881 "ನೀನು ಸಾಯಬೇಕಾದರೂ ನಂಬಿಗಸ್ತನಾಗಿರು; ನಾನು ನಿನಗೆ ಜೀವವೆಂಬ ಜಯಮಾಲೆಯನ್ನು ಕೊಡುವೆನು" ಪ್ರಕಟಣೆಗಳು 2:10
882 "ಯಾವನು ಜಯಹೊಂದುತ್ತಾನೋ ಅವನಿಗೆ ಬಚ್ಚಿಟ್ಟಿರುವ ಮನ್ನವೆಂಬ ಆಹಾರವನ್ನು ಕೊಡುವೆನು" ಪ್ರಕಟಣೆಗಳು 2:17
883 "ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವುದು" ರೋಮಾಪುರದವರಿಗೆ 10:09
884 "ಹೃದಯದಿಂದ ನಂಬುವುದರ ಮೂಲಕ ನೀತಿಯು ದೊರಕೊತ್ತದೆ ಬಾಯಿಂದ ಅರಿಕೆ ಮಾಡುವುದರ ಮೂಲಕ ರಕ್ಷಣೆಯಾಗುತ್ತದೆ" ರೋಮಾಪುರದವರಿಗೆ 10:10
885 "ಸುವಾರ್ತೆಯು ದೇವರ ಬಲಸ್ವರೂಪವಾಗಿದ್ದು ನಂಬುವವರೆಲ್ಲರಿಗೂ ರಕ್ಷಣೆ ಉಂಟು ಮಾಡುವಂಥದ್ದಾಗಿದೆ" ರೋಮಾಪುರದವರಿಗೆ 1:16
886 "ಆ ಆತ್ಮನಿಂದಲೇ ನಾನಾ ರೋಗಗಳನ್ನು ವಾಸಿಮಾಡುವ ವರವೂ ಒಬ್ಬನಿಗೆ ಮಹತ್ತುಗಳನ್ನು ಮಾಡುವ ವರವೂ ಒಬ್ಬನಿಗೆ ಪ್ರವಾದನಾ ವರವೂ ಒಬ್ಬನಿಗೆ ಸತ್ಯ ಅಸತ್ಯ ಆತ್ಮಗಳನ್ನು ವಿವೇಚಿಸುವ ವರವೂ ಕೊಡಲ್ಪಡುತ್ತವೆ" 1ಕೊರಿಂಥದವರಿಗೆ 12:10
887 "ದೇವರ ಮುಖವು ನಮಗೆ ಮೊಬ್ಬಾಗಿ ಕಾಣ ಸುತ್ತದೆ; ಆಗ ಮುಖಾಮುಖಿಯಾಗಿ ಆತನನ್ನು ನೋಡುವೆವು" 1 ಕೊರಿಂಥದವರಿಗೆ 13:12
888 "ಆತನು ತನ್ನ ಭಕ್ತರ ಹೆಜ್ಜೆಗಳನ್ನು ಕಾಯುವನು" 1ಸಮುವೇಲ 2:09
889 "ಯೆಹೋವನಲ್ಲಿ ಭರವಸವಿಡಿರಿ, ಆಗ ಸುರಕ್ಷಿತರಾಗಿರುವಿರಿ; ಆತನ ಪ್ರವಾದಿಗಳನ್ನು ನಂಬಿರಿ, ಆಗ ಸಾರ್ಥಕರಾಗುವಿರಿ" 2 ಪೂರ್ವಕಾಲ 20:20
890"ಆಗ ಸಿಂಹಾಸನದ ಮೇಲೆ ಕೂತಿದ್ದವನು ಇಗೋ ಎಲ್ಲವನ್ನೂ ಹೊಸದು ಮಾಡುತ್ತೇನೆ, ಅಂದನು" (ಪ್ರಕ 21:5)
891"ಇಗೋ ಹೊಸ ಕಾರ್ಯಗಳನ್ನು ಮಾಡುವೆನು ಈಗ ಸಲೆದೋರುತ್ತಲಿದೆ, ನಿಮಗೆ ಕಾಣುವುದಿಲ್ಲವೋ ?(ಯೆಶಾ 43:19)
892"ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾದನು. ಇಗೋ ಪÀÇರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು" (2ಕೊರಿ 5:17)
893"ದೇವರೇ ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನ ಪಡಿಸು" (ಕೀರ್ತ 51:10)
894"ನೀವು ನಿಮ್ಮ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ: (ಎಫೆ 4:23)
895"ಜನಾಂಗಗಳು ನಿನ್ನ ಧರ್ಮವನ್ನು ಸಕಲ ರಾಜರು ನಿನ್ನ ವೈಭವವನ್ನು ನೋಡುವರು ಯೆಹೋವನ ಬಾಯಿ ನೇಮಿಸಿದ ಹೊಸ ಹೆಸರು ನಿನಗೆ ದೊರೆಯುವದು" (ಯೆಶಾ 62:2)
896ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು (ಏರುವರು); ಓಡಿ ದಣ ಯರು, ನಡೆದು ಬಳಲರು" (ಯೆಶಾ 40:31).
897"ನಾನು ಅವರಿಗೆ ಒಂದೇ ಮನಸ್ಸನ್ನು ದಯಪಾಲಿಸಿ ನೂತನ ಸ್ವಭಾವವನ್ನು ಅವರಲ್ಲಿ ಹುಟ್ಟಿಸುವೆನು" (ಯೆಹೆ 11:19)
898"ಈ ಸ್ವಭಾವವು ಅದನ್ನು ಸೃಷ್ಠಿಸಿದಾತನ ಹೋಲಿಕೆಯ ಮೇರೆಗೆ ದಿನೇ ದಿನೇ ನೂತನವಾಗುತ್ತಾ ಪÀÇರ್ಣಜ್ಞಾನವನ್ನು ಉಂಟು ಮಾಡುತ್ತದೆ" (ಕೊಲೊ 3:10)
899"ಇಹಲೋಕದ ನಡುವಳಿಕೆಯನ್ನು ಅನುಸರಿಸದೆ ನೂತನ ಮನಸ್ಸನ್ನು ಹೊಂದಿಕೊಂಡು ಪರಲೋಕದವರಾಗಿರಿ" (ರೋಮಾ 12:2)
900"ಯೆಹೋವನ ಮಾತುಗಳು ಯಥಾರ್ಥವಾದವುಗಳೇ; ಅವು ಏಳು ಸಾರಿ ಪÀÅಟಕ್ಕೆ ಹಾಕಿದ ಚೊಕ್ಕಬೆಳ್ಳಿಯೋಪಾದಿಯಲ್ಲಿವೆ" (ಕೀರ್ತ 12:6)