661 "ಉತ್ಸಾಹ ಧ್ವನಿಯೂ ಜಯಘೋಶವೂ ನೀತಿವಂತರ ಗುಡಾರಗಳಲ್ಲಿವೆ" ಕೀರ್ತನೆಗಳು 118:15
662 " ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ ಯೆಹೋವನು ಅವನನ್ನು ಉದ್ಧರಿಸುವನು, ಅವನ ರೋಗವನ್ನೆಲ್ಲಾ ಪರಿಹರಿಸಿ ಆರೋಗ್ಯವನ್ನುಂಟು ಮಾಡಿದ್ದೀಯಲ್ಲಸ್ವಾಮೀ" ಕೀರ್ತನೆಗಳು 41:03
663 "ಚಿಯೋನಿನ ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು, ಅಲ್ಲಿಯ ಜನರ ಪಾಪವು ಪರಿಹಾರವಾಗುವುದು" ಯೆಶಾಯ 33:24
664 "ತರತರದ ರೋಗ ಬಾದೆಗಳಿಂದ ಕಷ್ಟಪಡುವವರನ್ನು ದೆವ್ವ ಹಿಡಿದವರನ್ನೂ ಮೂರ್ಛಾ ರೋಗಿಗಳನ್ನೂ ಪಾಶ್ರ್ವವಾಯುವಿನವರನ್ನೂ ಆತನ ಬಳಿಗೆ ಕರತಂದರು, ಆತನು ಅವರನ್ನು ಸ್ವಸ್ಥಮಾಡಿದನು" ಮತ್ತಾಯ 4:24
665 'ರೋಗಿಗಳನ್ನು ಸ್ವಸ್ಥ ಮಾಡಿರಿ ಸತ್ತವರನ್ನು ಬದುಕಿಸಿರಿ; ಉಚಿತವಾಗಿ ಹೊಂದಿದ್ದೀರಿ ಉಚಿತವಾಗಿ ಕೊಡಿರಿ" ಮತ್ತಾಯ 10:28
666 "ನಿಮ್ಮಲ್ಲಿ ಅಸ್ವಸ್ಥನಾಗಿರುವವನು ಇದ್ದಾನೋ? ಅವನು ಸಭೆಯ ಹಿರಿಯರನ್ನು ಕರೇ ಕಳುಹಿಸಲಿ, ಅವರು ಅವನಿಗೆ ಎಣ್ಣೆ ಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ, ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ರಕ್ಷಿಸುವುದು" ಯಾಕೋಬ 5:14,15
667 "ಆತನು ನಿನ್ನ ಎಲ್ಲಾ ಅಪರಾಧಗಳನ್ನು ಕ್ಷಮಿಸುವವನೂ ಸಮಸ್ತ ರೋಗಗಳನ್ನು ವಾಸಿ ಮಾಡುವನು" ಕೀರ್ತನೆಗಳು 103
668 "ಆತನು ತನ್ನ ದೂತರನ್ನೋ ಎಂಬಂತೆ ತನ್ನ ವಾಕ್ಯವನ್ನು ಕಳುಹಿಸಿ ಅವರನ್ನು ಗುಣಪಡಿಸುವನು" ಕೀರ್ತನೆಗಳು 107:20
669 "ನನ್ನ ನಾಮದಲ್ಲಿ ಭಯಭಕ್ತಿಯಿಟ್ಟಿರುವ ನಿಮಗೋ ದೇವರ ಧರ್ಮವೆಂಬ ಸೂರ್ಯನು ಸ್ವಸ್ಥತೆಯನ್ನುಂಟು ಮಾಡುವ ಕಿರಣಗಳುಳ್ಳವನಾಗಿ ಮೂಡುವನು" ಮಲಾಕಿಯ 4:02
670 "ಒಳ್ಳೇದನ್ನು ಮಾಡು ಆಗ ಆ ಅಧಿಕಾರಿಯಿಂದಲೇ ನಿನಗೆ ಹೊಗಳಿಕೆಯುಂಟಾಗುವುದು" ರೋಮಾಪುರದವರಿಗೆ 13:03
671 "ಕತ್ತಲೆಯಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು, ಹೃದಯದ ಯೋಚನೆಗಳನ್ನು ಪ್ರತ್ಯಕ್ಷಪಡಿಸುವನು, ಆ ಕಾಲದಲ್ಲಿ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ಬರುವುದು" 1 ಕೊರಿಂಥದವರಿಗೆ 4:5
672 "ಭಂಗಾರಕ್ಕಿಂತಲೂ ಅಮೂಲ್ಯವಾದ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವ ಮಾನಗಳನ್ನು ಉಂಟುಮಾಡುವುದು" 1ಪೇತ್ರ 1:07
673 "ನೀನು ಕೇಳಿಕೊಂಡರೆ ನಾನು ಅನ್ಯ ಜನಗಳನ್ನೆಲ್ಲಾ ನಿನಗೆ ಅಧೀನ ಮಾಡುವೆನು" ಕೀರ್ತನೆಗಳು 2:08
674 "ಭೂಮಿಯ ಕಟ್ಟಕಡೆಯ ವರೆಗೂ ಇರುವ ಎಲ್ಲಾ ದೇಶಗಳನ್ನೂ ನಿನಗೆ ಸ್ವಾಸ್ಥ್ಯವಾಗಿ ಕೊಡುವೆನು" ಕೀರ್ತನೆಗಳು 2:08
675 " ಯೆಹೋವನೇ, ನೀನು ನನ್ನನ್ನು ಕಾಯುವ ಗುರಾಣ ; ನೀನು ನನ್ನ ಗೌರವಕ್ಕೆ ಆಧಾರನೂ ನನ್ನ ತಲೆಯನ್ನು ಎತ್ತುವಂತೆ ಮಾಡುವವನೂ ಆಗಿದ್ದೀ" ಕೀರ್ತನೆಗಳು 3:03
676 "ನಾನು ಯೆಹೋವನಿಗೆ ಮೊರೆಯಿಡುವಾಗ ಆತನು ತನ್ನ ಪರಿಶುದ್ಧ ಪರ್ವತದಿಂದ ಸದುತ್ತರವನ್ನು ಅನುಗ್ರಹಿಸುತ್ತಾನೆ" ಕೀರ್ತನೆಗಳು 3:04
677 "ರಕ್ಷಣೆಯು ಯೆಹೋವನಿಂದಲೇ ಉಂಟಾಗುವುದು" ಕೀರ್ತನೆಗಳು 3:08
678 "ನಾನು ಆತನಿಗೆ ಮೊರೆಯಿಡುವಾಗೆಲ್ಲಾ ಆತನು ಕೇಳುತ್ತಾನೆ" ಕೀರ್ತನೆಗಳು 4:03
679 "ಯೆಹೋವನೇ, ನೀತಿವಂತನನ್ನು ಅಶೀರ್ವದಿಸುವವನು ನೀನೇ" ಕೀರ್ತನೆಗಳು 5:11
680 "ಅವರ ಇಷ್ಟಾರ್ಥವನ್ನು ನೆರವೇರಿಸಿ ಅವರನ್ನು ಸುರಕ್ಷಿತವಾಗಿ ಇರಿಸುವೆನು" ಕೀರ್ತನೆಗಳು 12:05