941"ಯಾವ ಕೇಡೂ ನಿನಗೆ ಸಂಭವಿಸದು. ಉಪದ್ರವವು ನಿನ್ನ ಗುಡಾರದ ಸಮೀಪಕ್ಕೂ ಬಾರದು" (ಕೀರ್ತ 91:10)
942"ಕೆಟ್ಟದ್ದನ್ನು ಬಿಟ್ಟು ಒಳ್ಳೇದನ್ನು ಮಾಡಲಿ, ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನಪಡಲಿ" (1ಪೇತ್ರ 3:11)
943"ನಂಬಿಕೆಯೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ, ಆದುದರಿಂದ ನೀವು ಕೆಡುಕನ ಅಗ್ನಿ ಬಾಣಗಳನ್ನೆಲ್ಲಾ ಆರಿಸುವದಕ್ಕೆ ಶಕ್ತರಾಗುವಿರಿ" (ಎಫೆ 6:16)
944"ಅವನವನ ಕೆಟ್ಟ ನಡತೆಗಳಿಂದ ತಿರುಗಿಸಿ ನಿಮ್ಮನ್ನು ಆಶೀರ್ವದಿಸಬೇಕೆಂದು ಆತನು ಕಳುಹಿಸಿಕೊಟ್ಟಿದ್ದಾನೆ" (ಅಪೋ 3:26)
945"ಎಲ್ಲವನ್ನೂ ಪರಿಶೋಧಿಸಿ ಒಳ್ಳೇದನ್ನು ಭದ್ರವಾಗಿ ಹಿಡಿದುಕೊಳ್ಳಿರಿ, ಸಕಲ ವಿಧವಾದ ಕೆಟ್ಟತನಕ್ಕೆ ದೂರವಾಗಿರಿ" (1ಥೆಸ 5:21)
946"ಇಗೋ, ಯೆಹೋವನ ಭಯವೇ ಜ್ಞಾನವು; ದುಷ್ಟತನವನ್ನು ಬಿಡುವದೇ ವಿವೇಕವು" (ಯೋಬ 28:28)
947"ನಮ್ಮನ್ನು ಶೋಧನೆಯೊಳೆ ಸೇರಿಸದೆ ಕೇಡಿನಿಂದ ನಮ್ಮನ್ನು ತಪ್ಪಿಸು" (ಮತ್ತಾ 6:13)
948"ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ" (2ಕೊರಿ 13:7)
949"ಯೌವನಸ್ಥರೇ ನೀವು ಕೆಡುಕನ್ನು ಜಯಿಸಿರುವದರಿಂದ ನಿಮಗೆ ಬರೆಯುತ್ತೇನೆ" (1ಯೋಹಾ 2:13)
950"ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೇದನ್ನು ಪ್ರೀತಿಸಿರಿ ಚಾವಡಿಯಲ್ಲಿ ನ್ಯಾಯವನ್ನು ಸಥಾಪಿಸಿರಿ" (ಆಮೋ 5:15)
951"ನೀನು ಅವನನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಿದ್ದೀಯಲ್ಲಾ ಪ್ರಭಾವವನ್ನು ಮಾನವನ್ನೂ ಅವನಿಗೆ ಕಿರೀಟವಾಗಿ ಇಟ್ಟಿ" (ಕೀರ್ತ 8:5)
952"ನಿನ್ನ ರಕ್ಷಣಾಕಾರ್ಯದಿಂದ ಅವನ ಘನತೆಯು ಬಹು ವೃದ್ಧಿಯಾಯಿತು. ಮಹಿಮಾ ಪ್ರಭಾವವನ್ನು ಅವನಿಗೆ ಬರಮಾಡಿದ್ದೀ" (ಕೀರ್ತ 21:5)
953"ಶೂರನೇ ಮಹಿಮಾಪ್ರಭಾವಗಳನ್ನು ಧರಿಸಿಕೊಂಡು ಸೊಂಟಕ್ಕೆ ಪಟ್ಟದ ಕತ್ತಿಯನ್ನು ಕಟ್ಟಿಕೋ" (ಕೀರ್ತ 45:3)
954"ಪ್ರಭಾವವುಳ್ಳ ಈ ಅರಸನು ಯಾರು ? ಸೇನಾಧೀಶ್ವರನಾದ ಯೆಹೋವನೇ" (ಕೀರ್ತ 24:10)
955"ನಿನ್ನ ಮಂದಿರಲ್ಲಿ ನಾನು ನಿನ್ನ ಮಹತ್ತನ್ನು ಪ್ರಭಾವವನ್ನೂ ಕಂಡ ಪ್ರಕಾರ ಈಗಲೂ ಕಾಣಬೇಕೆಂದು ಅಪೇಕ್ಷಿಸುತ್ತೇನೆ" (ಕೀರ್ತ 63:2)
956"ನಿನ್ನ ಪರಾಕ್ರಮದ ಮಹತ್ತಿನ ದೆಸೆಯಿಂದ ನಿನ್ನ ಶತ್ರುಗಳು ನಿನ್ನ ಮುಂದೆ ಮುದುರಿಕೊಳ್ಳುವರು" (ಕೀರ್ತ 66:2)
957"ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನು; ಆತನ ಪ್ರಭಾವವು ಮೇಲಣ ಲೋಕಗಳಲ್ಲಿ ಮೆರೆಯುತ್ತದೆ" (ಕೀರ್ತ 113:4)
958"ಆತನು ಮಹಿಮೆಯಲ್ಲಿ ಬಂದು ಚಿಯೋನನ್ನು ತಿರಿಗಿ ಕಟ್ಟಿಸಿದನೆಂದೂ ಜನಾಂಗಗಳು ಯೆಹೋವ ಎಂಬ ನಾಮಕ್ಕೂ ಭೂರಾಜರು ನಿನ್ನ ಪ್ರತಾಪಕ್ಕೂ ಭಯಪಡುವರು (ಕೀರ್ತ 102:16,17)
959"ನಿನ್ನ ಚಿತ್ತವನ್ನು ತಿಳಿಯಪಡಿಸಿ ನನ್ನನ್ನು ನಡಿಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ" (ಕೀರ್ತ 73:24)
960"ಕರ್ತನೇ ನಮ್ಮ ದೇವರೇ ನೀನು ಪ್ರಭಾವ ಮಾನಬಲಗಳನ್ನು ಹೊಂದುವುದಕ್ಕೆ ಯೋಗ್ಯನಾಗಿದ್ದೀ" (ಪ್ರಕ 4:11)