ಪ್ರಾರ್ಥನೆಯ ವಾಗ್ದಾನದ ವಚನಗಳು

  Posted on   by   8 comments

all-freedom-summer-day-wallpapers-1366x768
 

ಪ್ರಾರ್ಥನೆಯ ವಾಗ್ದಾನದ ವಚನಗಳು

    ಬೇಡಿಕೊಳ್ಳಿರಿ, ಅದು ನಿಮಗೆ ಕೊಡಲ್ಪಡುವದು; ಹುಡುಕಿರಿ, ನಿಮಗೆ ಸಿಕ್ಕುವದು; ತಟ್ಟಿರಿ, ಅದು ನಿಮಗೆ ತೆರೆಯಲ್ಪಡುವದು. ಮತ್ತಾಯನು 7:7

 ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನಿಮಗೆ ಬೇಕಾದದ್ದನ್ನು ಬೇಡಿಕೊಳ್ಳಿರಿ, ನಿಮಗೆ ಅದು ದೊರೆ ಯುವದು.  ಯೋಹಾನನು 15:7

 ನನ್ನನ್ನು ಕರೆ, ಆಗ ನಿನಗೆ ಉತ್ತರ ಕೊಡುವೆನು; ನಿನಗೆ ತಿಳಿಯದ ದೊಡ್ಡ ಮಹತ್ತಾದವುಗಳನ್ನು ನಿನಗೆ ತಿಳಿಸುವೆನು. ಯೆರೆಮಿಯ 33:3

 ನನ್ನನ್ನು ಹುಡುಕುವಿರಿ; ಪೂರ್ಣ ಹೃದಯದಿಂದ ನನ್ನನ್ನು ಹುಡುಕುವಾಗ ನನ್ನನ್ನು ಕಂಡುಕೊಳ್ಳುವಿರಿ. ಯೆರೆಮಿಯ 29:13

 ಅವರು ಕರೆಯುವದಕ್ಕಿಂತ ಮುಂಚೆ ನಾನು ಉತ್ತರ ಕೊಡುವೆನು ಅವರು ಇನ್ನೂ ಮಾತಾಡುತ್ತಿರುವಾಗಲೇ ನಾನು ಕೇಳಿಸಿಕೊಳ್ಳುವೆನು.ಯೆಶಾಯ  65:24

 ಆದ ಕಾರಣ ನಾನು ನಿಮಗೆ ಹೇಳುವದೇನಂದರೆ–ನೀವು ಪ್ರಾರ್ಥನೆ ಮಾಡುವಾಗ ಯಾವವುಗಳನ್ನು ಆಶಿಸುತ್ತೀರೋ ಅವು ನಿಮಗೆ  ಸಿಕ್ಕುವವೆಂದು ನಂಬಿರಿ; ಮತ್ತು ಅವುಗಳನ್ನು ನೀವು ಹೊಂದುವಿರಿ. ಮಾರ್ಕನು 11:24

 ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ  ಧೈರ್ಯದಿಂದ ಕೃಪಾ ಸಿಂಹಾಸನದ ಬಳಿಗೆ ಬರೋಣ. ಇಬ್ರಿಯರಿಗೆ 4:16

 ನೀವು ಆತ್ಮ ಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧ ವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ  ಸ್ಥಿರಚಿತ್ತರಾಗಿದ್ದು ಪರಿಶುದ್ಧರೆಲ್ಲರ ವಿಷಯದಲ್ಲಿ ವಿಜ್ಞಾಪನೆಮಾಡುತ್ತಾ ಎಚ್ಚರವಾಗಿರ್ರಿ. ಎಫೆಸದವರಿಗೆ 6:18

 ದಿಕ್ಕಿಲ್ಲದವನ ಪ್ರಾರ್ಥನೆಗೆ ಕಿವಿಗೊಡುತ್ತಾನೆ; ಅವರ ಪ್ರಾರ್ಥನೆಯನ್ನು ತಿರಸ್ಕರಿ ಸುವದಿಲ್ಲ. ಕೀರ್ತನೆಗಳು 102:17

 ನಾನು ಕರ್ತನನ್ನು ಪ್ರೀತಿ ಮಾಡುತ್ತೇನೆ.ಆತನು ನನ್ನ ಸ್ವರವನ್ನೂ ವಿಜ್ಞಾಪನೆಯನ್ನೂ ಕೇಳಿದ್ದಾನೆ. ಆತನು ನನ್ನ ಮೊರೆಯನ್ನು ಆಲಿಸಿದ್ದರಿಂದ  ನಾನು ಜೀವದಿಂದಿರುವ ವರೆಗೂ ಆತನನ್ನೇ ಬೇಡುವೆನು. ಕೀರ್ತನೆಗಳು 116:1, 2

ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನಿಮಗೆ ಬೇಕಾದದ್ದನ್ನು ಬೇಡಿಕೊಳ್ಳಿರಿ, ನಿಮಗೆ ಅದು ದೊರೆಯುವದು.  ಯೋಹಾನನು 15:7

 ನೀವು ಇದುವರೆಗೆ ನನ್ನ ಹೆಸರಿನಲ್ಲಿ ಏನೂ ಬೇಡಿಕೊಳ್ಳಲಿಲ್ಲ; ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಆಗ ನಿಮ್ಮ ಆನಂದವು  ಪರಿಪೂರ್ಣವಾಗುವದು. ಯೋಹಾನನು 16:23, 24

 ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು  ಶಕ್ತನಾದಾತನಿಗೆ ಎಫೆಸದವರಿಗೆ 3:20

 ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆ; ನಾನು ನಿನ್ನನ್ನು ತಪ್ಪಿಸಿಬಿಡುವೆನು; ಆಗ ನನ್ನನ್ನು ಘನಪಡಿಸುವಿ. ಕೀರ್ತನೆಗಳು 50:15

 ಕರ್ತನು ಸಿಕ್ಕುವ ಕಾಲದಲ್ಲಿ ಆತನನ್ನು ಹುಡುಕಿರಿ; ಆತನು ಸವಿಾಪವಾಗಿರುವಾಗಲೇ ಆತನನ್ನು ಕರೆಯಿರಿ. ಯೆಶಾಯ 55:6

Categories: Promise verses

8 comments

 1. Joslin says:

  Praise the Lord .

 2. mary veena says:

  Praise the Lord manage yalla sikkithu endu nambuthene

 3. Gods one child says:

  Amen.price the lord

 4. Madhusudan hc says:

  Amen
  Hellelua
  I love you Jesus
  Praise the lord

 5. kiran says:

  Thank you Jesus
  Amen

 6. Vinodakumar says:

  Thank you jesus i live u jesus amen

 7. Harisha says:

  Amen thank you Lord

 8. Abhilash says:

  Praise the lord

Comments

Your email address will not be published. Required fields are marked *

WhatsApp us