622 "ನಿನ್ನನ್ನು ಗರ್ಭದಿಂದಲೂ ರೂಪಿಸುತ್ತಾ ಬಂದಿರುವ ನಿನ್ನ ವಿಮೋಚಕನಾದ ಯೆಹೋವನು ಹೀಗನ್ನುತ್ತಾನೆ, ನಾನೇ ಸರ್ವಕಾರ್ಯಕರ್ತನಾದ ದೇವರು" ಯೆಶಾಯ 44:24
623 "ನಮ್ಮ ವಿಮೋಚಕನಿಗೆ ಸೇನಾಧೀಶ್ವರನಾದ ಯೆಹೋವನೆಂಬುದೇ ನಾಮಧೇಯ" ಯೆಶಾಯ 47:04
624 "ಯೆಹೋವನು ತನ್ನ ಜನರಿಗೆ ವಿಮೋಚನೆಯನ್ನುಂಟು ಮಾಡಿದ್ದಾನೆ, ತನ್ನ ಒಡಂಬಡಿಕೆಯನ್ನು ನಿತ್ಯಕ್ಕೂ ಸ್ಥಾಪಿಸಿದ್ದಾನೆ" ಕೀರ್ತನೆಗಳು 111:09
625 "ಬಿಡಿಸುವವನು (ವಿಮೋಚಕನು) ಚೀಯೋನಿನೊಳಗಿಂದ ಹೊರಟು ಬಂದು ಯಾಕೋಬಿನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆ ಮಾಡುವನು" ರೋಮಾಪುರದವರಿಗೆ 11:26
626 "ಪೂರ್ಣ ವಿಮೋಚನೆಯು ಆತನಿಂದಲೇ ದೊರಕುವುದು ಆತನೇ ಇಸ್ರಾಯೇಲನ್ನು ಅದರ ಸಕಲ ಪಾಪಗಳಿಂದ ವಿಮೋಚಿಸುವನು" ಕೀರ್ತನೆಗಳು 130:7,8
627 "ಕ್ರಿಸ್ತ ಯೇಸುವು ನಮಗೆ ದೇವರ ಕಡೆಯಿಂದ ಜ್ಞಾನವೂ ನೀತಿ ಶುದ್ಧೀಕರಣ ವಿಮೋಚನೆಗಳಿಗೆ ಕಾರಣನೂ ಆದನು" 1ಕೊರಿಂಥದವರಿಗೆ 1:30
628 "ಆಗ ಸಿಹಾಸನದ ಮೇಲೆ ಕೂತಿದ್ದವನು, ಇಗೋ ಎಲ್ಲವನ್ನು ಹೊಸದು ಮಾಡುತ್ತೇನೆ ಅಂದನು" ಪ್ರಕಟಣೆಗಳು 21:05
629 "ಇಗೋ ಹೊಸ ಕಾರ್ಯಗಳನ್ನು ಮಾಡುವೆನು, ಈಗ ತಲೆ ದೋರುತ್ತಲಿದೆ" ಯೆಶಾಯ 43:19
630 "ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಠಿಯಾದನು, ಇಗೋ ಪೂರ್ವ ಸ್ಥಿತಿ ಹೋಗಿ ಎಲ್ಲಾ ನೂತನವಾಯಿತು" 2 ಕೊರಿಂಥದವರಿಗೆ 5:17
631 "ದೇವರೇ ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸಿ ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು" ಕೀರ್ತನೆಗಳು 51:10
632 "ನೀವು ನಿಮ್ಮ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ" ಎಫೆಸದವರಿಗೆ 4:23
633 "ಜನಾಂಗಗಳು ನಿನ್ನ ಧರ್ಮವನ್ನು, ಸಕಲ ರಾಜರು ನಿನ್ನ ವೈಭವವನ್ನು ನೋಡುವರು, ಯೆಹೋವನ ಬಾಯಿ ನೇಮಿಸಿದ ಹೊಸ ಹೆಸರು ನಿನಗೆ ದೊರೆಯುವುದು" ಯೆಶಾಯ 62:02
634 " ಯೆಹೋವನನ್ನು ನಿರೀಕ್ಷಿಸುವವರೋ ಹೊಸಬಲವನ್ನು ಹೊಂದುವರು, ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು ಏರುವರು; ಓಡಿ ದಣ ಯರು ನಡೆದು ಬಳಲರು" ಯೆಶಾಯ 40:31
635 "ನಾನು ಅವರಿಗೆ ಒಂದೇ ಮನಸ್ಸನ್ನು ದಯಪಾಲಿಸಿ ನೂತನ ಸ್ವಭಾವವನ್ನು ಅವರಲ್ಲಿ ಹುಟ್ಟಿಸುವೆನು" ಯೆಹೆಜ್ಕೇಲ 11:19
636 "ಈ ಸ್ವಭಾವವು ಅದನ್ನು ಸೃಷ್ಠಿಸಿದಾತನ ಹೋಲಿಕೆಯ ಮೇರೆಗೆ ದಿನೇ ದಿನೇ ನೂತನವಾಗುತ್ತಾ ಪೂರ್ಣಜ್ಞಾನವನ್ನು ಉಂಟುಮಾಡುತ್ತದೆ" ಕೀರ್ತನೆಗಳು 12:06
637 "ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನ ಮನಸ್ಸನ್ನು ಹೊಂದಿಕೊಂಡು ಪರಲೋಕ ಭಾವದವರಾಗಿರ್ರಿ" ರೋಮಾಪುರದವರಿಗೆ 12:02
638 "ನೋಡು ನಿನ್ನನ್ನು ಶೋಧಿಸಿದ್ದೇನೆ, ಆದರೆ ಬೆಳ್ಳಿಯಷ್ಟು ಶೋಧಿಸಲಿಲ್ಲ, ಸಂಕಟವೆಂಬ ಪುಟಕ್ಕೆ ಹಾಕಿ ನಿನ್ನನ್ನು ಪರೀಕ್ಷಿಸಿದ್ದೇನೆ; ನನಗಾಗಿ ನನಗೋಸ್ಕರವೇ ಇದನ್ನು ಮಾಡುವೆನು ನನ್ನ ಹೆಸರು ಕೆಡಬಾರದಷ್ಟೆ" ಯೆಶಾಯ 48:10
639 "ಇಸ್ರಾಯೇಲ್ಯರಿಗೆ ಶುಭವಾಗಬೇಕೆಂಬುದೇ ಯೆಹೋವನ ಚಿತ್ತ" ಅರಣ್ಯಕಾಂಡ 24:01
640 "ನಿನ್ನ ವಿಜ್ಞಾಪನೆಯ ಆರಂಭದಲ್ಲಿಯೇ ದೇವರ ಅಪ್ಪಣೆಯಾಯಿತು, ಅದನ್ನು ತಿಳಿಸಲು ಇಲ್ಲಿಗೆ ಬಂದಿದ್ದೇನೆ, ನೀನು ದೇವರಿಗೆ ಅತಿಪ್ರಿಯ" ದಾನಿಯೇಲ 9:23