62"ಯೆಹೋವನೇ, ನಾನು ನಿನಗೆ - ನೀನೇ ನನ್ನ ಶರಣನೂ ಜೀವಲೋಕದಲ್ಲಿ ನನ್ನ ಪಾಲೂ ಆಗಿದ್ದೀ ಎಂದು ಕೂಗಿ ಮೊರೆಯಿಟ್ಟಿದ್ದೇನೆ" ಕೀರ್ತನೆಗಳು 142:05
63"ನೀನು ದೀನರಿಗೆ ಕೋಟೆ, ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣಾದುರ್ಗ, ಬಿಸಿಲಿಗೆ ನೆರಳು, ಭೀಕರ ಶ್ವಾಸವು ಬಂಡೆಗೆ ಬಡಿದು ಬಿಡುವ ಬಿರುಗಾಳಿಯಂತಿರುವಾಗ ಆಶ್ರಯವೂ ಆಗಿದ್ದೀ " ಯೆಶಾಯ 25:04
64"ಆದಿಯಿಂದಲೂ ದೇವರೇ ನಿಮಗೆ ವಾಸಸ್ಥಾನ ವಾಗಿದ್ದಾನಲ್ಲಾ; ಸದಾ ದೇವರ ಹಸ್ತವೇ ನಿಮಗೇ ಅಧಾರ" ಧರ್ಮೋಪದೇಶಕಾಂಡ 33:27
65"ನಾನಾದರೋ ಇಕ್ಕಟ್ಟಿನ ಕಾಲದಲ್ಲಿ ಆಶ್ರಯವೂ ದುರ್ಗವೂ ಆಗಿರುವ ನಿನ್ನ ಬಲವನ್ನು ಹಾಡಿ ಹೊಗಳುವೆನು; ಪ್ರಾತಃ ಕಾಲದಲ್ಲಿ ನಿನ್ನ ಪ್ರೇಮವನ್ನು ಉಲ್ಲಾಸದಿಂದ ಕೊಂಡಾಡುವೆನು" ಕೀರ್ತನೆಗಳು 59:16
66"ನಾನು ಯೆಹೋವನಿಗೆ ನೀನೇ ನನ್ನ ಶರಣನು ನನ್ನ ದುರ್ಗವೂ ನಾನು ಭರವಸವಿಟ್ಟಿರುವ ನನ್ನ ದೇವರೂ ಎಂದೂ ಹೇಳುವೆನು" ಕೀರ್ತನೆಗಳು 91:02
67"ಪರಾತ್ಪರನನ್ನು ನಿವಾಸಸ್ಥಾನ ಮಾಡಿಕೊಂಡಿದ್ದೀಯಲ್ಲಾ, ಯಾವ ಕೇಡೂ ನಿನಗೆ ಸಂಭವಿಸದು; ಉಪದ್ರವವು ನಿನ್ನ ಗುಢಾರದ ಸಮೀಪಕ್ಕೂ ಬಾರದು" ಕೀರ್ತನೆಗಳು 91:9,10
68"ಯೆಹೋವನಿಗೆ ಭಯಪಡುವದರಿಂದ ಕೇವಲ ನಿರ್ಭಯ; ಆತನ ಮಕ್ಕಳಿಗೆ ಆಶ್ರಯವಿದ್ದೇ ಇರುವದು" ಜ್ಞಾನೋಕ್ತಿಗಳು 14:26
69"ನೀನು ಐಗುಪ್ತ ದೇಶದೊಳಗಿಂದ ಪಾರಾಗಿ ಬಂದ ಕಾಲದಲ್ಲಿ ನಾನು ತೋರಿಸಿದಂತೆ ಅದ್ಭುತಗಳನ್ನು ತೋರಿಸುವೆನು" ಮೀಕ 7:15
70"ನಾನು ಒಂದು ನಿಬಂಧನವನ್ನು ಸ್ಥಾಪಿಸುತ್ತೇನೆ, ಕೇಳು ಲೋಕದಲ್ಲಿ ಎಲ್ಲಿಯೂ ಯಾವ ಜನಾಂಗದಲ್ಲಿಯಾದರೂ ನಡೆಯದಂಥ ಮಹತ್ಕಾರ್ಯಗಳನ್ನು ನಿನ್ನ ಜನರೆಲ್ಲರೂ ನೋಡುವಂತೆ ನಡಿಸುವೆನು ನಿಮ್ಮ ಸುತ್ತ ಮುತ್ತಲಿರುವ ಎಲ್ಲಾ ಜನರು ಯೆಹೋವನು ಮಾಡುವ ಮಹತ್ಕಾರ್ಯವನ್ನು ನೋಡುವರು ನಾನು ನಿಮ್ಮ ವಿಶಯದಲ್ಲಿ ಮಾಡಬೇಕೆಂದಿರುವದು ಭಯಂಕರವಾದದ್ದು" ವಿಮೋಚನಾಕಾಂಡ 34:10
71"ಆತನು ಅಪ್ರಮೇಯ ಮಹತ್ಕಾರ್ಯಗಳನ್ನೂ ಅಸಂಖ್ಯವಾದ ಅದ್ಭುತಕೃತ್ಯಗಳನ್ನೂ ಮಾಡುತ್ತಾನೆ" ಯೋಬ 5:09
72"ಯೆಹೊವನೇ ನನ್ನ ದೇವರೇ, ನಿನಗೆ ಸಮಾನನಾದ ದೇವರು ಯಾರು? ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ ಎಷ್ಟೋ ವಿಶೇಷವಾಗಿದೆ; ಅವುಗಳನ್ನು ವಿವರಿಸಿ ಹೇಳೋಣವೆಂದರೆ ಅಸಾಧ್ಯವು; ಅವು ಅಸಂಖ್ಯಾತವು" ಕೀರ್ತನೆಗಳು 40:05
73"ಮಹತ್ಕಾರ್ಯಗಳನ್ನು ನಡಿಸುವುದರಲ್ಲಿ ಅದ್ವಿತೀಯನೂ ಇಸ್ರಾಯೇಲ್ಯರ ದೇವರೂ ಆದ ಯೆಹೋವ ದೇವರಿಗೆ ಸ್ತೋತ್ರವು" ಕೀರ್ತನೆಗಳು 72
74"ಯೆಹೋವನ ಕೃತ್ಯಗಳನ್ನು ವಣ ್ಸುವೆನು; ಪೂರ್ವದಿಂದ ನೀನು ನಡಿಸಿದ ಅದ್ಬುತಗಳನ್ನು ನೆನಪು ಮಾಡಿಕೊಳ್ಳುವೆನು" ಕೀರ್ತನೆಳು 77:11
75"ಅದ್ಭುತಗಳನ್ನು ನಡಿಸುವ ದೇವರು ನೀನೇ; ಜನಾಂಗಗಳಲ್ಲಿ ಪರಾಕ್ರಮವನ್ನು ತೋರ್ಪಡಿಸಿದಿ" ಕೀರ್ತನೆಗಳು 77:14
76"ಯೆಹೋವನೇ, ಗಗನವು ನಿನ್ನ ನಾಮ ಮಹತ್ತನ್ನು ಪ್ರಸಿದ್ದ ಪಡಿಸುವದು; ನಿನ್ನ ಸತ್ಯತೆಯನ್ನು ಪರಿಶುದ್ದರ ಸಭೆಯಲ್ಲಿ ಕೀರ್ತಿಸುವದು" ಕೀರ್ತನೆಗಳು 89:05
77"ಯೆಹೋವನಿಗೆ ಹೊಸ ಕೀರ್ತನೆಯನ್ನು ಹಾಡಿರಿ; ಆತನು ಅದ್ಭುತಗಳನ್ನು ನಡಿಸಿದ್ದಾನೆ ಆತನ ಬಲಗೈಯೂ ಬಾಹುವೂ ಜಯವನ್ನು ಉಂಟು ಮಾಡಿವೆ" ಕೀರ್ತನೆಗಳು 98;
78"ಯೆಹೋವನ ಘನತೆಯನ್ನೂ ಆತನ ಪರಾಕ್ರಮವನ್ನೂ ಅದ್ಭುತಕೃತ್ಯಗಳನ್ನೂ ಮುಂದಣ ಸಂತತಿಯವರಿಗೆ ವಿವರಿಸುವೆವು" ಕೀರ್ತನೆಗಳು 78:04
79"ಯೆಹೋವನೇ ಜ್ಞಾನವನ್ನು ಕೊಡುವಾತನು, ಆತನ ಬಾಯಿಂದಲೇ ತಿಳುವಳಿಕೆಯೂ ವಿವೆಕವೂ ಹೊರಟು ಬರುತ್ತವೆ" ಜ್ಞಾನೋಕ್ತಿಗಳು 2:06
80"ಜ್ಞಾನವು ನಿನ್ನ ಹೃದಯದೊಳಗೆ ಪ್ರವೇಶಿಸುವುದು ತಿಳುವಳಿಕೆಯು ನಿನ್ನ ಆತ್ಮಕ್ಕೆ ಅಂದವಾಗಿರುವುದು" ಜ್ಞಾನೋಕ್ತಿಗಳು 2:10