Level 52 ಬೈಬಲ್ ಕ್ವಿಜ್

511. ನೆಹೆಮೀಯನು ಯಾವ ಕುಲಕ್ಕೆ ಸೇರಿದವನು?

ಯೂದನ ಕುಲ

512. ಸೆರೆಗೆ ಹೋಗುವ ಮೊದಲು ನೆಹೆಮೀಯನ ಕುಟುಂಬದವರು ಯಾವ ಊರಿನಲ್ಲಿ ವಾಸವಾಗಿದ್ದರು?

ಯೆರೂಸಲೇಮಿನಲ್ಲಿ (ನೆಹೆ.2:3,5)

513. ನೆಹೆಮೀಯನ ತಂದೆಯ ಹೆಸರೇನು?

ಹಕಲ್ಯ (ನೆಹೆ.1:1)

514. ಯಾವ ಅರಸನ ಅರಮನೆಯಲ್ಲಿ ನೆಹೆಮೀಯನು ಪಾನ ಸೇವಕನಾಗಿದ್ದನು?

ಅರ್ತಷಸ್ತನು (ನೆಹೆ.2:1)

515. ನೆಹೆಮೀಯನು ಯಾವ ಪಟ್ಟಣ ಹಾಳಾಯಿತು ಎಂದು ಕೇಳಿ ಬಹಳ ದುಃಖಪಟ್ಟನು?

ಯೆರೂಸಲೇಮ್

516. ನೆಹೆಮೀಯನ ಸಹೋದರನ ಹೆಸರೇನು?

ಹನಾನೀಯನು (ನೆಹೆ.1:2)

517. ನೆಹೆಮೀಯನ ಪುಸ್ತಕದ ಮೊದಲು ಬೈಬಲ್ಲಿನಲ್ಲಿ ಯಾವ ಪುಸ್ತಕವಿದೆ?

ಎಜ್ರನು

518. ನೆಹೆಮೀಯನು ಯೆರೂಸಲೇಮಿನ ಗೋಡೆಗಳನ್ನು ಕಟ್ಟಿಸಿ ತಾನು ಬಂದ ಕಾರ್ಯವನ್ನು ಮುಗಿಸಿದನೋ?

ಹೌದು (ನೆಹೆ.6-7 ಅಧ್ಯಾಯಗಳು)

519. ಬೈಬಲ್ಲಿನಲ್ಲಿ ನೆಹೆಮೀಯನ ಪುಸ್ತಕದ ನಂತರ ಯಾವ ಪುಸ್ತಕವಿದೆ?

ಎಸ್ತೇರಳು

520. ವಷ್ಟಿ ರಾಣಿಯು ಏನು ಮಾಡಿದ್ದರಿಂದ ರಾಜನಿಗೆ ಬಹಳ ಕೋಪ ಬಂತು?

ರಾಜಾಜ್ಞೆಯನ್ನು ಮೀರಿ ಬರುವದಿಲ್ಲ ಎಂದಳು (ಎಸ್ತೇರಳು 1:10-12)

WhatsApp us