41"ಭಯಪಡಬೇಡ ನಾನು ನಿನಗೆ ಗುರಾಣ ಯಾಗಿದ್ದೇನೆ ನಿನಗೋಸ್ಕರ ಅತ್ಯಧಿಕ ಬಹುಮಾನವು ಇಡಲ್ಪಟ್ಟಿದೆ" ಆದಿಕಾಂಡ 15:01
42"ಇಸ್ರಾಯೇಲ್ಯರೇ ನೀವು ಎಷ್ಟೋ ಧನ್ಯರು ; ನಿಮ್ಮಷ್ಟು ಭಾಗ್ಯವಂತರು ಯಾರಿದ್ದಾರೆ ? ನೀವು ಯೆಹೋವನ ಅನುಗ್ರಹದಿಂದ ಜಯವನ್ನು ಹೊಂದಿದವರು ಆತನೇ ನಿಮ್ಮನ್ನು ಕಾಯುವ ಢಾಲೂ ನಿಮ್ಮ ಗೌರವವನ್ನು ಕಾಪಾಡುವ ಕತ್ತಿಯೂ ಆಗಿದ್ದಾನೆ ಆದುದರಿಂದ ನಿಮ್ಮ ಶತೃಗಳು ನಿಮ್ಮ ಮುಂದೆ ಮುದುರಿಕೊಳ್ಳುತ್ತಾರೆ; ನೀವೋ ಅವರಿಗಿದ್ದ ಎತ್ತರವಾದ ಸೀಮೆಯಲ್ಲಿ ಜಯಶಾಲಿಗಳಾಗಿ ಸಂಚರಿಸುತ್ತೀರಿ" ಧರ್ಮೋಪದೇಶಕಾಂಡ 33:29
43"ದೇವರ ಮಾರ್ಗವು ಯಾವ ದೋಷ ಇಲ್ಲದ್ದು; ಕರ್ತನ ವಚನವು ಶುದ್ಧವಾದದ್ದು, ಆತನು ಆಶ್ರಿತರೆಲ್ಲರಿಗೆ ಗುರಾಣ ಯಾಗಿದ್ದಾನೆ" 2 ಸಮುವೇಲ 22:31
44"ನೀನೇ ನನಗೋಸ್ಕರ ಗುರಾಣ ಯನ್ನು ಹಿಡಿದು ರಕ್ಷಿಸಿದ್ದೀ; ನಿನ್ನ ಕೃಪಾಕಟಾಕ್ಷವು ನನಗೆ ದೊಡ್ಡಸ್ತಿಕೆಯನ್ನು ಉಂಟು ಮಾಡಿದೆ " 2 ಸಮುವೇಲ 22:36
45"ಆದರೂ ಯೆಹೋವನೇ, ನೀನು ನನ್ನನ್ನು ಕಾಯುವ ಗುರಾಣ ; ನನ್ನ ಗೌರವಕ್ಕೆ ಆಧಾರನೂ ನನ್ನ ತಲೆಯನ್ನು ಎತ್ತುವಂತೆ ಮಾಡುವವನೂ ಆಗಿದ್ದೀ " ಕೀರ್ತನೆಗಳು 3:03
46"ಆದಕಾರಣ ನಿನ್ನನ್ನು ಮರೆಹೊಕ್ಕವರೆಲ್ಲರೂ ಸಂತೋಷಪಡುವರು; ನೀನು, ಕಾಪಾಡುವವನೆಂದು ಅವರು ಯಾವಾಗಲೂ ಆನಂದ ಧ್ವನಿ ಮಾಡುವರು ನಿನ್ನ ನಾಮವನ್ನು ಪ್ರ್ರೀತಿಸುವರು ನಿನ್ನಲ್ಲಿ ಉಲ್ಲಾಸಗೊಳ್ಳುವರು" ಕೀರ್ತನೆಗಳು 5:12
47"ಯೆಹೋವನು ನನಗೆ ಬಲವೂ ಗುರಾಣ ಯೂ ಆಗಿದ್ದಾನೆ; ಆದಕಾರಣ, ನನ್ನ ಹೃದಯವು ಹರ್ಷಿಸುವುದು, ಕೀರ್ತನಾ ರೂಪವಾಗಿ ಆತನನ್ನು ಸ್ತುತಿಸುವೆನು ಕೀರ್ತನೆಗಳು 28:07
48"ಯೆಹೋವ ದೇವರು ಸೂರ್ಯನೂ ಗುರಾಣ ಯೂ ಆಗಿದ್ದಾನಲ್ಲಾ, ಯೆಹೋವನು ಕೃಪೆಯನ್ನು ಘನವನ್ನೂ ಅನುಗ್ರಹಿಸುವನು; ಆತನು ಸದ್ಭಕ್ತರಿಗೆ ಯಾವ ಶುಭವನ್ನು ದಯಪಾಲಿಸದೆ ಇದ್ದಾನು?" ಕೀರ್ತನೆಗಳು 84:11
49"ಆತನು ನಿನ್ನನ್ನು ತನ್ನ ರೆಕ್ಕೆಗಳಿಂದ ಹೊದಗಿಸುವನು; ಆತನ ಪಕ್ಕಗಳ ಮರೆಯನ್ನು ಆಶ್ರಯಿಸಿಕೊಳ್ಳುವಿ ಆತನ ಸತ್ಯತೆಯು ನಿನಗೆ ಖೇಡ್ಯವೂ ಗುರಾಣ ಯೂ ಆಗಿದೆ " ಕೀರ್ತನೆಗಳು 91:04
50" ಮತ್ತು ನಂಬಿಕೆಯೆಂಬ ಗುರಾಣ ಯನ್ನು ಹಿಡುಕೊಳ್ಳಿರಿ; ಆದುರಿಂದ ನೀವು ಕೆಡುಕನ ಅಗ್ನಿ ಬಾಣಗಳನ್ನೆಲ್ಲಾ ಆರಿಸುವುದಕ್ಕೆ ಶಕ್ತರಾಗುವಿರಿ " ಎಫೆಸದವರಿಗೆ 6:01
51"ಯೆಹೋವನು ನನ್ನ ಬಂಡೆಯೂ, ನನ್ನ ಕೋಟೆಯೂ, ವಿಮೋಚಕನೂ ನನ್ನ ದೇವರೂ ನನ್ನ ಆಶ್ರಯಗಿರಿಯೂ ನನ್ನ ಗುರಾಣ ಯೂ ನನ್ನ ರಕ್ಷಣೆಯ ಕೊಂಬೂ ನನ್ನ ದುರ್ಗವೂ ಆಗಿದ್ದಾನೆ " ಕೀರ್ತನೆಗಳು 18:02
52"ನೀನೇ ನನ್ನ ಬಂಡೆಯೂ ಕೋಟೆಯೂ ಆಗಿದ್ದೀಯಲ್ಲಾ; ಆದುದರಿಂದ ನಿನ್ನ ಹೆಸರಿನ ನಿಮಿತ್ತ ದಾರಿ ತೋರಿಸಿ ನನ್ನನ್ನು ನಡಿಸು" ಕೀರ್ತನೆಗಳು 31:03
53"ನಾನು ಯಾವಾಗಲೂ ಮರೆಹೋಗುವ ಅಶ್ರಯಗಿರಿಯಾಗಿರು; ನನ್ನ ರಕ್ಷಣೆಗೋಸ್ಕರ ಆಜ್ಞಾಪಿಸಿದ್ದೀಯಲ್ಲವೇ ನೀನೇ ನನ್ನ ಬಂಡೆಯೂ ಕೋಟೆಯೂ ಆಗಿದ್ದೀಯಲ್ಲಾ" ಕೀರ್ತನೆಗಳು 71:03
54ಅಪಾಯಕಾಲದಲ್ಲಿ ಆತನು ನನ್ನನ್ನು ಗುಪ್ತಸ್ಥಳದಲ್ಲಿ ಅಡಗಿಸುವನು; ತನ್ನ ಗುಡಾರವೆಂಬ ಅಶ್ರಯಸ್ಥಾನದಲ್ಲಿ ನನ್ನನ್ನು ಭದ್ರಪಡಿಸುವನು; ಪರ್ವತಾಗ್ರದಲ್ಲಿನನ್ನನ್ನು ಸುರಕ್ಷಿತವಾಗಿ ಇರಿಸುವನು " ಕೀರ್ತನೆಗಳು 27:05
55"ನಾನು ಎದೆಗುಂದಿದವನಾಗಿ ಭೂಮಿಯ ಕಡೇ ಭಾಗದಿಂದ ನಿನಗೆ ಮೊರೆಯಿಡುತ್ತೇನೆ; ನಾನು ಹತ್ತಲಾಗದ ಅಶ್ರಯಗಿರಿಯ ಮೇಲೆ ನನ್ನನ್ನು ಹತ್ತಿಸು " ಕೀರ್ತನೆಗಳು 61:02
56"ನನ್ನ ರಕ್ಷಣೆಗೂ ಮಾನಕ್ಕೂ ದೇವರೇ ಆಧಾರ; ನನಗೆ ಬಲವಾದ ದುರ್ಗವೂ ಆಶ್ರಯವೂ ದೇವರಲ್ಲಿಯೇ " ಕೀರ್ತನೆಗಳು 62:07
57"ನಾನು ಅವರಿಗೆ ಶ್ರೇಷ್ಠವಾದ ಗೋದಿಯನ್ನು ಊಟಕ್ಕೆ ಕೊಟ್ಟು ಬಂಡೆಯೊಳಗಿನ ಜೇನಿನಿಂದ ತೃಪ್ತಿಪಡಿಸುವೆನು" ಕೀರ್ತನೆಗಳು 81:16
58"ಇವನಿಗೆ ಆಶ್ರಯವೂ ಗಿರಿದುರ್ಗ; ಅನ್ನವು ಉಚಿತವಾಗಿ ದೊರೆಯುವದು, ನೀರೂ ನಿಸ್ಸಂದೇಹ" ಯೆಶಾಯ 33:16
58"ಅವರೆಲ್ಲರೂ ದೈವಿಕವಾದ ಒಂದೇ ನೀರನ್ನು ಕುಡಿದರು, ಹೇಗಂದರೆ ಅವರ ಹಿಂದೆ ಹೋಗುತಿದ್ದ ದೈವಿಕವಾದ ಬಂಡೆಯೊಳಗಿಂದ ಬಂದ ನೀರನ್ನು ಕುಡಿಯುತಿದ್ದರು; ಆ ಬಂಡೆ ಕ್ರಿಸ್ತನೇ" 1 ಕೊರಿಂಥದವರಿಗೆ 10:4
59"ನಾನು ಯಾವಾಗಲೂ ಮರೆಹೋಗುವ ಆಶ್ರಯಗಿರಿಯಾಗಿರು ನೀನೇ ನನ್ನ ಬಂಡೆಯೂ ಕೋಟೆಯೂ ಆಗಿದ್ದೀಯಲ್ಲ" ಕೀರ್ತನೆಗಳು 71:03
60"ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು" ಕೀರ್ತನೆಗಳು 46:01