721 "ನಿನ್ನನ್ನು ಕಾಯುವವನು ಯೆಹೋವನೇ; ನಿನ್ನ ಬಲಗಡೆಯಲ್ಲಿ ನೆರಳಿನಂತೆ ನಿಂತಿರುವಾತನು ಯೆಹೋವನೇ" ಕೀರ್ತೆನೆಗಳು 121:05
722 "ಯೆರುಸಲೇಮಿನ ಶುಭಕ್ಕೋಸ್ಕರ ಪ್ರಾರ್ಥಿಸಿರಿ ಯೆರೂಸಲೇಮೇ ನಿನ್ನನ್ನು ಪ್ರೀತಿಸುವವರಿಗೆ ಸೌಭಾಗ್ಯವುಂಟಾಗಲಿ" ಕೀರ್ತನೆಗಳು 122:06
723 "ಇಸ್ರಾಯೇಲೇ, ಯೆಹೋವನನ್ನು ಮುಂಗಾದಿರು; ಆತನು ಕೃಪಾಸಂಪನ್ನನು; ಪೂರ್ಣ ವಿಮೋಚನೆಯು ಆತನಿಂದಲೇ ದೊರಕುವುದು" ಕೀರ್ತನೆಗಳು 129:07
724 "ಮಹತ್ಕಾರ್ಯಗಳನ್ನು ನಡಿಸುವುದಕ್ಕೆ ಆತನೊಬ್ಬನೇ ಶಕ್ತನು; ಆತನ ಕೃಪೆಯು ಶಾಶ್ವತವಾದದ್ದು" ಕೀರ್ತನೆಗಳು 136:04
725 "ನಾನು ಮೊರೆಯಿಟ್ಟಾಗ ಸದುತ್ತರವನ್ನು ದಯಪಾಲಿಸಿದಿ; ನನ್ನ ಆತ್ಮಕ್ಕೆ ಬಲಕೊಟ್ಟು ನನ್ನನ್ನು ಧೈರ್ಯಪಡಿಸಿದ್ದೀ" ಕೀರ್ತನೆಗಳು 138:03
726 "ಯೆಹೋವನು ಮಹೋನ್ನತನು ಆದರೂ ದೀನರನ್ನು ಲಕ್ಷಿಸುತ್ತಾನೆ" ಕೀರ್ತನೆಗಳು 138:06
727 "ಯೆಹೋವನು ನನ್ನ ಕಾರ್ಯವನ್ನು ಸಿದ್ಧಿಗೆ ತರುವನು, ಆತನ ಕೃಪೆಯು ಶಾಶ್ವತವದದ್ದು" ಕೀರ್ತನೆಗಳು 138:08
728 "ನನ್ನ ಆಯುಷ್ಕಾಲದ ಪ್ರಥಮ ದಿನವು ಪ್ರಾರಂಭ ವಾಗುವ ಮೊದಲೇ ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು" ಕೀರ್ತನೆಗಳು 139:16
729 "ನೀತಿವಂತರು ನಿನ್ನ ಹೆಸರನ್ನು ಕೊಂಡಾಡುವರು; ಯತಾರ್ಥರು ನಿನ್ನ ಸನ್ನಿಧಿಯಲ್ಲಿ ಬದುಕುವರು" ಕೀರ್ತನೆಗಳು 140:13
730 "ನೀತಿವಂತರು ನನ್ನನ್ನು ಹೊಡೆಯಲಿ, ಅದು ನನಗುಪಕಾರ; ಅವರು ನನ್ನನು ಶಿಕ್ಷಿಸಲಿ ಅದು ನನ್ನ ತಲೆಗೆ ಎಣ್ಣೆಯಂತಿದೆ; ನನ್ನ ತಲೆಯು ಅದನ್ನು ಬೇಡವೆನ್ನದಿರಲಿ" ಕೀರ್ತನೆಗಳು 141:05
731 "ಯೆಹೋವನು ಬಿದ್ದವರನ್ನೆಲ್ಲಾ ಎತ್ತುವವನೂ ಕುಗ್ಗಿದವರನ್ನೆಲ್ಲಾ ಉದ್ಧರಿಸುವವನೂ ಆಗಿದ್ದಾನೆ" ಕೀರ್ತನೆಗಳು 145:14
732 "ನೀನು ಕೈತೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತೀ" ಕೀರ್ತನೆಗಳು 145:16
733 "ಯೆಹೋವನಿಗೆ ಮೊರೆಯಿಡುವವರು ಯತಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ" ಕೀರ್ತನೆಗಳು 145:18
734 "ಯೆಹೋವನು) ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು ನೆರವೇರಿಸುತ್ತಾನೆ; ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ" ಕೀರ್ತನೆಗಳು 145:19
735 "ಯೆಹೋವನು ತನ್ನನ್ನು ಪ್ರೀತಿಸುವವರೆಲ್ಲರನ್ನು ಕಾಪಾಡುತ್ತಾನೆ" ಕೀರ್ತನೆಗಳು 145:20
736 "ವಾಗ್ದಾನವನ್ನು ಯಾವಾಗಲೂ ನೆರವೇರಿಸುವವನೂ ಹಿಂಸೆಗೆ ಗುರಿಯಾದವರ ನ್ಯಾಯವನ್ನು ಸ್ಥಾಪಿಸುವವನೂ ಹಸಿದವರಿಗೆ ಆಹಾರ ಕೊಡುವವನೂ ಆತನೇ" ಕೀರ್ತನೆಗಳು 146:7
737 "ಯೆಹೋವನು ಕುಗ್ಗಿದವರನ್ನು ಉದ್ಧರಿಸುತ್ತಾನೆ ಯೆಹೊವನು ನೀತಿವಂತರನ್ನು ಪ್ರೀತಿಸುತ್ತಾನೆ" ಕೀರ್ತನೆಗಳು 146:08
738 "ಯೆಹೋವನು) ಅನಾಥರಿಗೂ ವಿಧವೆಯರಿಗೂ ಆಧಾರವಾಗಿದ್ದಾನೆ" ಕೀರ್ತನೆಗಳು 146:09
739 "ಯೆಹೋವನನ್ನು ನಂಬಿರಿ; ಆತನು ನಮ್ಮನ್ನು ಹೇಗೂ ರಕ್ಷಿಸುವನು" ಕೀರ್ತನೆಗಳು 36:15
740 "ನಿನ್ನೊಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ ನಿನ್ನ ಮಕ್ಕಳನ್ನು ಉದ್ಧರಿಸುವೆನು" ಯೆಶಾಯ 49:25