121 "ಆತನು ಮಾಡಿದ ಈ ಸೂಚಕ ಕಾರ್ಯವನ್ನು ಆ ಜನರು ನೊಡಿ ಲೋಕಕ್ಕೆ ಬರಬೇಕಾದ ಪ್ರವಾದಿ ಈತನೇ ನಿಜ ಎಂದು ಹೇಳಿಕೊಂಡರು" ಯೋಹಾನ 6:14
122, "ದೇವರು ತನ್ನ ಸಭೆಯಲ್ಲಿ ಮೊದಲನೇದಾಗಿ ಅಪೋಸ್ತಲರನ್ನೂ ಎರೆಡನೇದಾಗಿ ಪ್ರವಾದಿಗಳನ್ನು ಮೂರನೇದಾಗಿ ಉಪದೇಶಕರನ್ನೂ ಇಟ್ಟಿದ್ದಾನೆ, ಆಮೇಲೆ ಮಹತ್ಕಾರ್ಯ ಮಾಡುವ ಶಕ್ತಿಯನ್ನೂ ಕೊಟ್ಟಿದ್ದಾನೆ" 1 ಕೊರಿಂಥದವರಿಗೆ 12:28
123 "ದೇವರಾತ್ಮನ ಮೂಲಕ ನಂಬಿಕೆಯೂ, ಒಬ್ಬನಿಗೆ ಆ ಆತ್ಮನಿಂದಲೇ ನಾನಾ ರೋಗಗಳನ್ನು ವಾಸಿ ಮಾಡುವವರವು, ಒಬ್ಬನಿಗೆ ಮಹತ್ತುಗಳನ್ನು ಮಾಡುವ ವರವು ಕೊಡಲ್ಪಡುತ್ತದೆ" 1ಕೊರಿಂಥದವರಿಗೆ 12:9,
124 "ಬಹು ಜನರ ಗುಂಪು, ರೋಗಿಗಳಲ್ಲಿ ಆತನು ನಡಿಸಿದ ಸೂಚಕಕಾರ್ಯಗಳನ್ನು ನೋಡಿದ್ದರಿಂದ ಆತನ ಹಿಂದೆ ಹೋಗುತ್ತಿತ್ತು" ಯೋಹಾನ 6:02
125 "ಯೇಸು ಇನ್ನೂ ಬೇರೆ ಎಷ್ಟೋ ಸೂಚಕ ಕಾರ್ಯಗಳನ್ನು ತನ್ನ ಶಿಷ್ಯರ ಮುಂದೆ ಮಾಡಿದನು, ಅವುಗಳು ಈ ಗ್ರಂಥದಲ್ಲಿ ಬರೆದಿರುವುದಿಲ್ಲ" ಯೋಹಾನ 20:30
126 "ನಾನು ಈ ಜನರ ಮಧ್ಯದಲ್ಲಿಅಧಿಕಾಶ್ಚರ್ಯವೂ ಅದ್ಭುತವೂ ಆದ ಕಾರ್ಯವನ್ನು ಇನ್ನೂ ಮಾಡುವೆನು" ಯೆಶಾಯ 29:14
127 "ಆಹಾ! ನಾನೂ ನನಗೆ ಯೆಹೋವನು ದಯಪಾಲಿಸಿದ ಮಕ್ಕಳೂ ಚಿಯೋನ್ ಪರ್ವತದಲ್ಲಿ ವಾಸವಾಗಿರುವ ಸೇನಾಧೀಶ್ವರನಾದ ಯೆಹೋವನಿಂದಾದ ಗುರುತುಗಳಾಗಿಯೂ ಅದ್ಭುತಗಳಾಗಿಯೂ ಇಸ್ರಾಯೇಲ್ಯರ ಮಧ್ಯದಲ್ಲಿದ್ದೇವೆ " ಯೆಶಾಯ 8:18
128 "ಅವರ ಮಾರ್ಗಗಳನ್ನು ನೋಡಿದ್ದೇನೆ ಅವರನ್ನು ಸ್ವಸ್ಥಮಾಡಿ ನಡಿಸುತ್ತಾ ಅವರಿಗೆ, ಅವರಲ್ಲಿಯೂ ದುಃಖಿತರಿಗೆ ಆದರಣೆಯನ್ನು ಪ್ರತಿಫಲವಾಗಿ ಕೊಡುವೆನು" ರೋಮಾಪುರದವರಿಗೆ 15:15
129 "ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯಲ್ಲಿರುವವರಾಗಿರುವಂತೆ ಬರೆಯಲ್ಪಟ್ಟಿತು" ರೋಮಾಪುರದವರಿಗೆ 15:04
130 "ಉನ್ನತ ಲೋಕವೆಂಬ ಪವಿತ್ರಾಲಯದಲ್ಲಿ ವಾಸಿಸುವ ನಾನು ಜಜ್ಜಿ ಹೋದ ದೀನಮನದೊಂದಿಗೆ ಇದ್ದುಕೊಂಡು ದೀನನ ಆತ್ಮವನ್ನೂ ಜಜ್ಜಿಹೋದವನ ಮನಸ್ಸನ್ನೂ ಉಜ್ಜೀವಿಸುವವನಾಗಿದ್ದೇನೆ " ಯೆಶಾಯ 57:15
131 "ಸಹೋದರನೇ, ನಿನ್ನ ಮೂಲಕ ದೇವಜನರ ಹೃದಯಗಳಿಗೆ ಪ್ರೋತ್ಸಾಹ ಉಂಟಾದುದರಿಂದ ನಿನ್ನ ಪ್ರೀತಿಯ ನಿಮಿತ್ತ ನನಗೆ ಬಹಳ ಸಂತೋಷವೂಆದರಣೆಯೂ ಉಂಟಾದವು" ಫಿಲೆಮೋನನಿಗೆ 7
132 "ಅಂಜಬೇಡಿರಿ, ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದಿಗೂ ನೋಡುವುದಿಲ್ಲ" ವಿಮೋಚನಾಕಾಂಡ 14:13
133 "ನನ್ನ ಬಲವೂ ಕೀರ್ತನೆಯೂ ಯಾಹುವೇ, ಆತನಿಂದ ನನಗೆ ರಕ್ಷಣೆಯುಂಟಾಯಿತು" ವಿಮೋಚನಾಕಾಂಡ 15;
134 "ಶತ್ರುಗಳ ಮುಂದೆ ನನ್ನ ಬಾಯಿ ತೆರೆದಿರುವುದು, ನಿನ್ನ ರಕ್ಷಣೆಯಲ್ಲಿ ಆನಂದಿಸುತ್ತೇನೆ" 1 ಸಮುವೇಲ 2:1
135 "ಯೆಹೋವನು ಚೈತನ್ಯಸ್ವರೂಪನು; ನನ್ನ ಶರಣನಿಗೆ ಸ್ತೋತ್ರ ನನ್ನ ಆಶ್ರಯಗಿರಿಯಾಗಿರುವ ದೇವರಿಗೆ ಕೊಂಡಾಟ" 2 ಸಮುವೇಲ 22:47
136 "ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವುದಿಲ್ಲ ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಶ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ" ಅಪೋಸ್ತಲರಕೃತ್ಯಗಳು 4:12
137 "ಚಿಯೋನಿನಿಂದ ಇಸ್ರಾಯೇಲ್ಯರಿಗೆ ರಕ್ಷಣೆಯು ಬೇಗನೆ ಬರಲಿ" ಕೀರ್ತನೆಗಳು 14:07
138 "ಈಗೋ ನಿನ್ನ ರಕ್ಷಣೆಯು ಸಮೀಪವಾಯಿತು ಯೆಹೋವನು ದಯಪಾಲಿಸುವ ಬಹುಮಾನವು ಆತನೊಂದಿಗಿದೆ" ಯೆಶಾಯ 62:11
139 "ಚಿಯೋನಿನಲ್ಲಿ ರಕ್ಷಣಾಕಾರ್ಯವನ್ನು ನಡಿಸಿ, ಇಸ್ರಾಯೇಲ್ಯರಿಗೆ ನನ್ನ ಮಹಿಮೆಯನ್ನು ದಯಪಾಲಿಸುವೆನು" ಯೆಶಾಯ 46:13
140 "ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ತಿರುಗಿಕೊಳ್ಳಿರಿ, ರಕ್ಷಣೆಯನ್ನು ಹೊಂದಿಕೊಳ್ಳಿರಿ; ನಾನೇ ದೇವರು ಇನ್ನು ಯಾರೂ ಇಲ್ಲ" ಯೆಶಾಯ 45:22