682 "ನೀನು ಕೃಪೆಯುಳ್ಳವನಿಗೆ ಕೃಪಾವಂತನೂ, ದೋಷವಿಲ್ಲದವನಿಗೆ ನಿರ್ದೋಷಿಯೂ, ಶುದ್ಧನಿಗೆ ಪರಿಶುದ್ಧನೂ ಮೂರ್ಖನಿಗೆ ವಕ್ರನೂ ಆಗಿರುವಿ" ಕೀರ್ತನೆಗಳು 18:25,26
683 "ತಾನು ಅಭಿಷೇಕಿಸಿದ, ದಾವೀದನಿಗೂ ಅವನ ಸಂತತಿಯವರಿಗೂ ಸದಾಕಾಲ ಕೃಪೆಯನ್ನು ಅನುಗ್ರಹಿಸುವವ ನಾಗಿದ್ದಾನೆ" ಕೀರ್ತನೆಗಳು 18:50
684 "ಆತನು ದೀನರನ್ನು ತನ್ನ ವಿಧಿಗನುಗುಣವಾಗಿ ನಡಿಸುವನು" ಕೀರ್ತನೆಗಳು 25:09
685 "ಯೆಹೋವನ ವಿಧಿ ನಿಬಂಧನೆಗಲನ್ನು ಕೈಕೊಂದು ನಡೆಯುವವರಿಗೆ ಆತನ ಎಲ್ಲಾ ಮಾರ್ಗಗಳು ಕೃಪೆಯೂ ಸತ್ಯತೆಯೂ ಉಳ್ಳವು" ಕೀರ್ತನೆಗಳು 25:10
686 "ಯಾವನು ಯೆಹೋವನಲ್ಲಿ ಭಯಭಕ್ತಿಯುಳ್ಳವನೋ ಅವನಿಗೆ ಉಚಿತವಾದ ಮಾರ್ಗವನ್ನು ಆತನು ಬೋಧಿಸುವನು" ಕೀರ್ತನೆಗಳು 25:12
687 "ಆತನು ಸದ್ಭಕ್ತರಿಗೆ ಆಪ್ತಮಿತ್ರನಂತಿರುವನು" ಕೀರ್ತನೆಗಳು 25:14
688 "ತಂದೆ ತಾಯಿಗಳು ನನ್ನನ್ನು ತೊರೆದು ಬಿಟ್ಟರೇನು ಯೆಹೋವನು ನನ್ನನ್ನು ಸೇರಿಸಿಕೋಳ್ಳುವನು" ಕೀರ್ತನೆಗಳು 27:10
689 "ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು, ನಿನ್ನನ್ನು ಕಟಾಕ್ಷಿಸಿ ಅಲೋಚನೆಹೇಳುವೆನು" ಕೀರ್ತನೆಗಳು 32:08
690 "ಆದರೆ ಯೆಹೋವನಲ್ಲಿ ಭರವಸವಿಟ್ಟವರನ್ನು ಆತನ ಕೃಪೆಯು ಆವರಿಸಿಕೊಳ್ಳುವುದು" ಕೀರ್ತನೆಗಳು 32:10
691 "ಯೆಹೋವನಾದರೋ ತನ್ನ ಕೃಪೆಯನ್ನು ನಿರೀಕ್ಷಿಸುವವರನ್ನು ಲಕ್ಷಿಸುತ್ತಾನೆ" ಕೀರ್ತನೆಗಳು 33:18
692 "ಯೆಹೋವನು ನೀತಿವಂತರ ಕೂಗನ್ನು ಕೇಳಿ ಎಲ್ಲಾ ಕಷ್ಟಗಳಿಂದ ಅವರನ್ನು ಬಿಡಿಸುತ್ತಾನೆ" ಕೀರ್ತನೆಗಳು 34:17
693 "ಆತನ ಆಶ್ರಿತರಲ್ಲಿ ಒಬ್ಬರಾದರೂ ಅಪರಾಧಿಯೆಂದು ಎಣ ಸಲ್ಪಡುವುದಿಲ್ಲ" ಕೀರ್ತನೆಗಳು 34:22
694 "ಯೆಹೋವನು ತನ್ನ ಸೇವಕರ ಪ್ರಾಣವನ್ನು ವಿಮೋಚಿಸುತ್ತಾನೆ" ಕೀರ್ತನೆಗಳು 34:22
695 "ಮಾನವರು ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುತ್ತಾರೆ ನಿನ್ನ ಮಂದಿರದ ಸಮೃದ್ಧಿಯಿಂದ ಅವರನ್ನು ಸಂತೃಪ್ತಿಪಡಿಸುತ್ತೀ" ಕೀರ್ತನೆಗಳು 36:08
696 "ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು" ಕೀರ್ತನೆಗಳು 37:09
697 "ನೀತಿವಂತರನ್ನು ಯೆಹೋವನೇ ಉದ್ಧರಿಸುವನು" ಕೀರ್ತನೆಗಳು 37:17
698 "ಸತ್ಪುರುಷನ ಗತಿಸ್ಥಾಪನೆಯು ಯೆಹೋವನಿಂದಲೇ ಆಗಿದೆ ಯೆಹೋವನು ಅವನನ್ನು ಕೈಹಿಡಿದು ಉದ್ಧಾರ ಮಾಡುವನು" ಕೀರ್ತನೆಗಳು 37:22,24
699 "ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು" ಕೀರ್ತನೆಗಳು 37:29
700 "ನೀತಿವಂತರ ರಕ್ಷಣೆ ಯೆಹೋವನಿಂದಲೇ; ಇಕ್ಕಟ್ಟಿನಲ್ಲಿ ಆತನೇ ಅವರಿಗೆ ದುರ್ಗಸ್ಥಾನ" ಕೀರ್ತನೆಗಳು 37:39