921"ಇಸ್ರಾಯೇಲ್ಯರಿಗೆ ಶುಭವಾಗಬೇಕೆಂಬದೇ ಯೆಹೋವನ ಚಿತ್ರ" (ಅರಣ್ಯ 24:1)
922"ನಿನ್ನ ವಿಜ್ಞಾಪನೆಯ ಆರಂಭದಲ್ಲಿಯೇ ದೇವರ ಅಪ್ಪಣೆಯಾಯಿತು. ಅದನ್ನು ನಿನಗೆ ತಿಳಿಸಲು ಇಲ್ಲಿಗೆ ಬಂದಿದ್ದೇನೆ. ನೀನು ದೇವರಿಗೆ ಅತಿಪ್ರಿಯ" (ದಾನಿ 9:23)
923"ಆ ಪುರುಷನು ನನಗೆ - ಅತಿಪ್ರಿಯನೇ ಭಯಪಡಬೇಡ; ನಿನಗೆ ಸಮಾಧಾನವಿರಲಿ ಬಲಗೊಳ್ಳು, ಬಲಗೊಳ್ಳು ಎಂದು ಹೇಳೀದನು" (ದಾನಿ 10:19)
924"ಕ್ರಿಸ್ತನಿಗೆ ಸೇವೆಯನ್ನು ಮಾಡುವವನು ದೇವರಿಗೆ ಮೆಚ್ಚಿಕೆಯಾದವನಾಗಿಯೂ ಮನುಷ್ಯರಿಗೆ ಸಂಭಾವಿತನಾಗಿಯೂ ಇರುವನಷ್ಟೇ" (ರೋಮಾ 14:18)
925"ಆದರೂ ಆತನು ನಿಮ್ಮ ಪಿತೃಗಳಲ್ಲಿ ಇಷ್ಟವುಳ್ಳವನಾಗಿ ಅವರನ್ನು ಪ್ರೀತಿಸಿದದರಿಂದ ಈಗ ನಿಮ್ಮ ಅನುಭವಕ್ಕೆ ಬಂದಂತೆ ಅವರ ತರುವಾಯ ಅವರ ಸಂತತಿಯವರಾಗಿ ನಿಮ್ಮನ್ನೇ ಆದುಕೊಂಡೆನು" (ಧಮೋ 10:15)
926"ಚಿಕ್ಕ ಹಿಂಡೇ ಹೆದರಬೇಡ, ಆ ರಾಜ್ಯವನ್ನು ನಿಮಗೆ ದಯಪಾಲಿಸುವುದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ" (ಲೂಕ 12:32)
927"ನೀನು ಎನ್ನುಲ್ಲಾಸಿನಿ ಎನಿಸಿಕೊಳ್ಳುವಿ. ನಿನ್ನ ಸೀಮೆಗೆ ವಿವಾಹಿತೆ ಎಂಬ ಹೆಸರಾಗುವುದು, ಏಕೆಂದರೆ ಯೆಹೋವನು ನಿನ್ನಲ್ಲಿ ಉಲ್ಲಾಸಗೊಳ್ಳುತ್ತಾನೆ" (ಯೆಶಾ 62:4)
928"ಅವನು ದೇವರನ್ನು ಪ್ರಾರ್ಥಿಸಿಸ ಆತನ ಒಲುಮೆಗೆ ಪಾತ್ರನಾಗಿ ಆತನ ದರ್ಶನಮಾಡಿ ಉತ್ಸಾಹಧ್ವನಿಗೈದು ತಿರಿಗಿ ಆತನಿಂದ ನೀತಿವಂತನೆನಿಸಿಕೊಳ್ಳುವರು" (ಯೋಬ 33:26)
929"ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು" (ಕೀರ್ತ 1:2)
930"ನೀನು ಉಸಿರಿದ ಧರ್ಮಶಾಸ್ತ್ರವು ಸಾವಿರಾರು ಚಿನ್ನಬೆಳ್ಳಿಯ ನಾಣ್ಯಗಳಿಗಿಂತಲೂ ನನಗೆ ಅತಿ ಪ್ರಿಯ" (ಕೀರ್ತ 119:72)
931"ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಉಳಿಸಿದೆನು" (ವಿಮೋ 9:16)
932"ನಾನು ನನ್ನ ಹೆಸರನ್ನು ನಿಮ್ಮ ನೆನಪಿಗೆ ಬರಮಾಡುವ ಎಲ್ಲಾ ಸ್ಥಳಗಳಲ್ಲಿಯೂ ನಿಮ್ಮ ನಳಿಗೆ ಬಂದು ನಿಮ್ಮನ್ನು ಆಶೀರ್ವದಿಸುವೆನು" (ವಿಮೋ 20:24)
933"ನಿನ್ನ ಹೆಸರು ಯಾವಾಗಲೂ ಜ್ಞಾಪಕದಲ್ಲಿರುವಂತೆ ನಾನು ಮಾಡುವೆನು" (ಕೀರ್ತ 45:17)
934"ಯೆಹೋವನಿಗೆ ಕೃತಜ್ಞತಾ ಸ್ತುತಿ ಮಾಡಿರಿ, ಆತನ ನಾಮದ ಮಹತ್ವವನ್ನು ವರ್ಣಿಸಿರಿ" (ಕೀರ್ತ 105:1)
935"ಯೆಹೋವನೇ ನೀನು ತಲತಲಾಂತರಕ್ಕೂ ಸ್ಮರಿಸಲ್ಪಡುತ್ತೀ" (ಕೀರ್ತ 135:13)
936"ನಿನ್ನ ಪರಿಶುದ್ಧಾಲಯದ ಕಡೆಗೆ ಅಡ್ಡ ಬೀಳುತ್ತೇನೆ. ನಿನ್ನ ಕೃಪೆ, ಸತ್ಯತೆ ಇವುಗಳಿಗೋಸ್ಕರ ನಿನ್ನ ನಾಮವನ್ನು ಕೊಂಡಾಡುತ್ತೇನೆ" (ಕೀರ್ತ 138:2)
937"ಆತನ ನಾಮದ ಮಹತ್ವವನ್ನು ವರ್ಣಿಸಿರಿ. ಜನಾಂಗಗಳಲ್ಲಿ ಆತನ ನಾಮವು ಉನ್ನತೋನ್ನತವೆಂದು ಜ್ಞಾಪಕಪಡಿಸಿರಿ, (ಯೆಶಾ 12:4)
938"ಆತನು ತನ್ನ ಹೆಸರಿನ ನಿಮಿತ್ತವಾಗಿಯೂ ತನ್ನ ಶೌರ್ಯವನ್ನು ಪ್ರಕಟಿಸುವದಕ್ಕಾಗಿಯೂ ಅವರನ್ನು ರಕ್ಷಿಸಿದನು" (ಕೀರ್ತ 106:8)
939"ಯೆಹೋವನೇ ನೀನಾದರೋ ಸದಾ ಸಿಂಹಾಸನಾರೂಢನಾಗಿರುವಿ, ನಿನ್ನ ನಾಮವು ತಲತಲಾಂತರಕ್ಕೂ ಸ್ಮರಿಸಲ್ಪಡುವುದು" (ಕೀರ್ತ 102:12)
940"ಯೆಹೋವನೇ, ನಿನ್ನ ನಾಮಮಹಿಮೆಯನ್ನು ಬಲ್ಲವರು ನಿನ್ನಲ್ಲಿ ಭರವಸವಿಡುವರು. ಯಾಕೆಂದರೆ ನಿನ್ನ ಮರೆಹೋಗುವವರನ್ನು ನೀನು ಕೈಬಿಡುವುದಿಲ್ಲ" (ಕೀರ್ತ 9:10)