961"ನಿನ್ನ ಕಷ್ಟಾರ್ಜಿತವನ್ನು ನೀನೇ ಅನುಭವಿಸುವಿ. ನೀನು ಧನ್ಯನು ನಿನಗೆ ಶುಭವಿರುವದು" (ಕೀರ್ತ 128:2)
962"ಶಿಷ್ಯನ ದುಡಿತ ಜೀವಾಸ್ಪದ; ದುಷ್ಟನ ಆದಾಯ ಪಾಪಸ್ಪದ" (ಜ್ಞಾನೋ 10:16)
963"ಅನ್ಯ ಜನಾಂಗಗಳ ಕಷ್ಟಾರ್ಜಿತವು ಅವರ ಕೈ ಸೇರಿತು" (ಕೀರ್ತ 105:44)
964"ಒಬ್ಬನಿಗಿಂತ ಇಬ್ಬರು ಲೇಸು; ಅವರ ಪ್ರಯಾಣಕ್ಕೆ ಒಳ್ಳೆಯ ಲಾಭ" (ಪ್ರಸಂಗಿ 4:9)
965"ಆತನು ಯಾವನಿಗೆ ಆಸ್ತಿಪಾಸ್ತಿಗಳನ್ನು ದಯಪಾಲಿಸುವದಲ್ಲದೆ ಅದನ್ನು ಅನುಭವಿಸಿ ಪಾಲಿಗೆ ಬಂದದ್ದನ್ನು ಹೊಂದಿ ತನ್ನ ಪ್ರಯಾಣದಲ್ಲಿ ಸಂತೋಷಪಡಲು ಶಕ್ತಿಕೊಡುವನೋ ಅವನ ಸುಖವು ದೇವರ ಅನುಗ್ರಹ" (ಪ್ರಸ 5:19)
966"ತಮ್ಮ ಕೆಲಸವನ್ನು ನೋಡುತ್ತಾ ತಾವೇ ಸಂಪಾದಿಸಿದ್ದನ್ನು ಊಟಮಾಡಬೇಕೆಂದು ಕರ್ತನಾದ ಯೇಸುಕ್ರಿಸ್ತನಲ್ಲಿ ನಾವು ಆಜ್ಞಾಪಿಸಿ ಬೋಧಿಸುತ್ತೇವೆ" (2ಥೆಸ 3:12)
967"ನಿಮ್ಮಲ್ಲಿ ಒಬ್ಬರಿಗೂ ಭಾರವಾಗಿರಬಾರದೆಂದು ಹಗಲಿರುಳು ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದು ಜೀವನ ಮಾಡಿಕೊಂಡೆವು" (2ಥೆಸ 3:8)
968"ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನು ಅನುಭವಿಸುವದು ದೇವರ ಅನುಗ್ರಹವೇ" (ಪ್ರಸ 3:13)
969"ಭೂಮಿಯಿಂದ ಸರ್ವಕ್ಕೂ ಲಾಭವಿದೆ. ಹೊಲಗದ್ದೆಗಳಿಂದ ರಾಜನಿಗೆ ಸೇವೆಯಾಗುತ್ತದೆ. (ಪ್ರಸ 5:9)
970. "ಅಳುತ್ತಾ ಬಿತ್ತುವವರು ಹಾಡುತ್ತಾ ಕೊಯ್ಯುವರು. ದುಂಃಖಿಸುತ್ತಾ ಬೀಜವನ್ನು ತೆಗೆದುಕೊಂಡು ಹೋಗುವವರು ಹಷಿಸುತ್ತಾ ಸಿವಡುಗಳನ್ನು ಹೊತ್ತುಕೊಂಡು ಬರುವರು" (ಕೀರ್ತ 126:6)
971"ಯಹೋವನ ಭಯವೇ ಜ್ಞಾನವು; ದುಷ್ಟತನವನ್ನು ಬಿಡುವುದೇ ವಿವೇಕವು" (ಯೋಬ 28:28)
972"ಯಾರು ಕಾರ್ಮುಗಿಲಿಗೆ ಜ್ಞಾನವನ್ನು ದಯಪಾಲಿಸಿದರು ? ಉತ್ಪಾತಗಳಿಗೆ ವಿವೆಕವನ್ನು ಅನುಗ್ರಹಿಸಿದವರು ಯಾರು ?" (ಯೋಬ 8:36)
973"ಯೆಹೋವನ ಭಯವೇ ಜ್ಞಾನಕ್ಕೆ ಮೂಲವು; ಆತನ ಕಟ್ಟಳೆಗಳನ್ನು ನಡಿಸುವವರು ಪೂರ್ಣ ವಿವೇಕಿಗಳು" (ಕೀರ್ತ 111:10)
974"ಬುದ್ಧಿಗಾಗಿ ಮೊರೆಯಿಟ್ಟು ವಿವೇಕಕ್ಕಾಗಿ ಕೂಗಿಕೊಂಡು ಅದನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು" (ಜ್ಞಾನೋ 2:3,5)
975"ಯೆಹೋವನೇ, ಜ್ಞಾನವನ್ನು ಕೊಡುವಾತನು ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟುಬರುತ್ತದೆ. (ಜ್ಞಾನೋ 2:6)
976"ಮಕ್ಕಳಿರಾ, ತಂದೆಯ ಶಿಕ್ಷಣವನ್ನು ಕೇಳಿರಿ, ವಿವೇಕವನ್ನು ಗ್ರಹಿಸಲಿಕ್ಕೆ ಕಿವಿಗೊಡಿರಿ" (ಜ್ಞಾನೋ 4:1)
977"ಕಂದಾ ನನ್ನ ಮಾತುಗಳನ್ನು ಅನುಸರಿಸು ನನ್ನ ಅಜ್ಞೆಗಳನ್ನು ಮನಸ್ಸಿನಲ್ಲಿಟ್ಟುಕೋ ನನ್ನ ಉಪದಶವನ್ನು ಕಣ್ಣು ಗುಡ್ಡಿನಂತೆ ಪಾಲಿಸು. ನನ್ನ ಆಜ್ಞೆಗಳನ್ನು ಕೈಕೊಂಡು ಬಾಳು" (ಜ್ಞಾನೋ 7:1,2)
978"ನಿನ್ನ ಕಟ್ಟಳೆಗಳು ನನ್ನ ಧ್ಯಾನವಾಗಿರುವುದರಿಂದ ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ. ನಿನ್ನ ನೇಮಗಳನ್ನು ಕೈಕೊಂಡಿರುವುದರಿಂದ ಹಿರಿಯರಿಗಿಂತ ವಿವೇಕಿಯಾಗಿದ್ದೇನೆ" (ಕೀರ್ತ 119:99,100)
979"ನನಗೆ ಜ್ಞಾನವನ್ನು ದಯಪಾಲಿಸು, ಆಗ ನಿನ್ನ ಧರ್ಮಶಾಸ್ತ್ರವನ್ನು ಪೂರ್ಣ ಮನಸ್ಸಿನಿಂದ ಕೈಕೊಂಡು ನಡೆಯುವೆನು" (ಕೀರ್ತ 119:34)
980"ನೋಡು ನಿನಗೆ ಜ್ಞಾನವನ್ನೂ ವಿವೇಕವನ್ನು ಅನುಗ್ರಹಿಸಿದ್ದೇನೆ. ನಿನ್ನಂಥ ಜ್ಞಾನಿಯು ಮುಂಚೆ ಇರಲಿಲ್ಲ ಮುಂದೆಯೂ ಇರುವುದಿಲ್ಲ" (1ಅರಸು 3:12)