Level 47 ಬೈಬಲ್ ಕ್ವಿಜ್

461. ಯೇಸುವನ್ನು ಪ್ರಶ್ನಿಸಲು ಮಹಾಯಾಜಕರೂ ಮತ್ತು ಕಾಯಫನು ಆತನನ್ನು ಎಲ್ಲಿಗೆ ಕರೆದುಕೊಂಡು ಹೋದರು?

ಕಾಯಫನ ಮನೆಗೆ

462. ಲ್ಯಾಟಿನ್ ಭಾಷೆಯಲ್ಲಿ ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳಕ್ಕೆ ಕಲ್ವಾರಿ ಎಂದು ಹೇಳುತ್ತಾರೆ. ಆದರೆ ಇಬ್ರಿಯ ಭಾಷೆಯಲ್ಲಿ ಈ ಸ್ಥಳಕ್ಕೆ ಏನು ಹೇಳುತ್ತಾರೆ?

ಗೋಲ್ಗೊಥಾ

463. ಯೇಸುವಿನ ಗೊಡವೆಗೆ ಹೋಗಬಾರದೆಂದು ಪಿಲಾತನನ್ನು ಎಚ್ಚರಿಸಿದ್ದು ಯಾರು?

ಪಿಲಾತನ ಹೆಂಡತಿ (ಮತ್ತಾ. 27:19)

464. ಯೇಸುವಿಗಾಗಿ ಆತನ ಶಿಲುಬೆಯನ್ನು ಹೊತ್ತುಕೊಂಡು ಹೋಗಲು ಯಾರಿಗೆ ಹೇಳಿದರು?

ಕುರೇನ್ ಪಟ್ಟಣದ ಸಿಮೋನನು (ಮಾರ್ಕ 15:21)

465. ಯೇಸು ಸ್ವಾಮಿಯನ್ನು ಶಿಲುಬೆಗೆ ಹಾಕಿದ ಮೇಲೆ ಯಾವ ಸಮಯಕ್ಕೆ ಭೂಮಿಯ ಮೇಲೆ ಕತ್ತಲೆ ಆವರಿಸಿತು?

ಮೂರು ಗಂಟೆಯವರೆಗೆ (ಮತ್ತಾ 27:45)

466. ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ಸಮಾಧಿ ಮಾಡಲು ಕೊಡಬೇಕೆಂದು ಯಾರು ಕೇಳಿದರು?

ಅರಿಮಥಾಯದ ಯೋಸೇಫನು (ಮತ್ತಾ 27:57-60)

467. ಈ ಕೆಳಗಿನ ವಾಕ್ಯಗಳಲ್ಲಿ ಯಾವುದು ತಪ್ಪು?

ಒಂದು ನೂರು ಪೌಂಡುಗಳಷ್ತು ಸುಗಂಧದ್ರವ್ಯಗಳನ್ನು ಆತನ ದೇಹಕ್ಕೆ ಹಚ್ಚಿದರು.

468. ಸಬ್ಬತ್ ದಿನದ ಬೆಳಗಿನ ಜಾವದಲ್ಲಿ ಯೇಸುವಿನ ಸಮಾಧಿಯ ಬಳಿ ಬಂದ ಮೊದಲನೆಯ ವ್ಯಕ್ತಿ ಯಾರು?

ಮಗ್ದಲದ ಮರಿಯಳು

469. ಪೇತ್ರನು ಮಹಾಯಾಜಕನ ಸೇವಕನ ಕಿವಿಯನ್ನು ಕತ್ತರಿಸಿದನು, ಅವನ ಹೆಸರೇನು?

ಮಲ್ಕನು

470. ಯೇಸು ಸ್ವರ್ಗಾರೋಹಣಕ್ಕೆ ಮೊದಲು ಎಷ್ಟು ದಿನಗಳ ವರೆಗೆ ತನ್ನ ಶಿಷ್ಯರಿಗೆ ಕಾಣಿಸಿಕೊಳ್ಳುತ್ತಿದ್ದನು?

ನಾಲ್ವತ್ತು ದಿನಗಳ ವರೆಗೆ