102 "ಯೆಹೋವನ ಆಲೋಚನೆಯೋ ಶಾಸ್ವತವಾಗಿಯೇ ನಿಲ್ಲುವದು" ಕೀರ್ತನೆಗಳು 33:11
103 "ಉಚಿತಾಲೋಚನೆ ಇಲ್ಲದ ಕಡೆ ಪ್ರಜೆಯು ಬಿದ್ದು ಹೋಗುವುದು, ಬಹು ಸುಮಂತ್ರಿಗಳು ಇರುವಲ್ಲಿ ಸುರಕ್ಷಣೆ ಇರುವುದು" ಜ್ಞಾನೋಕ್ತಿಗಳು 11:14
104 "ಉದ್ದೇಶಗಳು ಮಂತ್ರಾಲೋಚನೆಯಿಂದ ನೆರವೇರುವವು, ಮಂತ್ರಾಲೋಚನೆಯಿಂದಲೇ ಯುದ್ಧವನ್ನು ನಡಿಸು" ಜ್ಞಾನೊಕ್ತಿಗಳು 20:18
105 "ತೈಲವೂ ಸುಗಂಧ ದ್ರವ್ಯಗಳೂ ಹೇಗೊ ಮಿತ್ರನ ಸಂಭಾಶಣೆಯಿಂದ ಅನುಭವಕ್ಕೆ ಬರುವ ಸ್ನೇಹರಸವು ಹಾಗೆ ಮನೋಹರ" ಜ್ಞಾನೋಕ್ತಿಗಳು 27:09
106 "ಈ ವಿವೇಕವು ಸಹ ಅತಿಶಯಾಲೋಚನಾಪರನೂ ಸುಜ್ಞಾನ ಶ್ರೇಷ್ಠನೂ ಆಗಿರುವ ಸೇನಾಧೀಶ್ವರನಾದ ಕರ್ತನಿಂದಲೇ ಉಂಟಾಗುತ್ತದೆ" ಯೆಶಾಯ 28:29
107 "ಮನವೇ, ಸುಜ್ಞಾನವನ್ನೂ, ಬುದ್ಧಿಯನ್ನು ಭದ್ರವಾಗಿಟ್ಟುಕೋ, ನಿನ್ನ ದೃಷ್ಥಿಯು ಅವುಗಳ ಮೇಲೆ ತಪ್ಪದೇ ಇರಲಿ" ಜ್ಞಾನೊಕ್ತಿಗಳು 3:21
108 "ನಿನ್ನ ಚಿತ್ತವನ್ನು ತಿಳಿಯಪಡಿಸಿ ನನ್ನನ್ನು ನಡಿಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ" ಕೀರ್ತನೆಗಳು 73:24
109 "ಭಯಪಡಬೇಡ, ನಿನಗೆ ಸಹಾಯ ಮಾಡುತ್ತೇನೆ, ಎಂದು ನಿನಗೆ ಹೇಳುವ ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈ ಹಿಡಿಯುತ್ತೇನಲ್ಲಾ" ಯೆಶಾಯ 41:13
110 "ಆಹಾ, ಕರ್ತನಾದ ಯೆಹೋವನು ನನಗೆ ಸಹಾಯ ಮಾಡುವನು; ನನ್ನನ್ನು ಅಪರಾಧಿ ಎಂದು ನಿರ್ಣಯಿಸುವವನು ಯಾರು? ಇಗೋ, ಅವರೆಲ್ಲರೂ ವಸ್ತ್ರದಂತೆ ಜೀರ್ಣವಾಗುವರು; ಅವರನ್ನು ನುಸಿಯು ತಿಂದುಬಿಡುವದು" ಯೆಶಾಯ 50:09
111 "ಯಾವನಿಗೆ ಯಾಕೋಬನ ದೇವರು ಸಹಾಯಕನೋ, ಯಾವನು ತನ್ನ ದೇವರಾದ ಕರ್ತನನ್ನು ನಂಬಿರುತ್ತಾನೋ ಅವನೇ ಧನ್ಯನು" ಕೀರ್ತನೆಗಳು 146:05
112 "ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ, ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆಯೂ ಅನ್ಯಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು" 2ತಿಮೋಥೆ 4:17
113 "ಯೆಹೋವನ ಭಕ್ತರೇ, ಯೆಹೋವನಲ್ಲಿ ಭರವಸವಿಡಿರಿ; ಅವರ ಸಹಾಯಕನೂ ಗುರಾಣ ಯೂ ಆತನೇ" ಕೀರ್ತನೆಗಳು 115:11
114 "ನಾನಾದರೋ ಕುಗ್ಗಿದವನೂ ದಿಕ್ಕಿಲ್ಲದವನೂ ಆಗಿದ್ದೇನೆ; ದೇವರೇ, ಶೀಘ್ರವಾಗಿ ಬಾ, ಯೆಹೋವನೇ ನೀನೇ ನನಗೆ ಸಹಾಯಕನೂ ರಕ್ಷಕನೂ ಆಗಿದ್ದೀ, ತಡಮಾಡಬೇಡ" ಕೀರ್ತನೆಗಳು 70:05
115 "ನೀನು ನನಗೆ ಸಹಾಯಕನಾಗಿದ್ದೀಯಲ್ಲಾ; ನಿನ್ನ ರೆಕ್ಕೆಗಳ ಮರೆಯಲ್ಲಿ ಸುರಕ್ಷಿತವಾಗಿದ್ದುಕೊಂಡು ಆನಂದಘೋಷ ಮಾಡುತ್ತಿರುವೆನು " ಕೀರ್ತನೆಗಳು 63:07
116 "ನನ್ನ ಮನಸ್ಸು ಯೆಹೋವನಿಗೊಸ್ಕರ ಕಾದಿದೆ; ನಮ್ಮ ಸಹಾಯವೂ ಗುರಾಣ ಯೂ ಆತನೇ" ಕೀರ್ತನೆಗಳು 33:20
117 "ನಾವು ನಿನ್ನವರು; ಶುಭವಾಗಲಿ! ಇಶಯನ ಮಗನೇ, ನಾವು ನಿನ್ನ ಪಕ್ಷದವರು; ನಿನಗೂ ನಿನ್ನ ಸಹಾಯಕರಿಗೂ ಶುಭವಾಗಲಿ! ನಿನ್ನ ದೇವರು ನಿನಗೆ ಜಯಪ್ರದನಾಗಿದ್ದಾನೆ" 1ಪೂರ್ವಕಾಲವೃತ್ತಾಂತ 12:18
118 "ಯೆಹೋವನೇ ಬಲಿಷ್ಟನು ಬಲಹೀನನ ಮೇಲೆ ಬೀಳುವಲ್ಲಿ ನಿನ್ನ ಹೊರತು ರಕ್ಷಕನಿಲ್ಲ ನಮ್ಮ ದೇವರಾದ ಕರ್ತನೇ ನಮನ್ನು ರಕ್ಷಿಸು ನಿನ್ನಲ್ಲಿ ಭರವಸವಿಟ್ಟು ನಿನ್ನ ಹೆಸರಿನಲ್ಲಿ ಮಹಾಸಮೂಹಕ್ಕೆ ವಿರೊಧವಾಗಿ ಯುದ್ಧಕ್ಕೆ ಬಂದೆವಲ್ಲಾ ಕರ್ತನೇ ನಮ್ಮ ದೇವರು ನೀನು ನರರು ನಿನ್ನನ್ನು ಎದುರಿಸಿ ಗೆಲ್ಲಬಾರದು" 2 ಪೂರ್ವಕಾಲವೃತ್ತಾಂತ 14:11
119 "ಯೆಹೊವನೇ ದೇವರುಗಳಲ್ಲಿ ನಿನ್ನ ಸಮಾನರು ಯಾವನು? ಪರಿಶುದ್ಧತ್ವದಿಂದ ಸರ್ವೋತ್ತಮನೂ ಪ್ರಖ್ಯಾತ ಕೃತ್ಯಗಳನ್ನು ಮಾಡಿರುವುದರಿಂದ ಭಯಂಕರನೂ ಅದ್ಭುತಗಳನ್ನು ನಡಿಸುವವನೂ ಆಗಿರುವ ನಿನಗೆ ಸಮಾನನು ಎಲ್ಲಿ? ವಿಮೋಚನಕಾಂಡ 15:11
120 "ನಿಮ್ಮನ್ನು ಶುದ್ಧ ಮಾಡಿಕೊಳ್ಳಿರಿ; ಯೆಹೋವನು ನಾಳೆ ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ನಡಿಸುವನು" ಯೆಹೋಶುವ 3:05