601 "ಯೆಹೋವನೇ, ನಿಮಗಾಗಿ ಯುದ್ಧ ಮಾಡುವನು ನೀವಂತೂ ಸುಮ್ಮನೆ ಇರ್ರಿ, ಎಂದು ಹೇಳಿದನು" ವಿಮೋಚನಾಕಾಂಡ 14:14
602 "ನಿಮ್ಮ ದೇವರಾದ ಯೆಹೋವನು ತಾನೇ ನಿಮ್ಮ ಸಂಗಡ ಇದ್ದು ಶತೃಗಳೊಡನೆ ನಿಮಗೋಸ್ಕರ ಯುದ್ಧ ಮಾಡಿ ನಿಮಗೆ ಜಯವನ್ನುಂಟು ಮಾಡುವನು" ಧರ್ಮೋಪದೇಶ ಕಾಂಡ 20:4
603 "ನಿಮ್ಮ ದೇವರಾದ ಯೆಹೋವನು ತನ್ನ ವಾಗ್ದಾನದಂತೆ ನಿಮಗೋಸ್ಕರ ಯುದ್ಧ ಮಾಡಿದ್ದರಿಂದ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನೂ ಓಡಿಸುವುದಕ್ಕೆ ಶಕ್ತನಾದನು" ಯೆಹೋಶುವ 23:10
604 " ಯೆಹೋವನು ಯುದ್ಧ ಶೂರನು; ಆತನ ನಾಮಧೇಯವು ಯೆಹೋವನೇ" ವಿಮೋಚನಾಕಾಂಡ 15:13
605 "ಆತನು ಜಯಶಾಲಿಯಾದನು, ಕುದುರೆಗಳನ್ನೂ ರಾಹುತರನ್ನೂ ಸಮುದ್ರದಲ್ಲಿ ಕೆಡವಿ ನಾಶ ಮಾಡಿದ್ದಾನೆ" ವಿಮೋಚನಾಕಾಂಡ 15:21
606 "ಯೆಹೋವನು ಈಟಿ ಕತ್ತಿಗಳಿಲ್ಲದೆ ರಕ್ಷಿಸಬಲ್ಲನೆಂಬುದು ಇಲ್ಲಿ ಕೂಡಿರುವವರಿಗೆಲ್ಲಾ ಗೊತ್ತಾಗುವುದು; ಯಾಕಂದರೆ ಯುದ್ಧ ಫಲವು ಯೆಹೋವನ ಕೈಯಲ್ಲಿದೆ" 1 ಸಮುವೇಲ 17:47
607 "ನೀನು ನನಗೆ ಯುದ್ಧಕ್ಕಾಗಿ ಶೌರ್ಯವೆಂಬ ನಡುಕಟ್ಟನ್ನು ಬಿಗಿದಿದ್ದೀ, ಎದುರಾಳಿಗಳನ್ನು ಕುಗ್ಗಿಸಿ ನನಗೆ ಅಧೀನಮಾಡಿದ್ದೀ" ಕೀರ್ತನೆಗಳು 18:39
608 "ಆತನು ನನ್ನ ಕೈಗಳಿಗೆ ಯುದ್ಧ ವಿದ್ಯೆಯನ್ನೂ ನನ್ನ ಬೆರಳುಗಳಿಗೆ ಕಾಳಗವನ್ನು ಕಲಿಸಿದ್ದಾನೆ' ಕೀರ್ತನೆಗಳು 144:01
609 "ಯೆಹೋವನೇ, ನಿನ್ನ ಭುಜಬಲವು ನಿನ್ನ ಶತ್ರುಗಳನ್ನು ಪುಡಿ ಪುಡಿ ಮಾಡುತ್ತದೆ ನೀನು ಅತ್ಯಧಿಕ ಮಹತ್ವವುಳ್ಳವನಾಗಿ ನಿನ್ನೆದುರಾಗಿ ನಿಲ್ಲುವವರನ್ನು ಕೆಡವಿ ಬಿಡುತ್ತೀ" ವಿಮೋಚನಾಕಾಂಡ 15:6,7
610 "ಅಶ್ವ ಬಲವು ಯುದ್ಧ ದಿನಕ್ಕಾಗಿ ಸನ್ನದ್ಧವಾಗಿದ್ದರೂ ಜಯವು ಯೆಹೋವನದೇ" ಜ್ಞಾನೋಕ್ತಿಗಳು 21:31
611 "ದುಃಖವಿದ್ದಲ್ಲಿ ಆನಂದ ತೈಲ, ಕುಂದಿದ ಮನಕ್ಕೆ ಪ್ರತಿಯಾಗಿ ಉತ್ಸಾಹ ಸ್ತೋತ್ರವಸ್ತ್ರ ಇವುಗಳನ್ನು ಒದಗಿಸಿಕೊಡುವುದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ" ಯೆಶಾಯ 61:03
612 "ನಾನು ಧರ್ಮವನ್ನು ಧರಿಸಿಕೊಂಡೆನು, ಧರ್ಮವು ನನ್ನನ್ನು ಧರಿಸಿತು, ನನ್ನ ನ್ಯಾಯವೇ ನನಗೆ ನಿಲುವಂಗೀಯೂ ಮುಂಡಾಸವೂ ಅಗಿತ್ತು" ಯೋಬ 29:14
613 "ಜಯಶಾಲಿಗೆ ಹೀಗೆ ಶುಬ್ರವಸ್ತ್ರಗಳನ್ನು ಹೊದಿಸುವರು, ಜೀವ ಬಾಧ್ಯರ ಪಟ್ಟಿಯಿಂದ ಅವನ ಹೆಸರನ್ನು ನಾನು ಅಳಿಸಿಬಿಡದೆ ಅವನು ನನ್ನವನೆಂದು ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಒಪ್ಪುವೆನು" ಪ್ರಕಟಣೆಗಳು 3:05
614 "ಪ್ರಕಾಶಮಾನವೂ ನಿರ್ಮಲವೂ ಆದ ನಯವಾದ ನಾರುಮಡಿಯನ್ನು ಧರಿಸಿಕೊಳ್ಳುವುದಕ್ಕೆ ಆಕೆಗೆ ಅನುಗ್ರಹಿಸೋಣವಾಗಿತ್ತು" ಪ್ರಕಟಣೆಗಳು 19:08
615 "ಶೇಷ್ಥವಾದ ನಿಲುವಂಗಿಯನ್ನು ತಟ್ಟನೆ ತಂದು ಇವನಿಗೆ ತೊಡಿಸಿರಿ, ಇವನ ಕೈಗೆ ಉಂಗುರವನ್ನು ಇಡಿರಿ, ಕಾಲಿಗೆ ಜೋಡು ಮೆಡಿಸಿರಿ" ಲೂಕ 15:22
616 "ನನಗೆ ರಕ್ಷಣೆಯ ವಸ್ತ್ರವನ್ನು ಹೊದಿಸಿ ಧರ್ಮವೆಂಬ ನಿಲುವಂಗಿಯನ್ನು ತೊಡಿಸಿದನು" ಯೆಶಾಯ 61
617 "ಚಿಯೋನೇ ಎಚ್ಚರಗೊಳ್ಳು, ಎಚ್ಚರಗೊಳ್ಳು ನಿನ್ನ ಪ್ರತಾಪವನ್ನು ಧರಿಸಿಕೊ ! ಯೆರೂಸಲೇಮೇ, ಪರಿಶುದ್ಧ ಪಟ್ಟಣವೇ ನಿನ್ನ ಚಂದದ ಉಡುಪನ್ನು ಧರಿಸಿಕೋ" ಯೆಶಾಯ 52:01
618 "ಆಕೆಯು ಜರತಾರಿ ವಸ್ತ್ರವನ್ನು ಧರಿಸಿಕೊಂಡಿದ್ದಾಳೆ, ಆಕೆಯ ಬೂಟೆದಾರಿ ಕಸೂತಿ ಕೆಲಸದ ವಸ್ತ್ರಗಳನ್ನು ಧರಿಸಿಕೊಂಡು ಸಖಿಯರ ಪರಿವಾರದೊಂದಿಗೆ ಬರುವಳು" ಕೀರ್ತನೆಗಳು 45:13,14
619 " ದೇವರು ನಮ್ಮ ಶರಣನೂ ಪರಾತ್ಪರನೂ ನಮ್ಮ ವಿಮೋಚಕನೂ ಆಗಿದ್ದಾನೆ" ಕೀರ್ತನೆಗಳು 78:35
620 "ನಾನಂತೂ ನನ್ನ ನ್ಯಾಯಸ್ಥಾಪಕನು ವಿಮೋಚಕನು) ಜೀವಸ್ವರೂಪನೆಂದು ಬಲ್ಲೆನು" ಯೋಬ 19:25