೀಕರಿಸುವೆನು" ಯೆರೆಮೀಯ 33:08
554 "ಆ ಕಾಲದಲ್ಲಿ ಇಸ್ರಾಯೇಲಿನ ಅಧರ್ಮವನ್ನು ಎಲ್ಲಿ ಹುಡುಕಿದರೂ ಅದು ಇರುವುದೇ ಇಲ್ಲ, ಯೆಹೂದದ ಪಾಪವನ್ನು ಎಲ್ಲಿ ತಡಕಿದರೂ ಸಿಕ್ಕುವುದೇ ಇಲ್ಲ ನಾನು ಉಳಿಸುವ ಜನಶೇಷವನ್ನು ಕ್ಷಮಿಸುವೆನಲ್ಲವೇ ಇದು ಯೆಹೋವನ ನುಡಿ" ಯೆರೆಮೀಯ 50:20
555 "ವೈರಿಗಳ ಹಿಂಸೆಯನ್ನು ತಾಳಲಾರದ ಇಸ್ರಾಯೇಲ್ಯರ ಗೋಳಾಟವನ್ನು ಯೆಹೋವನು ಕೇಳಿ ಕನಿಕರಪಟ್ಟು ನ್ಯಾಯಸ್ಥಾಪಕರನ್ನು ಎಬ್ಬಿಸಿ ಅವರ ಜೀವಮಾನವೆಲ್ಲಾ ಅವರ ಸಂಗಡ ಇದ್ದು ಅವರ ಮೂಲಕವಾಗಿ ಇಸ್ರಾಯೇಲ್ಯರನ್ನು ಶತೃಗಳಿಂದ ಬಿಡಿಸಿದನು" ನ್ಯಾಯಸ್ತಾಪಕರು 2:18
556 " ದೇವದೂತನು ಯೆರೂಸಲೇಮನ್ನು ಸಂಹರಿಸುವುದಕ್ಕೆ ಕೈ ಚಾಚಿದಾಗ ಯೆಹೋವನು ಆ ಕೇಡಿನ ವಿಶಯದಲ್ಲಿ ಪಶ್ಚತ್ತಾಪ ಪಟ್ಟು ಸಂಹಾರಕ ದೂತನಿಗೆ ಈಗ ಸಾಕು ನಿನ್ನ ಕೈಯನ್ನು ಹಿಂದೆಗೆ ಎಂದು ಅಜ್ಞಾಪಿಸಿದನು" 2ಸಮುವೇಲ 24:16
557 "ತನ್ನ ಒಡಂಬಡಿಕೆಯನ್ನು ನೆನಪು ಮಾಡಿಕೊಂಡು ತನ್ನ ಕೃಪಾತಿಶಯದಿಂದ ಅವರನ್ನು ಕನಿಕರಿಸಿದನು" ಕೀರ್ತನೆಗಳು 106:45
558 "ನಿಮ್ಮ ಬಟ್ಟೆಗಳನ್ನಲ್ಲಾ ನಿಮ್ಮ ಹೃದಯಗಳನ್ನು ಹರಿದುಕೊಂಡು ನಿಮ್ಮ ದೆವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಿರಿ ಆತನು ದಯೆಯೂ ಕನಿಕರವೂ ದೀರ್ಘ ಶಾಂತಿಯೂ ಮಹಾ ಕೃಪೆಯುಳ್ಳವನಾಗಿ ಮಾಡಬೇಕಿಂದಿದ್ದ ಕೇಡಿಗೆ ಮನಮರುಗುತ್ತಾನೆ" ಯೋವೇಲ 2:13
559 "ಯೆಹೋವನು ಸದಾ ಕಾಲಕ್ಕೂ ಬಿಟ್ಟುಬಿಡುವವನಲ್ಲ ಆತನು ವ್ಯಥೆಗೊಳಿಸಿದರೇನು ? ತನ್ನ ಕೃಪಾತಿಶಯದಿಂದ ಕನಿಕರಿಸುವನು ಪ್ರಲಾಪಗಳು 3:31,32
560 "ದೀನರು ದೇಶವನ್ನು ಅನುಭವಿಸುವರು ಅವರು ಮಹಾ ಸೌಖ್ಯದಿಂದ ಆನಂದಿಸುವರು" ಕೀರ್ತನೆಗಳು 37:11