Level 29 ಬೈಬಲ್ ಕ್ವಿಜ್

281. ಅದ್ಮ ಮತ್ತು ಜೆಬೋಯಾಮಿನ ಪಟ್ಟಣಗಳಿಗೆ ಏನಾಯಿತು?

ಬೆಂಕಿಯಿಂದ ನಾಶವಾಯಿತು ( ಧರ್ಮೋ 29:23)

282. ನಿಮ್ಮನ್ನು ಸಾಗಿಸಿ ಕಳುಹಿಸಿದ ಪಟ್ಟಣದ ಕ್ಷೇಮವೇ ನಿಮ್ಮ ಕ್ಷೇಮ ಎಂದು ಯಾವ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ?

ಯೆರೆಮೀಯ

283. ಯಾಕೋಬನ ಪತ್ರಿಕೆಯಲ್ಲಿ ಯಾವುದನ್ನು ಸೂಚಿಸಿಲ್ಲ?

ಕ್ರಿಸ್ತನ ಯಾತನೆ, ಮರಣ ಮತ್ತು ಪುನರುತ್ಥಾನ ( ಯಾಕೋಬ 1)

284. ಒಣಗಿದ ಎಲುಬುಗಳ ತಗ್ಗಿಗೆ ನಡೆಸಲ್ಪಟ್ಟ ಪ್ರವಾದಿಯ ಹೆಸರೇನು?

ಯೆಹೆಜ್ಕೇಲನು

285. ಯೂತಿಕನು ಎಲ್ಲಿ ಕಿಟಕಿಯಿಂದ ಬಿದ್ದನು?

ತ್ರೋವ (ಅಪೋ 20:6-9)

286. ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳ ಹಿಡಿಯಲಾರದಷ್ಟು ಸುವರಗಳನ್ನು ಸುರಿಸುವೆನು ಎಂದು ಯಾವ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ?

ಮಲಾಕಿಯ

287. ಎಲ್ಲಾ ಮರಗಳು ಮುಳ್ಳಿನ ಗಿಡವನ್ನು ನಮ್ಮನ್ನು ಆಳುವ ರಾಜನಾಗು ಎಂದು ಕೇಳುವ ಸಾಮ್ಯವು ಯಾವ ಪುಸ್ತಕದಲ್ಲಿ ಕಂಡುಬರುತ್ತದೆ?

ನ್ಯಾಯಸ್ಥಾಪಕರು (ನ್ಯಾಯ 9:8-14)

288. ಉಜ್ಜೀಯನ ಕಾಲದಲ್ಲಿ ಆಗುವ ಭೂಕಂಪವನ್ನು ಸೂಚಿಸಿದ ಪ್ರವಾದಿ ಯಾರು?

ಆಮೋಸ (ಆಮೋಸ1:1)

289. “ನನ್ನ ಪ್ರಾಣದಂತಿರುವನು” ಎಂದು ಪೌಲನು ಯಾರನ್ನು ವರ್ಣಿಸಿದ್ದಾನೆ?

ಓನೇಸೀಮನು (ಫಿಲೋ 1:10-12)

290. ಕಪ್ಪು ಕುದುರೆಯ ಮೇಲೆ ಕುಳಿತಿದ್ದವನು ಏನು ಮಾಡಲು ಬಂದನು? (ಪ್ರಕಟಣೆ 6:5)

ಮಿಡತೆಗಳು ಮತ್ತು ಬರಗಾಲವನ್ನು ಬರಮಾಡುವುದು (ಪ್ರಕ 6:5)