Level 54 ಬೈಬಲ್ ಕ್ವಿಜ್

531. ಯೋಬನ ತಾಳ್ಮೆಯ ವಿಷಯ ಹೊಸ ಒಡಂಬಡಿಕೆಯ ಯಾವ ಪುಸ್ತಕದಲ್ಲಿ ಬರೆದಿದ್ದಾರೆ?

ಯಾಕೋಬನ ಪತ್ರಿಕೆ (5:11)

532. ಯೋಬನ ಪುಸ್ತಕದ ಮುಖ್ಯ ಸಂದೇಶವೇನು?

ದೇವರು ಆಪತ್ಕಾಲದಲ್ಲಿ ನಮ್ಮೊಂದಿಗಿದ್ದಾನೆ (42:11-14)

533. ಯೋಬನ ಸ್ನೇಹಿತರ ಹೆಸರೇನು?

ಎಲೀಫಜನು, ಬಿಲ್ದದನು, ಚೋಫರನು (2:1)

534. ಯೋಬನು ಎಲ್ಲಿ ವಾಸಿಸುತ್ತಿದ್ದನು?

ಊಚ್ (1:1)

535. ಎಲೀಹುವಿನ ತಂದೆಯ ಹೆಸರೇನು?

ಬರಕೇಲನು (32:2)

536. ಬಾಧೆ ದುಃಖಾನುಭವಗಳು ಪಾಪದ ದೆಸೆಯಿಂದ ಬರುತ್ತವೆ ಎಂದು ಯೋಬನ ಮಿತ್ರರು ಹೇಳಿದರು. ಎಲೀಹು ಏನೆಂದನು?

ಮನುಷ್ಯರು ಪಾಪ ಮಾಡದಿರಲೆಂದು ಬಾಧೆಗಳು ಬರುತ್ತವೆ (33:8-33)

537. ದೇವರು ಯೋಬನೊಂದಿಗೆ ಮಾತಾಡಿದ್ದು ಹೇಗೆ?

ಬಿರುಗಾಳಿಯೊಳಗಿಂದ (40:6)

538. ಸೈತಾನನ ವಿಷಯದಲ್ಲಿ ನಾವು ಯೋಬನ ಬಗ್ಗೆ ತಿಳಿದುಕೊಳ್ಳುವದೇನೆಂದರೆ;

ಮನುಷ್ಯರನ್ನು ಬಾಧಿಸಲು ದೇವರಿಂದ ಅಪ್ಪಣೆ ಹೊಂದಿದವನು

539. ದೇವರು ಯೋಬನ ಆಸ್ತಿ ಐಶ್ವರ್ಯಗಳನ್ನು ತಿರುಗಿ ಕೊಟ್ಟದ್ದು ಯಾವಾಗ?

ತನ್ನ ಸ್ನೇಹಿತರಿಗಾಗಿ ಪ್ರಾರ್ಥನೆ ಮಾಡಿದಾಗ (ಮಾಡಿದ ಮೇಲೆ) (42:8-10)

540. ಯಾವ ಪ್ರಸಿದ್ಧ ಕೀರ್ತನೆಯಲ್ಲಿ ಈ ವಾಕ್ಯ ಕಂಡುಬರುತ್ತದೆ? “ಆತನು ಹಸುರುಗಾವಲುಗಳಲ್ಲಿ ನನ್ನನ್ನು ತಂಗಿಸುತ್ತಾನೆ”

ಕೀರ್ತನೆ 23:2