561 "ನಿನ್ನ ಧರ್ಮಶಾಸ್ತ್ರವು ನನಗೆ ಅನಂದಕರವಾಗದಿದ್ದರೆ ನನಗೊದಗಿದ ಆಪತ್ತಿನಲ್ಲಿ ಹಾಳಾಗಿ ಹೋಗುತಿದ್ದೆನು" ಕೀರ್ತನೆಗಳ 110:92
562 "ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ, ಸಂತೋಷಪಡಿರಿ ಎಂದು ತಿರುಗಿ ಹೇಳುತ್ತೇನೆ" ಪಿಲಿಪ್ಪಿಯವರಿಗೆ 4:04
563 "ಯೆಹೋವನಲ್ಲಿ ಭರವಸವಿಟ್ಟು ಒಳ್ಳೇದನ್ನು ಮಾಡು ದೇಶದಲ್ಲಿ ವಾಸವಾಗಿದ್ದು ನಂಬಿಕೆಯನ್ನು ಅನುಸರಿಸು ಆಗ ಯೆಹೋವನಲ್ಲಿ ಸಂತೋಷಿಸುವಿ" ಕೀರ್ತನೆಗಳು 37:03
564 "ಯೆಹೋವನನ್ನು ಸಂತೋಷದಿಂದ ಸೇವಿಸಿರಿ, ಉತ್ಸಾಹ ಧ್ವನಿ ಮಾಡುತ್ತಾ ಆತನ ಸನ್ನಿಧಿಗೆ ಬನ್ನಿರಿ" ಕೀರ್ತನೆಗಳು 100:02
565 "ಯೆಹೋವನು ಆನಂದಿಸುವುದು ತನ್ನ ಕೃಪೆಯನ್ನು ನಿರೀಕ್ಷಿಸುವ ಭಕ್ತರಲ್ಲೇ" ಕೀರ್ತನೆಗಳು 147:11
566 "ನೀನು ನನಗೆ ಜೀವ ಮಾರ್ಗವನ್ನು ತಿಳಿಯಪಡಿಸುವಿ ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ" ಕೀರ್ತನೆಗಳು 16:11
567 "ನಾನು ಜ್ಞಾನದ ಮಾರ್ಗವನ್ನು ಉಪದೇಶಿಸಿ ಧರ್ಮದ ಮಾರ್ಗದಲ್ಲಿ ನಿನ್ನನ್ನು ನಡಿಸುವೆನು" ಜ್ಞಾನೋಕ್ತಿಗಳು 4:11
568 "ಯೇಸು ನಮಗೋಸ್ಕರ ಪ್ರತಿಷ್ಠಿಸಿದ ಜೀವವುಳ್ಳ ಹೊಸ ದಾರಿಯಲ್ಲಿ ಅತನ ರಕ್ತದ ಮೂಲಕ ಆತನ ಶರೀರವೆಂಬ ತೆರೆಯ ಮುಖಾಂತರ ದೇವರ ಸಮಕ್ಷಮದಲ್ಲಿ ಪ್ರವೇಶಿಸುವುದಕ್ಕೆ ನಮಗೆ ಧೈರ್ಯವುಂಟಾಯಿತು" ಇಬ್ರಿಯರಿಗೆ 10:19,20
569 "ದೇವರು ನಮ್ಮ ಕರ್ತನಾದ ಯೇಸುಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಟ್ಟಿದ್ದಾನೆ" 1 ಕೊರಿಂಥದವರಿಗೆ 15:57
570 "ಲೋಕದಲ್ಲಿ ನಿಮಗೆ ಸಂಕಟವುಂಟು ಧೈರ್ಯವಾಗಿರಿ ನಾನು ಲೋಕವನ್ನು ಜೈಸಿದ್ದೇನೆ" ಯೋಹಾನ 16:33
571 "ಅಶ್ವಬಲವು ಯುದ್ಧ ದಿನಕ್ಕಾಗಿ ಸನ್ನದ್ಧವಾಗಿದ್ದರೂ ಜಯವು ಯೆಹೋವನದೇ" ಜ್ಞಾನೋಕ್ತಿಗಳು 21:31
572 "ದೇವರಿಂದ ಹುಟ್ಟಿದ್ದೆಲ್ಲವೂ ಲೋಕವನ್ನು ಜೈಸುತ್ತದೆ, ಲೋಕವನ್ನು ಜೈಸುವಥದ್ದು ನಮ್ಮ ನಂಬಿಕೆಯೇ" 1 ಯೋಹಾನ 5:4
573 "ಕರ್ತನಾದ ಯೇಸುಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಟ್ಟಿದ್ದಾನೆ ಆತನಿಗೆ ಸ್ತೋತ್ರ" 1 ಕೊರಿಂಥದವರಿಗೆ 15:57
574 "ಯಜ್ಞದ ಕುರಿಯಾದಾತನ ರಕ್ತದ ಬಲದಿಂದಲೂ ತಮ್ಮ ವಾಕ್ಯದ ಬಲದಿಂದಲೂ ಅವನನ್ನು ಜೈಸಿದರು" ಪ್ರಕಟಣೆ 12:11
575 "ಜಯ ಹೊಂದುವವನು ಇವುಗಳಿಗೆ ಬಾಧ್ಯನಾಗುವನು, ನಾನು ಅವನಿಗೆ ದೇವರಾಗಿರುವೆನು ಅವನು ನನಗೆ ಮಗನಾಗಿರುವನು" ಪ್ರಕಟಣೆಗಳು 21:07
576 "ಅಪಾಯಕಾಲದಲ್ಲಿ ಆತನು ನನ್ನನ್ನು ಗುಪ್ತ ಸ್ಥಳದಲ್ಲಿ ಅಡಗಿಸುವನು ತನ್ನ ಗುಢಾರವೆಂಬ ಆಶ್ರಯಸ್ಥಾನದಲಿ ನನ್ನನ್ನು ಭದ್ರಪಡಿಸುವನು" ಕೀರ್ತನೆಗಳು 27:05
577 "ನನಗೆ ನಿರಂತರವೂ ನಿನ್ನ ಗುಢಾರದಲ್ಲಿ ಬಿಢಾರವಾಗಲಿ, ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವಂತೆ ಅನುಗ್ರಹಿಸು" ಕೀರ್ತನೆಗಳು 61:04
578 "ನೀನೇ ನನಗೆ ಮರೆಯೂ ನಿರಪಾಯವಾಗಿ ನನ್ನನ್ನು ಕಾಯುವಿ; ವಿಮೋಚನಾ ಧ್ವನಿಯಿಂದ ನನ್ನನ್ನು ಅವರಿಸಿಕೊಳ್ಳುವಿ" ಕೀರ್ತನೆಗಳು 32:07
579 "ಪರಾತ್ಪರನ ಮರೆಹೊಕ್ಕಿರುವವನು ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು" ಕೀರ್ತನೆಗಳು 91:01
580 "ನೀನು ದೀನರಿಗೆ ಕೋಟೆ ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣಾದುರ್ಗ, ಬಿಸಿಲಿಗೆ ನೆರಳು, ಭೀಕರರ ಶ್ವಾಸವು ಗೋಡೆಗೆ ಬಡಿದು ಬಿಡುವ ಬಿರುಗಾಳಿಯಂತಿರುವಾಗ ಅಶ್ರಯವೂ ಅಗಿದ್ದೀ" ಯೆಶಾಯ 25:04