901"ಆಗ ಸಿಂಹಾಸನದ ಮೇಲೆ ಕೂತಿದ್ದವನು ಇಗೋ ಎಲ್ಲವನ್ನೂ ಹೊಸದು ಮಾಡುತ್ತೇನೆ, ಅಂದನು" (ಪ್ರಕ 21:5)
902"ಇಗೋ ಹೊಸ ಕಾರ್ಯಗಳನ್ನು ಮಾಡುವೆನು ಈಗ ಸಲೆದೋರುತ್ತಲಿದೆ, ನಿಮಗೆ ಕಾಣುವುದಿಲ್ಲವೋ ?(ಯೆಶಾ 43:19)
903"ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾದನು. ಇಗೋ ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು" (2ಕೊರಿ 5:17)
904"ದೇವರೇ ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನ ಪಡಿಸು" (ಕೀರ್ತ 51:10)
905"ನೀವು ನಿಮ್ಮ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ: (ಎಫೆ 4:23)
906"ಜನಾಂಗಗಳು ನಿನ್ನ ಧರ್ಮವನ್ನು ಸಕಲ ರಾಜರು ನಿನ್ನ ವೈಭವವನ್ನು ನೋಡುವರು ಯೆಹೋವನ ಬಾಯಿ ನೇಮಿಸಿದ ಹೊಸ ಹೆಸರು ನಿನಗೆ ದೊರೆಯುವದು" (ಯೆಶಾ 62:2)
907ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು (ಏರುವರು); ಓಡಿ ದಣ ಯರು, ನಡೆದು ಬಳಲರು" (ಯೆಶಾ 40:31).
908"ನಾನು ಅವರಿಗೆ ಒಂದೇ ಮನಸ್ಸನ್ನು ದಯಪಾಲಿಸಿ ನೂತನ ಸ್ವಭಾವವನ್ನು ಅವರಲ್ಲಿ ಹುಟ್ಟಿಸುವೆನು" (ಯೆಹೆ 11:19)
909"ಈ ಸ್ವಭಾವವು ಅದನ್ನು ಸೃಷ್ಠಿಸಿದಾತನ ಹೋಲಿಕೆಯ ಮೇರೆಗೆ ದಿನೇ ದಿನೇ ನೂತನವಾಗುತ್ತಾ ಪೂರ್ಣಜ್ಞಾನವನ್ನು ಉಂಟು ಮಾಡುತ್ತದೆ" (ಕೊಲೊ 3:10)
910"ಇಹಲೋಕದ ನಡುವಳಿಕೆಯನ್ನು ಅನುಸರಿಸದೆ ನೂತನ ಮನಸ್ಸನ್ನು ಹೊಂದಿಕೊಂಡು ಪರಲೋಕದವರಾಗಿರಿ" (ರೋಮಾ 12:2)
911"ಯೆಹೋವನ ಮಾತುಗಳು ಯಥಾರ್ಥವಾದವುಗಳೇ; ಅವು ಏಳು ಸಾರಿ ಪುಟ್ಟಕ್ಕೆ ಹಾಕಿದ ಚೊಕ್ಕಬೆಳ್ಳಿಯೋಪಾದಿಯಲ್ಲಿವೆ" (ಕೀರ್ತ 12:6)
912"ನೀನು ನನ್ನ ಹೃದಯವನ್ನು ಪರೀಕ್ಷಿಸಿದರೂ ರಾತ್ರಿ ವೇಳೆ ವಿಚಾರಿಸಿದರೂ ನನ್ನನ್ನು ಪುಟಕ್ಕೆ ಶೋಧಿಸಿದರೂ ಯಾವ ದುರಾಲೋಚನೆಯಾದರೂ ನನ್ನಲ್ಲಿ ದೊರೆಯುವುದಿಲ್ಲ" (ಕೀರ್ತ 17:3)
913"ಆತನಾದರೋ ನನ್ನ ದಾರಿಯನ್ನು ಬಲ್ಲನು, ಆತನೇ ನನ್ನನ್ನು ಶೋಧಿಸಿ ನೋಡಿದರೆ ಚೊಕ್ಕ ಬಂಗಾರವಾಗಿ ಕಾಣ ಸುವೆನು" (ಯೋಬ 23:10)
914"ದೇವರೇ ನಮ್ಮನ್ನು ಶೋಧಿಸಿದಿ; ಬೆಳ್ಳಿಯನ್ನು ಪುಟಕ್ಕೆ ಹಾಕುವ ಮೇರೆಗೆ ಶುದ್ಧಿ ಮಾಡಿದಿ" (ಕೀರ್ತ 66:10)
915"ಬೆಳ್ಳಿ ಬಂಗಾರಗಳನ್ನು ಪುಟಕುಲಿಮೆಗಳು ಶೋಧಿಸುವವು; ಹೃದಯಗಳನ್ನು ಶೋಧಿಸುವವನು ಯೆಹೋವನೇ" (ಜ್ಞಾನೋ 17:3)
916"ಪುಟಕುಲುಮೆಗಳಿಂದ ಬೆಳ್ಳಿಬಂಗಾರಗಳಿಗೆ ಶೋಧನೆಯು ಹೇಗೋ ಹೊಗಳಿಕೆಯಿಂದ ಮನುಷ್ಯನಿಗೆ ಶೋಧನೆಯು ಹಾಗೆ" (ಜ್ಞಾನೋ 27:2)
917"ನಿನ್ನ ಮೇಲೆ ಕೈ ಮಾಡಿ ಪುಟಾ ಹಾಕಿ ಪುಟಾಹಾಕಿ ನಿನ್ನ ಕಷ್ಮಷವನ್ನೆಲ್ಲಾ ತೆಗೆದು ಬಿಡುವೆನು" (ಯೆಶಾ 1:25)
918"ಜ್ಞಾನಿಗಳಲ್ಲಿಯೂ ಕೆಲಸವರು ಅಂತ್ಯ ಕಾಲದವರಿಗೆ ಬೀಳುತ್ತಿರುವರು; ಆದದರಿಂದ ಜನರು ಶೋಧಿಸಲ್ಪಟ್ಟು ಶುದ್ಧಿಹೊಂದಿ ಶುಭ್ರವಾಗುವರು, ಅಂತ್ಯವು ಕ್ಲುಪ್ತಕಾಲದಲ್ಲೇ ಆಗುವದು" (ದಾನಿ 11:35, 36)
919"ಅನೇಕರು ತಮ್ಮನ್ನು ಶುದ್ಧೀಕರಿಸಿ ಶುಭ್ರ ಮಾಡಿಕೊಂಡು ಶೋಧಿತರಾಗುವರು; ದುಷ್ಟರು ದುಷ್ಟರಾಗಿಯೇ ನಡೆಯುವರು; ಅವರಲ್ಲಿ ಯಾರಿಗೂ ವಿವೇಕವಿರದು, ಜ್ಞಾನಿಗಳೀಗೆ ವಿವೇಕವಿರುವದು" (ದಾನಿ 12:10)
920"ನೋಡು ನಿನ್ನನ್ನು ಶೋಧಿಸಿದ್ದೇನೆ, ಆದರೆ ಬೆಳ್ಳಿಯಷ್ಟು ಶೋಧಿಸಲಿಲ್ಲ. ಸಮಕಟವೆಂಬ ಪುಟಕ್ಕೆ ಹಾಕಿ ನಿನ್ನನ್ನು ಪರೀಕ್ಷಿಸಿದ್ದೇನೆ. ನನಗಾಗಿ ನನಗೋಸ್ಕರವೇ ಇದನ್ನು ಮಾಡುವೆನು, ನನ್ನ ಹೆಸರು ಕೆಡಬಾರದಷ್ಟೇ" (ಯೆಶಾ 48:10)