641 "ಆ ಪುರುಶನು ನನಗೆ - ಅತಿಪ್ರಿಯನೇ ಭಯಪಡಬೇಡ ನಿನಗೆ ಸಮಾಧಾನವಿರಲಿ ಬಲಗೊಳ್ಳು, ಬಲಗೊಳ್ಳು ಎಂದು ಹೇಳಿದನು" ದಾನಿಯೇಲ 10 19
642 "ಆದರೂ ಆತನು ನಿಮ್ಮ ಪಿತೃಗಳಲ್ಲಿ ಇಷ್ಟವುಳ್ಳವನಾಗಿ ಅವರನ್ನು ಪ್ರೀತಿಸಿದ್ದರಿಂದ ಈಗ ನಿಮ್ಮ ಅನುಭವಕ್ಕೆ ಬಂದಂತೆ ಅವರ ತರುವಾಯ ಅವರ ಸಂತತಿಯವರಾಗಿ ನಿಮ್ಮನ್ನೇ ಆದುಕೊಂಡನು" ಧರ್ಮೋಪದೇಶಕಾಂಡ 10:15
643 "ಚಿಕ್ಕ ಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವುದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ" ಲೂಕ 12:32
644 "ನೀನು ಉಸಿರಿದ ಧರ್ಮಶಾಸ್ತ್ರವು ಸಾವಿರಾರು ಚಿನ್ನ ಬೆಳ್ಳಿಯ ನಾಣ್ಯಗಳಿಗಿಂತಲೂ ನನಗೆ ಅತಿಪ್ರಿಯ" ಕೀರ್ತನೆಗಳು 119:72
645 "ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿಪಡಿಸಬೇಕೆಂಬ ಉದ್ಧೇಶದಿಂದಲೇ ನಿನ್ನನ್ನು ಉಳಿಸಿದೆನು" ವಿಮೋಚನಾಕಾಂಡ 9:16
646 "ನಾನು ನನ್ನ ಹೆಸರನ್ನು ನಿಮ್ಮ ನೆನಪಿಗೆ ಬರಮಾಡುವ ಎಲ್ಲಾ ಸ್ಥಳಗಳಲ್ಲಿಯೂ ನಿಮ್ಮ ಬಳಿಗೆ ಬಂದು ನಿಮ್ಮನ್ನು ಅಶೀರ್ವದಿಸುವೆನು" ವಿಮೋಚನಾಕಾಂಡ 20:24
647 "ನಿನ್ನ ಹೆಸರು ಯಾವಾಗಲೂ ಜ್ಞಾಪಕದಲ್ಲಿರುವಂತೆ ನಾನು ಮಾಡುವೆನು" ಕೀರ್ತನೆಗಳು 45:17
648 "ಆತನು ತನ್ನ ಹೆಸರಿನ ನಿಮಿತ್ತವಾಗಿಯೂ ತನ್ನ ಶೌರ್ಯವನ್ನು ಪ್ರಕಟಿಸುವುದಕ್ಕಾಗಿಯೂ ಅವರನ್ನು ರಕ್ಷಿಸಿದನು" ಕೀರ್ತನೆಗಳು 108:6
649 "ಯೆಹೋವನೇ, ನೀನಾದರೋ ಸದಾ ಸಿಂಹಾಸನಾರೂಢನಾಗಿರುವಿ, ನಿನ್ನ ಸಿಂಹಾಸನವು ತಲತಲಾಂತರಕ್ಕೂ ಸ್ಮರಿಸಲ್ಪಡುವುದು" ಕೀರ್ತನೆಗಳು 102:12
650 " ಯೆಹೋವನೇ ನಿನ್ನ ನಾಮ ಮಹಿಮೆಯನ್ನು ಬಲ್ಲವರು ನಿನ್ನಲ್ಲಿ ಭರವಸವಿಡುವರು, ಯಾಕೆಂದರೆ ನಿನ್ನ ಮರೆಹೋಗುವವರನ್ನು ನೀನು ಕೈಬಿಡುವುದಿಲ್ಲ" ಕೀರ್ತನೆಗಳು 9:10
651 "ಯಾವ ಕೇಡೂ ನಿನಗೆ ಸಂಭವಿಸದು, ಉಪದ್ರವವು ನಿನ್ನ ಗುಢಾರದ ಸಮೀಪಕ್ಕೂ ಬಾರದು" ಕೀರ್ತನೆಗಳು 91:10
652 "ನಂಬಿಕೆ ಎಂಬ ಗುರಾಣ ಯನ್ನು ಹಿಡಿದುಕೊಳ್ಳಿರಿ, ಅದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸುವುದಕ್ಕೆ ಶಕ್ತರಾಗುವಿರಿ" ಎಫೆಸದವರಿಗೆ 6:16
653 "ಇಗೋ ಯೆಹೋವನ ಭಯವೇ ಜ್ಞಾನವು; ದುಷ್ಟತನವನ್ನು ಬಿಡುವುದೇ ವಿವೇಕವು" ಯೋಬ 28:28
654 "ನಿನ್ನ ಚಿತ್ತವನ್ನು ತಿಳಿಯಪಡಿಸಿ ನನ್ನನ್ನು ನಡಿಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ" ಕೀರ್ತನೆಗಳು 73:24
655 "ನಿನ್ನ ಕಷ್ಟಾರ್ಜಿತವನ್ನು ನೀನೇ ಅನುಭವಿಸುವಿ, ನೀನು ಧನ್ಯನು ನಿನಗೆ ಶುಭವಿರುವುದು" ಕೀರ್ತನೆಗಳು 128:02
656 "ಶಿಷ್ಟನ ದುಡಿತ ಜೀವಾಸ್ಪದ ; ದುಷ್ಟನ ಆದಾಯ ಪಾಪಾಸ್ಪದ" ಜ್ಞಾನೋಕ್ತಿಗಳು 10:16
657 "ಅಳುತ್ತಾ ಬಿತ್ತುವವರು ಹಾಡುತ್ತಾ ಕೊಯ್ಯುವರು, ದುಃಖಿಸುತ್ತಾ ಬೀಜವನ್ನು ತೆಗೆದುಕೊಂಡು ಹೋಗುವವರು ಹರ್ಷಿಸುತ್ತಾ ಸಿವುಡುಗಳನ್ನು ಹೋತ್ತುಕೊಂಡು ಬರುವರು" ಕೀರ್ತನೆಗಳು 126:28
658 "ನಿನ್ನ ಕಟ್ಟಳೆಗಳು ನನ್ನ ಧ್ಯಾನವಾಗಿರುವುದರಿಂದ ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ ನಿನ್ನ ನೇಮಗಳನ್ನು ಕೈಕೊಂಡಿರುವುದರಿಂದ ನನ್ನ ಹಿರಿಯರಿಗಿಂತ ವಿವೇಕಿಯಾಗಿದ್ದೇನೆ" ಕೀರ್ತೆನೆಗಳು 119:99,100
659 "ನೋಡು, ನಿನಗೆ ಜ್ಞಾನವನ್ನೂ ವಿವೇಕವನ್ನೂ ಅನುಗ್ರಹಿಸಿದ್ದೇನೆ, ನಿನ್ನಂಥ ಜ್ಞಾನಿಯು ಮುಂಚೆ ಇರಲಿಲ್ಲ ಮುಂದೆಯೂ ಇರುವುದಿಲ್ಲ" 1 ಅರಸು
660 "ನಿಮ್ಮ ದೇವರಾದ ಯೆಹೋವನೊಬ್ಬನನ್ನೇ ಆರಾಧಿಸಬೇಕು ಆಗ ಆತನು ನಿಮ್ಮ ಅನ್ನ ಪಾನಗಳನ್ನು ಆಶೀರ್ವದಿಸುವನು, ನಿಮ್ಮೊಳಗೆ ಯಾವ ವ್ಯಾಧಿಯೂ ಉಂಟಾಗದಂತೆ ಮಾಡುವನು" ವಿಮೋಚನಾಕಾಂಡ 33:24