581 "ಮಾನವರು ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುತ್ತಾರೆ ನಿನ್ನ ಮಂದಿರದ ಸಮೃದ್ಧಿಯಿಂದ ಅವರನ್ನು ಸಂತೃಪ್ತಿಪಡಿಸುತ್ತೀ" ಕೀತನೆಗಳು 36:7,8
582 "ಮನುಷ್ಯರ ಒಳಸಂಚುಗಳಿಂದ ಹಾನಿಯುಂಟಾಗದಂತೆ ಅವರನ್ನು ನಿನ್ನ ಸಾನಿಧ್ಯದಲ್ಲೇ ಮರೆಮಾಡುತ್ತೀ" ಕೀರ್ತನೆಗಳು 31:20
583 "ಯತಾರ್ಥವಂತರಿಗೆ ಕತ್ತಲೆಯಲ್ಲಿಯೂ ಜ್ಯೋತಿ ಮೂಡುವುದು, ದಯೆಯೂ ಕನಿಕರವೂನೀತಿಯೂ ಉಳ್ಳ ದೇವರೇ ಆ ಜ್ಯೋತಿ" ಕೀರ್ತನೆಗಳು 112:04
584 "ಯೆಹೋವನೇ ನೀನು ಕನಿಕರವೂ ದಯೆಯೂ ಉಳ್ಳ ದೇವರು ದೀರ್ಘಶಾಂತನೂ ಬಹಳ ಪ್ರೀತಿಯೂ ನಂಬಿಕೆಯೂ ಉಳ್ಳವನು" ಕೀರ್ತನೆಗಳು 86:15
585 "ಯೆಹೋವನು ನಿಮಗೆ ಕೃಪೆ ತೋರಿಸಬೇಕೆಂದು ಕಾದಿರುವನು; ನಿಮ್ಮನ್ನು ಕರುಣ ಸಬೇಕೆಂದು ಉನ್ನತೋನ್ನತವಾಗಿ ಕಾಣ ಸಿಕೊಳ್ಳುವನು" ಯೆಶಾಯ 30:18
586 "ಯೆರುಸಲೇಮಿನಲ್ಲಿ ವಾಸಿಸುವ ಚಿಯೋನಿನ ಜನರೇ, ನೀವು ಇನ್ನು ಅಳುವುದೇ ಇಲ್ಲ, ನೀವು ಕೂಗಿಕೊಂಡ ಶಬ್ದವನ್ನು ಆತನು ಕೇಳಿ ನಿಮಗೆ ಕೃಪೆ ತೋರಿಸೇ ತೊರಿಸುವನು" ಯೆಶಾಯ 30:19
587 "ಆದುದರಿಂದ ದೇವರ ದಯವು ಮನುಷ್ಯರಿಗೆ ಇಚ್ಚೈಸುವುದರಿಂದಾಗಲೀ ಪ್ರಯತ್ನಿಸುವುದರಿಂದಾಗಲೀ ದೊರೆಯದೆ ದೇವರು ಕರುಣ ಸುವುದರಿಂದಲೇ ದೊರೆಯುತ್ತದೆ" ರೋಮಾಪುರದವರಿಗೆ 9:16
588 "ನಮ್ಮನ್ನು ಪಾಪಗಳಿಂದ ಬಿಡಿಸಿದವನು ನಮ್ಮನ್ನು ರಾಜ್ಯವನ್ನಾಗಿಯೂ ತನ್ನ ತಂದೆಯಾದ ದೇವರಿಗೆ ಯಾಜಕರನ್ನಾಗಿಯೂ ಮಾಡಿದವನೂ ಆಗಿರುತ್ತಾನೆ ಯುಗ ಯುಗಾಂತರಗಳಲ್ಲಿಯೂ ಘನ ಮಹತ್ವಗಳಿರಲಿ" ಪ್ರಕಟಣೆಗಳು 1:06
589 "ರಾಜ್ಯವು ಪರಾತ್ಪರನ ಭಕ್ತರಿಗೆ ಲಭಿಸುವುದು, ಅವರೇ ಅದನ್ನು ತಲತಲಾಂತರಕ್ಕೂ ಶಾಶ್ವತವಾಗಿ ಅನುಭವಿಸುವರು" ದಾನಿಯೇಲ 7:18
590 "ನಿಮ್ಮನ್ನು ಕತ್ತಲೆಯೊಳಗಿಂದ ಕರೆದುಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ಆಗಿದ್ದೀರಿ" 1 ಪೇತ್ರ 2:9
591 "ಅರಸನು ಯೆಹೋವನಲ್ಲಿಯೇ ಭರವಸವಿಟ್ಟಿದ್ದಾನೆ, ಪರಾತ್ಪರನ ಕೃಪೆಯ ದೆಸೆಯಿಂದ ಅವನು ಕದಲುವುದೇ ಇಲ್ಲ" ಕೀರ್ತನೆಗಳು 21:07
592 "ರಾಜರು ನಿನಗೆ ಸಾಕುತಂದೆಗಳು, ಅವರ ರಾಣ ಯರು ನಿನಗೆ ಸಾಕುತಾಯಿಯರೂ ಆಗುವರು, ನಿನಗೆ ಸಾಷ್ಟಾಂಗ ಅಡ್ಡಬಿದ್ದು ನಿನ್ನ ಪಾದಧೂಳಿಯನ್ನು ನೆಕ್ಕುವರು" ಯೆಶಾಯ 49 23
593 "ಕರ್ತನು ನನಗೆ ಕುರುಬನು; ಕೊರತೆಪಡೆನು" ಕೀರ್ತನೆಗಳು 23:1
594"ನಾನೇ ಒಳ್ಳೇ ಕುರುಬನು; ಒಳ್ಳೇ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ" ಯೋಹಾನ 10:11
595 "ನಾನೇ ಒಳ್ಳೇ ಕುರುಬನು - ತಂದೆಯು ನನ್ನನ್ನು, ನಾನು ತಂದೆಯನ್ನು ತಿಳಿದಿರಿವಂತೆಯೇ ನಾನು ನನ್ನ ಕುರಿಗಳನ್ನು ತಿಳಿದಿದ್ದೇನೆ" ಯೋಹಾನ 10:14
596 "ಆತನು ಕುರುಬನಂತೆ ಮಂದೆಯನ್ನು ಮೇಯಿಸುವನು ಮರಿಗಳನ್ನು ಕೈಯಿಂದ ಕೂಡಿಸಿ ಎದೆಗೆತ್ತಿಕೊಳ್ಳುವನು" ಯೆಶಾಯ 40:11
597 " ಮಂದೆಯನ್ನು ಕಾಯುವ ಕುರುಬನಂತೆ ಅವರನ್ನು ಕೂಡಿಸಿ ಕಾಪಾಡುವನು" ಯೆರೆಮೀಯ 31:10
598 "ಅಹಾ ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು" ಯೆಹೆಜ್ಕೇಲ 34:11
599 "ನೀವು ನನ್ನ ಕುರಿಗಳು, ನನ್ನ ಕಾವಲಿನ ಕುರಿಗಳು; ನರಪ್ರಾಣ ಗಳಾದ ನಿಮಗೆ ನಾನು ದೇವರು ಎಂದು ಕರ್ತನಾದ ಯೆಹೋವನು ಅನ್ನುತ್ತಾನೆ" ಯೆರೆಮೀಯ 34:31
600 "ಈ ಹಟ್ಟಿಗೆ ಸೇರದಿರುವ ಬೇರೆ ಕುರಿಗಳು ನನಗೆ ಅವೆ, ಅವುಗಳನ್ನೂ ನಾನು ತರಬೇಕು ಅವು ನನ್ನ ಸ್ವರಕ್ಕೆ ಕಿವಿಗೊಡುವವು" ಯೋಹಾನ 10:16