161 "ಕ್ರಿಸ್ತನು ತಾನು ಕೊಡುತ್ತೇನೆಂದು ನಮಗೆ ವಾಗ್ದಾನ ಮಾಡಿದ್ದು ನಿತ್ಯಜೀವವು" 1ಯೋಹಾನ 2:25
162 "ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ; ಅವು ಎಂದಿಗೂ ನಾಶವಾಗುವುದೇ ಇಲ್ಲ" ಯೋಹಾನ 10:28
163 "ಯಾರು ಪ್ರಭಾವ ಮಾನ ನಿರ್ಲಯತ್ವಗಳನ್ನು ಹೊಂದಬೇಕೆಂದು ಒಳ್ಳೇದನ್ನು ಬೇಸರಗೊಳ್ಳದೆ ಮಾಡುತ್ತಾರೋ ಅವರಿಗೆ ನಿತ್ಯಜೀವವನ್ನು ಕೊಡುವನು ರೋಮಾಪುರದವರಿಗೆ 2:07
164 "ಪಾಪವು ಮರಣವನ್ನುಂಟುಮಾಡುತ್ತಾ ಅಧಿಕಾರವನ್ನು ನಡಿಸಿದ ಹಾಗೆಯೇ, ದೇವರ ಕೃಪೆಯು ನಮ್ಮ ಕರ್ತನಾದ ಯೇಸುಕ್ರಿಸ್ತನ ಮೂಲಕ ನೀತಿಯನ್ನು ಕೊಟ್ಟು, ನಿತ್ಯಜೀವವನ್ನುಂಟುಮಾಡುತ್ತಾ ಅಧಿಕಾರವನ್ನು ನಡಿಸುವದು" ರೋಮಾಪುರದವರಿಗೆ 5:21
165 "ಒಬ್ಬನೇ ಸತ್ಯ ದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟಿರುವ ಯೇಸುಕ್ರಿಸ್ತನನ್ನು ತಿಳಿಯುವುದೇ ನಿತ್ಯಜೀವವು" ಯೋಹಾನ 17:03
166 "ದೇವರು ನಮಗೆ ನಿತ್ಯಜೀವವನ್ನು ಅನುಗ್ರಹಿಸಿದನು ಆ ಜೀವವು ಆತನ ಮಗನಲ್ಲಿ ಅದೆ ಎಂಬುದೇ" 1ಯೋಹಾನ 5:11
167 "ಕ್ರಿಸ್ತ ನಂಬಿಕೆಯುಳ್ಳವರು ಮಾಡತಕ್ಕ ಶ್ರೇಷ್ಠ ಹೋರಾಟವನ್ನು ಮಾಡು ನಿತ್ಯಜೀವವನ್ನು ಹಿಡಿದುಕೊ, ಅದಕ್ಕಾಗಿ ದೇವರು ನಿನ್ನನ್ನು ಕರೆದನು" 1ತಿಮೋಥೆ 6:12
168 "ನಿತ್ಯಜೀವಕ್ಕಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಕರುಣೆಯನ್ನು ಎದುರು ನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ" ಯೂದ :21
169 "ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯಜೀವವನ್ನು ಹೊಂದಿದ್ದಾನೆ" ಯೋಹಾನ 5:24
170 "ಆತನು ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಿಮ್ಮನ್ನು ಸಹ ಬದುಕಿಸಿದನು" ಎಫೆಸ 2:01
171 "ತಂದೆಯು ಹೇಗೆ ಸತ್ತವರನ್ನು ಎಬ್ಬಿಸಿ ಬದುಕಿಸುತ್ತಾನೋ ಹಾಗೆಯೇ ಮಗನೂ ಸಹ ತನಗೆ ಬೇಕಾದವರನ್ನು ಬದುಕಿಸುತ್ತಾನೆ" ಯೋಹಾನ 5:21
172 "ಬದುಕಿಸುವಂತದ್ದು ಆತ್ಮವೇ; ಮಾಂಸವು ಯಾವುದಕ್ಕೂ ಬರುವುದಿಲ್ಲ" ಯೋಹಾನ 6:63
173 "ದೇವರು ಸತ್ತವರನ್ನು ಬದುಕಿಸುವವನಾಗಿಯೂ ಇಲ್ಲದ್ದನ್ನು ಇರುವುದಾಗಿ ಕರೆಯುವವನಾಗಿಯೂ ಇದ್ದಾನೆ" ರೋಮಾಪುರದವರಿಗೆ 4:17
174 "ಮೊದಲನೇ ಮನುಷ್ಯನಾದ ಅದಾಮನು ಬದುಕುವ ಪ್ರಾಣ ಯಾದನೆಂದೂ ಬರೆದದೆಯಲ್ಲಾ ಕಡೇ ಅದಾಮನೋ ಬದುಕಿಸುವ ಆತ್ಮನು" 1 ಕೊರಿಂಥದವರಿಗೆ 5:45
175 "ಲಿಖಿತ ರೂಪವಾದ ಒಡಂಬಡಿಕೆಯು ಮರಣವನ್ನುಂಟು ಮಾಡುತ್ತದೆ ದೇವರಾತ್ಮ ಸಂಬಂಧವಾದದ್ದು ಜೀವವನ್ನುಂಟು ಮಾಡುತ್ತದೆ" 2 ಕೊರಿಂಥದವರಿಗೆ 3:6
176 "ದೇವರು ಸತ್ತವರನ್ನು ಬದುಕಿಸುವವನಾಗಿಯೂ ಇಲ್ಲದ್ದನ್ನು ಇರುವುದಾಗಿ ಕರೆಯುವವನಾಗಿಯೂ ಇದ್ದಾನಲ್ಲಾ" ರೋಮಾಪುರದವರಿಗೆ 4:17
177 "ಕ್ರಿಸ್ತ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದಾತನ ಆತ್ಮನು ನಿಮ್ಮಲ್ಲಿ ವಾಸವಾಗಿರುವ ತನ್ನ ಆತ್ಮನ ಮೂಲಕ ನಿಮ್ಮ ಮತ್ರ್ಯದೇಹಗಳನ್ನು ಸಹ ಬದುಕಿಸಿದನು" ರೋಮಾಪುರದವರಿಗೆ 8:11
178 "ನಿನ್ನ ನುಡಿಯ ಪ್ರಕಾರ ನನ್ನನ್ನು ಉದ್ಧಾರಮಾಡು ಆಗ ಬದುಕುವೆನು" ಕೀರ್ತನೆಗಳು 119:116
179 "ನನ್ನನ್ನು ನಂಬುವವನು ಸತ್ತರೂ ಬದುಕುವನು; ಮತ್ತು ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವುದಿಲ್ಲ" ಯೋಹಾನ 11:26
180 "ಆಹಾ ಎನ್ನಿನಿಯನೇ, ನೀನು ಎಷ್ಟು ಸುಂದರ, ಎಷ್ಟು ರಮ್ಯ" ಪರಮಗೀತಗಳು 4:10