Level 51 ಬೈಬಲ್ ಕ್ವಿಜ್

501. ದೇವರು ಮೋಶೆಯನ್ನು ಕರೆದಾಗ ಯಾವ ಸೂಚನೆಗಳನ್ನು ಕೊಟ್ಟನು?

ಕೋಲನ್ನು ಹಾವಾಗಿ ಬದಲಾಯಿಸಿದನು (ವಿಮೋ 4:2-3)

502. ಕೆಳಗಿನ ಪಟ್ಟಿಯಲ್ಲಿರುವ ಯಾವ ಬಾಧೆಗಳನ್ನು ದೇವರು ಬರಮಾಡಿದನು?

ಕಪ್ಪೆಗಳು (ವಿಮೋ.8:6)

503. ಐಗುಪ್ತ್ಯರ ಸೈನ್ಯವನ್ನು ಕೆಂಪು ಸಮುದ್ರದಲ್ಲಿ ಮುಳುಗಿಸುವ ಮೊದರು ದೇವರು ಅವರಿಗೆ ಏನು ಮಾಡಿದನು?

ದೇವರು ಐಗುಪ್ತ್ಯರ ರಥಗಳ ಚಕ್ರಗಳನ್ನು ತೆಗೆದುಬಿಟ್ಟನು. (ವಿಮೋ.14:25)

504. “ಮನ್ನ” ಯಾವ ರುಚಿಯನ್ನು ಹೋಲುತ್ತಿತ್ತು?

ಜೇನುತುಪ್ಪ ಕಲಸಿದ ದೊಸೆಯಂತಿತ್ತು ()ವಿಮೋ.16:31)

505. ಮೋಶೆಯ ಮಾವನಾದ ಇತ್ರೋನನು ಮೋಶೆಗೆ ಯಾವ ಸಲಹೆ ಕೊಟ್ಟನು?

ಜನರ ನ್ಯಾಯ ತೀರಿಸಲು ಅಧಿಕಾರಿಗಳನ್ನು ನೇಮಿಸು (ವಿಮೋ.18:21-22)

506. ಎಪ್ಪತ್ತು ಮಂದಿ ಹಿರಿಯರೊಡನೆ ದೇವರ ದರ್ಶನಕ್ಕೆ ಹೋದ ನಾಲ್ವರು ಯಾರು?

ಮೋಶೆ, ಆರೋನ್, ನಾದಾಬ್ ಮತ್ತು ಅಬೀಹು (ವಿಮೋ.24:9)

507. ಮೋಶೆಯು ಬೆಟ್ಟದ ಮೇಲೆ ಎಷ್ತು ದಿನಗಳಿದ್ದನು?

ನಾಲ್ವತ್ತು ಹಗಲಿರುಳು ಇದ್ದನು (ವಿಮೋ.24:18)

508. ದೇವರ ಆಜ್ಞೆಗನುಸಾರವಾಗಿ ಯಾರು ದೀಕ್ಷಾವಸ್ತ್ರಗಳನ್ನು ಧರಿಸಿದರು?

ಆರೋನನು (ವಿಮೋ.28:2)

509. ದಶಾಜ್ಞೆಗಳು ವಿಮೋಚನಾಕಾಂಡದ ಯಾವ ಅಧ್ಯಾಯದಲ್ಲಿದೆ?

ಇಪ್ಪತ್ತನೆಯ ಅಧ್ಯಾಯ (ವಿಮೋ.20)

510. ನೆಹೆಮೀಯನು ಎಂಬ ಹೆಸರಿನ ಅರ್ಥವೇನು?

ದೇವರಿಂದ ಸಮಾಧಾನ ಪಡೆದವನು