821 "ಆತನಲ್ಲಿ ನಂಬಿಕೆಯಿಟ್ಟು ನಿಮ್ಮ ನಂಬಿಕೆಯ ಅಂತ್ಯಫಲವಾಗಿರುವ ಆತ್ಮ ರಕ್ಷಣೆಯನ್ನು ಹೊಂದುವವರಾಗಿ ಹೇಳಲಶಕ್ಯವಾದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ" 1ಪೇತ್ರನು 1:8,9
822 "ಹಸು ಮಕ್ಕಳಂತೆ ಪಾರಮಾರ್ಥಿಕವಾದ ಶುದ್ಧ ಹಾಲನ್ನು ಬಯಸಿರಿ; ಅದರಿಂದ ಬೆಳೆಯುತ್ತಾ ರಕ್ಷಣೆಯನ್ನು ಹೊಂದುವಿರಿ" 1ಪೇತ್ರನು 2:2
823 "ನೀವೂ ಸಹ ಜೀವವುಳ್ಳ ಕಲ್ಲುಗಳಾಗಿದ್ದು ಆತ್ಮಸಂಬಂಧವಾದ ಮಂದಿರವಾಗಲಿಕ್ಕೆ ಕಟ್ಟಲ್ಪಡುತ್ತಾ ಇದ್ದೀರಿ" 1ಪೇತ್ರನು 2:4,5
824 "ನೀವೂ ಸಹ ಯೇಸುಕ್ರಿಸ್ತನ ಮೂಲಕ ದೇವರಿಗೆ ಸಮರ್ಪಕವಾದ ಆತ್ಮೀಯ ಯಜ್ಞಗಳನ್ನು ಸಮರ್ಪಿಸುವುದಕ್ಕೆ ಪವಿತ್ರ ಯಾಜಕವರ್ಗದವರಾಗಿದ್ದೀರಿ" 1ಪೇತ್ರ 2:05
825 " ಒಳ್ಳೇದನ್ನು ಮಾಡಿ ಬಾದೆಪಡುವದರಲ್ಲಿ ನೀವು ತಾಳ್ಮೆಯಿಂದಿದ್ದರೆ ಅದು ದೇವರ ಮುಂದೆ ಶ್ಲಾಘ್ಯವಾಗಿದೆ" 1 ಪೇತ್ರ 2:20
826 "ನಿಮ್ಮ ಚಿಂತೆಯನ್ನೆಲ್ಲಾ ಆತನಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ" 1 ಪೇತ್ರನು 5:7
827 "ಕ್ರಿಸ್ತನಲ್ಲಿ ನಿಮ್ಮನ್ನು ತನ್ನ ನಿತ್ಯಪ್ರಭಾವಕ್ಕೆ ಕರೆದ ಕೃಪಾಪೂರ್ಣನಾದ ದೇವರು ತಾನೇ ನೀವು ಸ್ವಲ್ಪಕಾಲ ಬಾಧೆಪಟ್ಟಮೇಲೆ ನಿಮ್ಮನ್ನು ಯೋಗ್ಯ ಸ್ಥಿತಿಗೆ ತಂದು ನೆಲೆಗೊಳಿಸಿ ಬಲಪಡಿಸುವನು" 1ಪೇತ್ರನು 5:10
828 "ದೇವರು ನಿಮ್ಮನ್ನು ಕರೆದದ್ದನ್ನೂ ಆದುಕೊಂಡದ್ದನ್ನೂ ದೃಢಪಡಿಸಿಕೊಳ್ಳುವುದಕ್ಕೆ ಮತ್ತಷ್ಟು ಪ್ರಯಾಸಪಡಿರಿ ಹೀಗೆ ಮಾಡಿದರೆ ಎಂದಿಗೂ ಎಡಹುವುದಿಲ್ಲ" 2ಪೇತ್ರನು 1:10
829 "ಕರ್ತನು ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವುದಕ್ಕೂ ದುರ್ಮಾರ್ಗಿಗಳನ್ನು ನ್ಯಾಯತೀರ್ಪಿನ ದಿನದ ತನಕ ಶಿಕ್ಷಾನುಭವದಲ್ಲಿ ಇಡುವುದಕ್ಕೂ ಬಲ್ಲವನಾಗಿದ್ದಾನೆ" 2ಪೇತ್ರನು 2:09
830 "ನಮ್ಮ ಕರ್ತನ ದೀರ್ಘಶಾಂತಿಯು ನಮ್ಮ ರಕ್ಷಣಾರ್ಥವಾಗಿ ಅದೆ ಎಂದು ಎಣ ಸಿಕೊಳ್ಳಿರಿ" 2ಪೇತ್ರನು 3:15
831 "ಯಾವನಾದರೂ ಪಾಪ ಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸುಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ" 1 ಯೋಹಾನ 2:1
832 "ಯೇಸುವಿನ ರಕ್ತವು ಸಕಲ ಪಾಪವನ್ನು ನಿವಾರಣ ಮಾಡಿ ನಮ್ಮನ್ನು ಶುದ್ಧಿ ಮಾಡುತ್ತದೆ" 1 ಯೋಹಾನ 1:7
833 "ನಮ್ಮ ಪಾಪಗಳನ್ನು ಒಪ್ಪಿ ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿ ಮಾಡುವನು 1ಯೋಹಾನ 1:09
834 "ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು" 1 ಯೋಹಾನ 2:17
835 "ತಾನು ಮಗನಿಗೆ ಸೇರಿದವನೆಂದು ಒಪ್ಪಿಕೊಳ್ಳುವವನು ತಂದೆಗೂ ಸೇರಿದವನಾಗಿದ್ದಾನೆ" 1ಯೋಹಾನ 2:23
836 "ಕ್ರಿಸ್ತನು ತಾನು ಕೊಡುತ್ತೇನೆಂದು ನಮಗೆ ವಾಗ್ದಾನ ಮಾಡಿದ್ದು ನಿತ್ಯಜೀವವು" 1 ಯೋಹಾನ 2:25
837 "ಅಭಿಶೇಕವು ಎಲ್ಲಾ ವಿಶಯಗಳಲ್ಲಿ ನಿಮಗೆ ಉಪದೇಶ ಮಾಡುವಂಥದ್ದಾಗಿದ್ದು ಸತ್ಯವಾಗಿದೆ" 1 ಯೋಹಾನ 2:27
838 "ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಾವೂ ಆತನ ಹಾಗಿರುವೆವೆಂದು ಬಲ್ಲೆವು; ಯಾಕಂದರೆ ಆತನಿರುವ ಪ್ರಕಾರವೇ ಆತನನ್ನು ನೋಡುವೆವು" 1ಯೋಹಾನ 3:2
839 "ದೇವರಿಂದ ಹುಟ್ಟಿದವನು ಪಾಪ ಮಾಡನು; ದೇವರ ಜೀವವು ಅವನಲ್ಲಿ ನೆಲೆಗೊಂಡದೆ" 1 ಯೋಹಾನ 3:9
840 "ಕ್ರೈಸ್ತಸಹೋದರನನ್ನು ಪ್ರೀತಿಸುವವನಾಗಿರುವುದರಿಂದ ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದೇವೆಂಬುದು ನಮಗೆ ಗೊತ್ತಾಗಿದೆ" 1ಯೋಹಾನ 3:14