741 "ನನ್ನನ್ನು ಆಶ್ರಯಿಸುವವನೋ ದೇಶವನ್ನನುಭವಿಸಿ ನನ್ನ ಪರಿಶುದ್ಧ ಪರ್ವತವನ್ನು ಬಾಧ್ಯವಾಗಿ ಹೊಂದುವನು" ಯೆಶಾಯ 57:13
742 "ನನ್ನನ್ನು ಕೇಳಿಕೋ, ನಾನು ನಿನಗೆ ಸದುತ್ತರವನ್ನು ದಯಪಾಲಿಸಿ ನಿನಗೆ ತಿಳಿಯದ ಮಹತ್ತಾದ ಗೂಢಾರ್ಥಗಳನ್ನು ಗೋಚರಪಡಿಸುವೆನು" ಯೆರೆಮೀಯ 33:03
743 "ಆ ದಿನದಲ್ಲಿ ನಾನು ನಿನ್ನನ್ನು ಉದ್ಧರಿಸುವೆನು; ನೀನು ಹೆದರುವಮನುಷ್ಯರ ಕೈಗೆ ಸಿಕ್ಕುವುದಿಲ್ಲ ನೀನು ನನ್ನಲ್ಲಿ ಭರವಸವಿಟ್ಟ ಕಾರಣ ನಿನ್ನನ್ನು ರಕ್ಷಿಸೇ ರಕ್ಷಿಸುವೆನು" ಯೆರೆಮೀಯ 39:17,18
744 "ನಾವು ಉಳಿದಿರುವುದು ಯೆಹೋವನ ಕರುಣೆಯೇ ಆತನ ಕೃಪಾವರಗಳು ನಿಂತುಹೋಗವು" ಪ್ರಲಾಪಗಳು 3:22
745 "ಯೆಹೋವನು ತನ್ನನ್ನು ನಿರೀಕ್ಷಿಸುವವರಿಗೂ ಮಹೋಪಕಾರಿಯಾಗಿದ್ದಾನೆ" ಪ್ರಲಾಪಗಳು 3:25
746 "ನಾನು ನಿಮ್ಮ ದುರವಸ್ಥೆಯನ್ನು ನಿಮ್ಮ ಕಣ್ಣೆದುರಿಗೇ ತಪ್ಪಿಸುವಾಗ ನಿಮ್ಮನ್ನು ಲೋಕದ ಸಕಲ ಜನಾಂಗಗಳಲ್ಲಿ ಕೀರ್ತಿ ಸ್ತೋತ್ರಗಳಿಗೆ ಗುರಿ ಮಾಡುವೆನು" ಚೆಪನ್ಯ 3:20
747 "ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು" ಮತ್ತಾಯ 6:33
748 "ಬೇಡಿಕೊಳ್ಳಿರಿ, ನಿಮಗೆ ದೊರೆಯುವುದು; ಹುಡುಕಿರಿ, ನಿಮಗೆ ಸಿಕ್ಕುವುದು; ತಟ್ಟಿರಿ, ನಿಮಗೆ ತೆರೆಯುವುದು" ಮತ್ತಾಯ 7:07
749 "ಬೇಡಿಕೊಳ್ಳುವ ಪ್ರತಿಯೊಬ್ಬನೂಹೊಂದುವನು" ಮತ್ತಾಯ 7:08
750 "ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು" ಮತ್ತಾಯ 7:21
751 "ಅಂಜಬೇಡ ನಂಬಿಕೆ ಮಾತ್ರ ಇರಲಿ" ಮತ್ತಾಯ 5:36
752 "ನೀವು ಪ್ರಾರ್ಥನೆ ಮಾಡಿ ಏನೇನು ಬೇಡಿಕೊಳ್ಳುತ್ತೀರೊ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ" ಮಾರ್ಕ 11:24
753 " ಕ್ಷಮಿಸಿರಿ, ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯೂ ಸಹ ನಿಮ್ಮ ತಪ್ಪುಗಳನ್ನು ನಿಮಗೆ ಕ್ಷಮಿಸಿಬಿಡುವನು" ಮತ್ತಾಯ 11:25
754 "ಭೂಮ್ಯಾಕಾಶಗಳು ಅಳಿದು ಹೋಗುವವು, ಆದರೆ ನನ್ನ ಮಾತುಗಳು ಅಳಿದು ಹೋಗುವುದೇ ಇಲ್ಲ" ಮತ್ತಾಯ 13:31
755 "ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು ಇದಲ್ಲದೆ ನಂಬುವವರಿಂದ ಸೂಚಕ ಕಾರ್ಯಗಳು ಉಂಟಾಗುವವು" ಮತ್ತಾಯ 16:17
756 " ಭಯಪಡಬೇಡ ನಿನ್ನ ವಿಜ್ಞಾಪನೆ ದೇವರಿಗೆ ಮುಟ್ಟಿತು" ಲೂಕ 1:13
757 " ದೇವರಿಂದ ಬರುವ ಯಾವ ಮಾತಾದರೂ ನಿಶ್ಪಲವಾಗುವುದಿಲ್ಲ" ಲೂಕ 1:37
758 " ನೀತಿವಂತರನ್ನು ಕರೆಯುವುದಕ್ಕೆ ನಾನು ಬಂದವನಲ್ಲ, ಪಾಪಿಗಳನ್ನು ಕರೆಯುವುದಕ್ಕೆ ಬಂದವನು" ಲೂಕ 5:32
759 "ನೋಡಿರಿ, ಹಾವುಗಳನ್ನೂ ಚೇಳುಗಳನ್ನೂ ವೈರಿಯ ಸಮಸ್ತ ಬಲವನ್ನೂ ತುಳಿಯುವುದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ" ಲೂಕ 10:19
760 "ಹೆದರ ಬೇಡಿರಿ ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು" ಲೂಕ 12:07